1966ರಲ್ಲಿ ಮೊದಲ ಬಾರಿಗೆ ವಿಶ್ವ ಸುಂದರಿಯನ್ನು ಕಂಡ ಭಾರತ ಎರಡನೇಯವರಿಗಾಗಿ 28 ವರ್ಷ ಕಾಯಬೇಕಾಯಿತು!
ವಿಶ್ವ ಸುಂದರಿ ಪಟ್ಟಕ್ಕೆ ಪಾತ್ರರಾದ ಮೊಟ್ಟ ಮೊದಲ ಭಾರತೀಯಳೆಂದರೆ ರೀಟಾ ಫಾರಿಯ 1966ರಲ್ಲಿ. ವಿಶ್ವದ ಅತಿ ಸುಂದರ ಮಹಿಳೆ ಅನಿಸಿಕೊಂಡಾಗ್ಯೂ ರೀಟಾ ಗ್ಲಾಮರ್ ಪ್ರಪಂಚಕ್ಕೆ ಕಾಲಿಡದೆ ತಮ್ಮ ವೈದ್ಯಕೀಯ ವ್ಯಾಸಂಗ ಮುಂದುವರಿಸಿದರು.
ಜಾಗತಿಕ ಸುಂದರಿ ಪಟ್ಟವನ್ನು ಧರಿಸಿ ಭಾರತಕ್ಕೆ ಮರಳಿರುವ ಹರ್ನಾಜ್ ಸಂಧು ಸೌಂದರ್ಯ ಸ್ಪರ್ಧೆಗಳ ಬಗ್ಗೆ ನಮ್ಮಲ್ಲಿ ಹೆಚ್ಚು ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಹರ್ನಾಜ್ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮೂರನೇ ಭಾರತೀಯಳಾಗಿದ್ದಾರೆ. ಅವರಿಗಿಂತ ಮೊದಲು ಲಾರಾ ದತ್ತಾ (2000) ಮತ್ತು ಸುಶ್ಮಿತಾ ಸೇನ್ (1994) ಭುವನ ಸುಂದರಿಯರಾಗಿ ಆಯ್ಕೆಯಾಗಿದ್ದರು. ಅಂದಹಾಗೆ, ಭಾರತದ 6 ಮಹಿಳೆಯರು ವಿಶ್ವ ಸುಂದರಿಯರಾಗಿ ಆಯ್ಕೆಗೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ವಿಶ್ವ ಸುಂದರಿ (ಮಿಸ್ ವರ್ಲ್ಡ್) ಮತ್ತು ಭುವನ ಸುಂದರಿಯ ಸ್ಪರ್ಧೆಗಳ ನಡುವಿನ ವ್ಯತ್ತಾಸವೇನು ಅಂತ ಇನ್ಯಾವತ್ತಾದರೂ ಚರ್ಚಿಸುವ. ಇಂದು ವಿಶ್ವಸುಂದರಿಯರಾಗಿ ಆಯ್ಕೆಯಾದ ಭಾರತೀಯರು ಯಾರು, ಅವರೆಲ್ಲ ಈಗ ಏನು ಮಾಡುತ್ತಿದ್ದಾರೆ ಅಂತ ನೋಡೋಣ.
ವಿಶ್ವ ಸುಂದರಿ ಪಟ್ಟಕ್ಕೆ ಪಾತ್ರರಾದ ಮೊಟ್ಟ ಮೊದಲ ಭಾರತೀಯಳೆಂದರೆ ರೀಟಾ ಫಾರಿಯ 1966ರಲ್ಲಿ. ವಿಶ್ವದ ಅತಿ ಸುಂದರ ಮಹಿಳೆ ಅನಿಸಿಕೊಂಡಾಗ್ಯೂ ರೀಟಾ ಗ್ಲಾಮರ್ ಪ್ರಪಂಚಕ್ಕೆ ಕಾಲಿಡದೆ ತಮ್ಮ ವೈದ್ಯಕೀಯ ವ್ಯಾಸಂಗ ಮುಂದುವರಿಸಿದರು. ಅವರೀಗ ತಮ್ಮ ಪತಿ ಡೇವಿಡ್ ಪಾವೆಲ್ ಅವರೊಂದಿಗೆ ಡಬ್ಲಿನ್ ವಾಸವಾಗಿದ್ದಾರೆ.
ಅದಾದ ಮೇಲೆ ಮತ್ತೊಬ್ಬ ವಿಶ್ವ ಸುಂದರಿಯನ್ನು ನೋಡಲು ಭಾರತ 28 ವರ್ಷ ಕಾಯಬೇಕಾಯಿತು. 1994 ರಲ್ಲಿ ಮಂಗಳೂರಿನ ಹುಡುಗಿ ಐಶ್ವರ್ಯ ರೈ ಬಚ್ಚನ್ ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಪಟ್ಟ ಧರಿಸಿದ ನಂತರ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗಲೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅತಿದೊಡ್ಡ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ಅವರನ್ನು ಮದುವೆಯಾಗಿರುವ ಐಶ್ವರ್ಯ ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.
ಅದಾದ ಮೂರು ವರ್ಷಗಳ ನಂತರ ಭಾರತ ಮತ್ತೊಬ್ಬ ವಿಶ್ವ ಸುಂದರಿಯನ್ನು ಡಯಾನಾ ಹೇಡನ್ ರೂಪದಲ್ಲಿ ಕಂಡಿತು. ಈವೆಂಟ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಡಯಾನಾ ಆಂಗ್ಲೋ ಇಂಡಿಯನ್ ಕುಟುಂಬದವರಾಗಿದ್ದಾರೆ.
1997 ರಲ್ಲಿ ಡಯಾನಾ ಫೆಮಿನಾ ಮಿಸ್ ಇಂಡಿಯ ಪ್ರಶಸ್ತಿಗೂ ಪಾತ್ರರಾಗಿದ್ದರು. ಪ್ರಶಸ್ತಿ ಗೆದ್ದ ನಂತರ ಅವರು ಸಿನಿಮಾಗಳಲ್ಲಿ ನಟಿಸಿದರು, ಮಾಡೆಲ್ ಮತ್ತು ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದರು. ಕಾಲಿನ್ ಡಿಕ್ ಹೆಸರಿನ ಅಮೆರಿಕನನ್ನು ಮದುವೆಯಾಗಿರುವ ಡಯಾನಾ ಮೂರು ಮಕ್ಕಳ ತಾಯಿ.
ಡಯಾನಾ ನಂತರ ಭಾರತಕ್ಕೆ ಮತ್ತೊಬ್ಬ ವಿಶ್ವ ಸುಂದರಿ ಸಿಕ್ಕಿದ್ದು 1999ರಲ್ಲಿ. ಕಂಪ್ಯೂಟರ್ ಸೈನ್ಸ್ ಪದವಿ ಓದುತ್ತಿದ್ದ ಯುಕ್ತಾ ಮೂಖಿ. ಇವರು ಸಿಖ್ ಮಹಿಳೆ ಮತ್ತು ಬೆಂಗಳೂರಿನೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ. 2008ರಲ್ಲಿ ಅಮೆರಿಕದ ಪ್ರಿನ್ಸಿ ಟುಲಿ ಹೆಸರಿನ ವ್ಯಕ್ತಿಯನ್ನು ಮದುವೆಯಾದ ಯುಕ್ತಾ 6 ವರ್ಷಗಳ ನಂತರ ಅವರಿಂದ ಬೇಪರ್ಟ್ಟರು. ಸಿನಿಮಾಗಳಲ್ಲಿ ನಟಿಸಿರುವ ಅವರು ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಮರುವರ್ಷವೇ (2000) ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿಯಾಗಿ ಅಯ್ಕೆಯಾದ ಭಾರತದ 5 ನೇ ಮಹಿಳೆ ಎನಿಸಿಕೊಂಡರು. ಬಾಲಿವುಡ್ ಜೊತೆ ಹಾಲಿವುಡ್ನಲ್ಲೂ ಬ್ಯೂಸಿ ನಟಿಯಾಗಿರುವ ಅಮೇರಿಕದ ಗಾಯಕ ನಿಕ್ ಜೊನಾಸ್ ಅವರನ್ನು ಮದುವೆಯಾಗಿದ್ದಾರೆ.
ಆರನೇ ಬಾರಿಗೆ ಭಾರತಕ್ಕೆ ವಿಶ್ವ ಸುಂದರಿ ಕಿರೀಟವನ್ನು ತಂದಿರೋದು ಹರಿಯಾಣದ ಮಾನುಷಿ ಚಿಲ್ಲರ್. 2017ರಲ್ಲಿ ಪಟ್ಟ ಧರಿಸಿದ ಮಾನುಷಿ ಸೋನಿಪಟ್ ನಲ್ಲಿ ತಮ್ಮ ವೈದ್ಯಕೀಯ ವ್ಯಾಸಂಗವನ್ನು ಮುಂದುವರಿಸಿದ್ದಾರೆ. ಮಾನುಷಿ ಒಬ್ಬ ನುರಿತ ಕೂಚಿಪುಡಿ ಡ್ಯಾನ್ಸರ್ ಆಗಿದ್ದು ಸದರಿ ನೃತ್ಯ ಪ್ರಕಾರದಲ್ಲಿ ಲೆಜೆಂಡ್ಗಳೆ ನಿಸಿಕೊಂಡಿರುವ ರಾಜಾ, ರಾಧಾ ರೆಡ್ಡಿ ಮತ್ತು ಕೌಶಲ್ಯ ರೆಡ್ಡಿ ಅವರಿಂದ ತರಬೇತಿ ಹೊಂದಿದ್ದಾರೆ.
ಇದನ್ನೂ ಓದಿ: ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್