ಕೇವಲ 29 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಯಾದಗಿರಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ!
ಶುಕ್ರವಾರ ಲಕ್ಷ್ಮಿಯ ದಿನವಾಗಿರುವುದರಿಂದ ಅಂದು ಗುಡಿಯಲ್ಲಿ ಪೂಜೆಗಳು ನಡೆಯುತ್ತವೆ ಮತ್ತು ನೂರಾರು ಭಕ್ತರು ಭೇಟಿ ನೀಡಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಲಕ್ಷ್ಮಿದೇವಿಗೆ ಹೇಳಿಕೊಳ್ಳುತ್ತಾರೆ.
ಯಾದಗಿರಿ ನಗರದಲ್ಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು ತೀರ ಇತ್ತೀಚಿಗಾದರೂ (1992ರಲ್ಲಿ ಇದರ ನಿರ್ಮಾಣವಾಗಿದೆ) ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ಸ್ಥಳೀಯರು ಹೇಳುತ್ತಾರೆ. ಗುಡಿ ನಿರ್ಮಾಣಗೊಳ್ಳುವ ಹಿಂದೆ ಒಂದು ಕತೆಯಿದೆ. ಮಹಾಲಕ್ಷ್ಮಿ ಮಂದಿರ ಇರುವ ಜಾಗವು ಮೊದಲು ರೈತನೊಬ್ಬನಿಗೆ ಸೇರಿದ ಸಾಗುವಳಿ ಭೂಮಿಯಾಗಿತ್ತು. ಅದೊಂದು ದಿನ ಅವನು ಜಮೀನಿನಲ್ಲಿ ಕೆಲಸ ಮಾಡಿತ್ತಿದ್ದಾಗ ಅವನಿಗೆ ಕಲ್ಲಿನ ರೂಪದಲ್ಲಿ ಲಕ್ಷ್ಮಿ ದೇವತೆ ಕಾಣಿಸಿಕೊಂಡು, ಅ ಕಲ್ಲಿಗೆ ಪ್ರತಿದಿನ ಪೂಜೆ ಸಲ್ಲಿಸುವಂತೆ ಸೂಚಿಸಿ ಮುಂದೊಂದು ದಿನ ಈ ಜಾಗದಲ್ಲಿ ದೊಡ್ಡ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದಳಂತೆ. ಅಂದಿನಿಂದ ರೈತನು ಆ ಕಲ್ಲನ್ನು ಮರವೊಂದರ ಕೆಳಗಿಟ್ಟು ಪ್ರತಿದಿನ ಪೂಜಿಸಲಾರಂಭಿಸಿದ.
ಅದಾದ ನೂರಾರು ವರ್ಷಗಳ ನಂತರ ಅಂದರೆ 1992ರಲ್ಲಿ ಭಕ್ತರು ಒಂದುಗೂಡಿ ಈ ಸ್ಥಳದಲ್ಲಿ ಮಹಾಲಕ್ಷ್ಮಿ ದೇವತೆ ಮಂದರ ನಿರ್ಮಾಣ ಮಾಡಿದ್ದಾರೆ. ಶುಕ್ರವಾರ ಲಕ್ಷ್ಮಿಯ ದಿನವಾಗಿರುವುದರಿಂದ ಅಂದು ಗುಡಿಯಲ್ಲಿ ಪೂಜೆಗಳು ನಡೆಯುತ್ತವೆ ಮತ್ತು ನೂರಾರು ಭಕ್ತರು ಭೇಟಿ ನೀಡಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಲಕ್ಷ್ಮಿದೇವಿಗೆ ಹೇಳಿಕೊಳ್ಳುತ್ತಾರೆ. ಈಗ ನವರಾತ್ರಿಯ ಸಮಯವಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿದೆ.
ಪ್ರತಿ ವರ್ಷ ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನಡೆಯುತ್ತದೆ. ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಮಹಿಳೆಯರ ಉಸ್ತುವಾರಿಯಲ್ಲೇ ಇಲ್ಲಿ ರಥೋತ್ಸವ ನಡೆಯುತ್ತದೆ. ಹಾಗೆಯೇ, ಕಾರ್ತೀಕ ಮಾಸದಲ್ಲಿ ಭಜನೆ, ಪುರಾಣ-ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ: Viral Video: ಗೆಳೆಯನ ಮದುವೆ ಸಮಾರಂಭದಲ್ಲಿ ಸ್ನೇಹಿತರ ಮೋಜು ಮಸ್ತಿ; ನಗು ನಗುತ್ತಾ ಆಚರಿಸಿದ ಅರಿಶಿಣ ಶಾಸ್ತ್ರದ ವಿಡಿಯೋ ನೋಡಿ