ನಿರ್ದೇಶಕ ಎಸ್. ನಾರಾಯಣ್ ಹೆಸರಲ್ಲಿ ವಂಚನೆಗೆ ಯತ್ನ; ಹಣ ಕಳೆದುಕೊಳ್ಳಬೇಡಿ ಹುಷಾರ್
‘ಯಾರಾದರೂ ಹಣ ಕಳೆದುಕೊಂಡರೆ ನಾನು ಜವಾಬ್ದಾರನಲ್ಲ. ಹಾಗಾಗಿ ದಯವಿಟ್ಟು ನನ್ನ ಫೇಸ್ಬುಕ್ಗೆ ಯಾರೂ ಸ್ಪಂದಿಸಬೇಡಿ’ ಎಂದು ನಿರ್ದೇಶಕ ಎಸ್. ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಹೆಸರು ಬಳಸಿಕೊಂಡು ಜನರನ್ನು ಯಾಮಾರಿಸುವ ಯತ್ನ ನಡೆದಿದೆ. ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಜನರಿಂದ ಹಣ ಕೇಳುತ್ತಿದ್ದಾರೆ ಕಿಡಿಗೇಡಿಗಳು. ಇದು ಎಸ್. ನಾರಾಯಣ್ ಗಮನಕ್ಕೂ ಬಂದಿದೆ. ಹಾಗಾಗಿ ಅವರು ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಎಚ್ಚರಿಕೆ ನೀಡಿದ್ದಾರೆ. ಯಾರೂ ಮೋಸಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
‘ನನ್ನ 5ಡಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಅದಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ಬಹಳಷ್ಟು ಫೋನ್ ಕರೆ, ಸಂದೇಶಗಳು ಬಂದಿದೆ. ಈ ಮಧ್ಯೆ ಯಾರೋ ನನ್ನ ಫೇಸ್ಬುಕ್ ಹ್ಯಾಕ್ ಮಾಡಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ಜನರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಹಾಗಾಗಿ ನಾನು ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಫೇಸ್ಬುಕ್ ಮೂಲಕ ಸಂಪರ್ಕಮಾಡಿ ಯಾರಾದರೂ ಹಣ ಕಳೆದುಕೊಂಡರೆ ನಾನು ಜವಾಬ್ದಾರನಲ್ಲ. ಹಾಗಾಗಿ ದಯವಿಟ್ಟು ನನ್ನ ಫೇಸ್ಬುಕ್ಗೆ ಯಾರೂ ಸ್ಪಂದಿಸಬೇಡಿ’ ಎಂದು ಎಸ್. ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
WhatsApp: ಯಾರು ಬೇಕಿದ್ದರೂ ನಿಮ್ಮ ವಾಟ್ಸ್ಆ್ಯಪ್ ಹ್ಯಾಕ್ ಮಾಡಬಹುದು; ಸ್ಕ್ರೀನ್ ಶೇರ್ ಮಾಡುವಾಗ ಇರಲಿ ಎಚ್ಚರ!
Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಫೇಸ್ಬುಕ್ ಹ್ಯಾಕ್; ಯಾರ ಮೇಲಿದೆ ಅನುಮಾನ?