ತಾನಾಡಿದ ಮಾತನ್ನು ಉಳಿಸಿಕೊಂಡಿರುವ ಬೆನೆಲ್ಲಿ ಹೊಸ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ಭಾರತದಲ್ಲಿ ಲಾಂಚ್ ಮಾಡಿದೆ

ಹೊಸ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ಗೆ 250 ಸಿಸಿ, 4-ಸ್ಟ್ರೋಕ್ ಮತ್ತು ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9250 ಆರ್ ಪಿಎಮ್ ನಲ್ಲಿ 25.8 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 8000 ಆರ್ಪಿಎಮ್ ನಲ್ಲಿ 21.1 ಎನ್ ಎಮ್ ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ.

TV9kannada Web Team

| Edited By: Arun Belly

Dec 17, 2021 | 4:23 PM

ಬೆನೆಲ್ಲಿ ಕಂಪನಿಯು ತಾನು ಈ ಹಿಂದೆ ಮಾಡಿದ ವಾಗ್ದಾನದ ಪ್ರಕಾರ ಭಾರತೀಯ ಮಾರ್ಕೆಟ್ ಗೆ ಸೂಕ್ತವೆನಿಸುವ ಮತ್ತು ಮಿತವ್ಯಯಿ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ಅನ್ನು ಲಾಂಚ್ ಮಾಡಿದೆ. ಕೆಲ ದಿನಗಳ ಹಿಂದೆ, ರಾಯಲ್ ಎನ್ಫೀಲ್ಡ್ ಹಿಮಾಲಯನ್ ಗೆ ಸರಿಸಾಟಿಯಾಗುವ ಮೊಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಬೆನೆಲ್ಲಿ ತನ್ನ ಮಾತನ್ನು ಉಳಿಸಿಕೊಡಿದೆ. ಅಂದಹಾಗೆ, ಬೆಲೆಯ ವಿಷಯದಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ ಗೆ ಹೋಲಿಸಿದರೆ, ಬೆನೆಲ್ಲಿಯ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ನಿಸ್ಸಂದೇಹವಾಗಿ ದುಬಾರಿ. ಹಿಮಾಲಯನ್ ಬೈಕ್ ಬೆಲೆ ರೂ 1.66 ಲಕ್ಷವಾದರೆ (ಎಕ್ಸ್ ಶೋರೂಮ್) ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ನಿಮಗೆ ಅದರ ಹೆಸರಲ್ಲೇ ಇರುವ ಹಾಗೆ, ರೂ. 2.51 ಲಕ್ಷಗಳಿಗೆ (ಎಕ್ಸ್ ಶೋರೂಮ್) ಸಿಗುತ್ತದೆ.

ಹೊಸ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ಗೆ 250 ಸಿಸಿ, 4-ಸ್ಟ್ರೋಕ್ ಮತ್ತು ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9250 ಆರ್ ಪಿಎಮ್ ನಲ್ಲಿ 25.8 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 8000 ಆರ್ಪಿಎಮ್ ನಲ್ಲಿ 21.1 ಎನ್ ಎಮ್ ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ.

ಮತ್ತೊಂದೆಡೆ, ಹಿಮಾಲಯನ್ ಬೈಕ್ 6,500 ಆರ್ ಪಿ ಎಮ್ ನಲ್ಲಿ 24.3 ಪಿಎಸ್ ಪವರ್ ಮತ್ತು 4,500 ಆರ್ ಪಿ ಎಮ್ ನಲ್ಲಿ 32 ಎನ್ ಎಮ್ ಪೀಕ್ ಟಾರ್ಕ್ ಹೊರಹಾಕುವ 411 ಸಿಸಿ ಸಾಮರ್ಥ್ಯದ ದೊಡ್ಡ ಎಂಜಿನ್ ಹೊಂದಿದೆ. ಬೆನೆಲ್ಲಿ 6-ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದರೆ, ಹಿಮಾಲಯನ್ 5-ಸ್ಪೀಡ್ ಟ್ರಾನ್ಸ್‌ಮಿಷನ್ ಘಟಕಕ್ಕೆ ಅಳವಡಿಸಲಾಗಿದೆ.

ಹೊಸ TRK 251 ಬೈಕಿನ ಪ್ರಮುಖ ಮತ್ತು ಗಮನ ಸೆಳೆಯುವ ಅಂಶವೆಂದರೆ ಅದರ ಬೃಹತ್ ಎನ್ನಬಹುದಾದ 18-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಆಗಿದೆ. ಅಲ್ಲದೆ, ಇದು ಉತ್ತಮ ಎನ್ನಬಹುದಾದ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸಹ ಹೊಂದಿದೆ. ಹಿಮಾಲಯನ್ ಬೈಕ್ ಚಿಕ್ಕದಾದ 15-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದ್ದರೂ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ:    Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada