ಐಪ್ಯಾಡ್ಗೆ ಸೆಡ್ಡು ಹೊಡೆಯಲು ಫೋನ್ಗಳ ನಂತರ ಟ್ಯಾಬ್ಲೆಟ್ ತಯಾರಿಸಿ ಮಾರ್ಕೆಟ್ಗೆ ಬಿಡುಗಡೆ ಮಾಡಿದ ನೊಕಿಯಾ
ಟ್ಯಾಬ್ಲೆಟ್ ನಲ್ಲಿ ಮಕ್ಕಳಿಗಾಗಿ ಕಿಡ್ಸ್ ಮೋಡ್ ಫೀಚರ್ ಸಹ ಇದೆ. ಮಕ್ಕಳಿಗಾಗಿ ಕೇವಲ ಸೇಫ್ ಕಂಟೆಂಟ್ ಲಭ್ಯವಾಗುವಂಥ ಸೆಟ್ಟಿಂಗ್ ಇದರಲ್ಲಿ ಮಾಡಲಾಗಿದೆ.
ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಮುಂಚೂಣಿಯ ಕಂಪನಿಗಳ ಪೈಕಿ ಒಂದೆಂದು ಗುರುತಿಸಿಕೊಳ್ಳುವ ನೊಕಿಯಾ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಹಿಂದೆ ಯಾವತ್ತೂ ಟ್ಯಾಬ್ಲೆಟ್ ತಯಾರಿಸುವ ಗೋಜಿಗೆ ಹೋಗಿರದ ಸಂಸ್ಥೆಯು ಈಗ ನೊಕಿಯ ಟಿ20ಯನ್ನು ತಯಾರಿಸಿ ಮಾರ್ಕೆಟ್ಗೆ ಬಿಡುಗಡೆ ಮಾಡಿದೆ. ಮೊದಲ ಟ್ಯಾಬ್ಲೆಟ್ ಅನ್ನು ಕಂಪನಿಯು ಬುಧವಾರದಂದು ಬಿಡುಗಡೆ ಮಾಡಿತು. ಹೊಸ ವೆಂಚರ್ ನೊಂದಿಗೆ ಅದು ಆಪಲ್ ಸಂಸ್ಥೆಯ ಐಪ್ಯಾಡ್ಗೆ ಸವಾಲೊಡ್ಡಿದೆ. ಕಂಪನಿಯ ಮೂಲಗಳ ಪ್ರಕಾರ ಟಿ20 ಟ್ಯಾಬ್ಲೆಟ್ ಗೂಗಲ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ನಡೆಯುತ್ತದೆ ಮತ್ತು 10.4 ಇಂಚು 2ಕೆ ಡಿಸ್ಪ್ಲೇಯೊಂದಿಗೆ ಬರುತ್ತದೆ. ಅದರೊಂದಿಗೆ ಟ್ಯಾಬ್ಲೆಟ್ಗೆ 8,200 ಮಿಲಿಆಂಪ್/ಗಂಟೆ ಬ್ಯಾಟರಿ ಸಪೋರ್ಟ್ ಇದೆ.
ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ, 15 ಗಂಟೆಗಳ ಕಾಲ ನಡೆಸಬಹುದೆಂದು ಕಂಪನಿ ಹೇಳಿದೆ. ಸದಾ ಫೋನಿನ ಗೀಳು ಇರುವವರು ಯೂಟ್ಯೂಬ್ ಮತ್ತು ನೆಟ್ಪ್ಲಿಕ್ಸ್ ಗಳಂಥ ಪ್ಲಾಟ್ಫಾರ್ಮ್ಗಳಿಂದ 10 ಗಂಟೆಗಳ ಕಾಲ ಸತತವಾಗಿ ವಿಡಿಯೋಗಳನ್ನು ನೋಡಬಹುದೆಂದು ಫಿನ್ಲೆಂಡ್ ಮೂಲದ ಸಂಸ್ಥೆ ಹೇಳಿದೆ.
ಟ್ಯಾಬ್ಲೆಟ್ ನಲ್ಲಿ ಮಕ್ಕಳಿಗಾಗಿ ಕಿಡ್ಸ್ ಮೋಡ್ ಫೀಚರ್ ಸಹ ಇದೆ. ಮಕ್ಕಳಿಗಾಗಿ ಕೇವಲ ಸೇಫ್ ಕಂಟೆಂಟ್ ಲಭ್ಯವಾಗುವಂಥ ಸೆಟ್ಟಿಂಗ್ ಇದರಲ್ಲಿ ಮಾಡಲಾಗಿದೆ. ಟ್ಯಾಬ್ಲೆಟ್ ನಲ್ಲಿ 5 ಮೆಗಾ ಪಿಕ್ಸೆಲ್ ಫ್ರಂಟ್ ಕೆಮೆರಾ ಮತ್ತು 8 ಮೆಗಾ ಪಿಕ್ಸೆಲ್ ರೇರ್ ಕೆಮೆರಾಗಳಿವೆ.
ಅಂದಹಾಗೆ, ನೊಕಿಯ ಟಿ20 ಟ್ಯಾಬ್ಲೆಟ್ ಬೆಲೆಯನ್ನು ಸಹ ತಿಳಿದುಕೊಂಡು ಬಿಡುವ. 3 ಜಿಬಿ ಟ್ಯಾಬ್ಲೆಟ್ ಬೆಲೆ ಸುಮಾರು ರೂ. 18,000 ಆದರೆ 4 ಜಿಬಿ ಟ್ಯಾಬ್ಲೆಟ್ ಬೆಲೆ ರೂ. 20,000 ಗಳಷ್ಟಾಗಲಿದೆ.