ನಕಾರಾತ್ಮಕ ಆಲೋಚನೆಗಳನ್ನು ಕೌಂಟರ್ ಮಾಡುವ ಯೋಚನಾ ಶಕ್ತಿ ಬೆಳೆಸಿಕೊಳ್ಳಬೇಕು: ಡಾ ಸೌಜನ್ಯ ವಶಿಷ್ಠ
ನಮ್ಮ ಬದುಕಿನಲ್ಲಿ ನಡೆದ ಸಂತೋಷದ ಘಟನೆಗಳನ್ನು ಮೆಲಕು ಹಾಕಿದರೆ ನಮ್ಮಲ್ಲಿ ಪಾಸಿಟಿವ್ ಎನರ್ಜಿ ಉತ್ಪತ್ತಿಯಾಗುತ್ತದೆ. ಸಂತೋಷ ಅತಿ ಹೆಚ್ಚು ವೈಬ್ರೇಷನ್ ಉಂಟು ಮಾಡುವ ಅಂಶವಾಗಿದೆ, ಎಂದು ಡಾ ಸೌಜನ್ಯ ಹೇಳುತ್ತಾರೆ.
ನಕರಾತ್ಮಕ ಯೋಚನೆಗಳು ಎಲ್ಲರಲ್ಲೂ ಬರುತ್ತವೆ. ಅಗೋಚರ ಭೀತಿ ನಮ್ಮನ್ನು ಕಾಡುತ್ತಿರುತ್ತದೆ, ಅವ್ಯಕ್ತ ಭಯ ನಮ್ಮನ್ನು ಆವರಿಸಿರುತ್ತದೆ, ಮುಂದೆ ಹೀಗಾಗಬಹುದು ಅಂತ ಸುಮ್ಮ ಸುಮ್ಮನೆ ಕೆಟ್ಟ ಆಲೋಚನೆಗಳನ್ನು ಮಾಡಿ ನಮ್ಮ ಮನಸ್ಸು ಮತ್ತು ದೇಹವನ್ನು ಹಾಳುಮಾಡಿಕೊಳ್ಳುತ್ತೇವೆ. ನೆಗೆಟಿವ್ ಯೋಚನೆಗಳು ನಮ್ಮಲ್ಲಿನ ಸಕಾರಾತ್ಮ ಧೋರಣೆ ನಶಿಸುವಂತೆ ಮಾಡುತ್ತವೆ, ಹಾಗಾಗಿ ಇಂಥ ಯೋಚನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿ ಅಲ್ಲಿ ಮನೆಮಾಡಲು ಆಸ್ಪದ ಕೊಡಬಾರದು ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ವಿಷಯಕ್ಕೆ ಸಂಬಂಧಿಸಿದಂತೆ ಅವರು ವಿಡಿಯೋಗಳನ್ನು ಮಾಡಿದ್ದಾರಂತೆ. ಅವರಿಂದ ಲಿಂಕ್ ಪಡೆದು ವೀಕ್ಷಿಸಬಹುದು.
ನಮ್ಮ ದೇಹದ ಪ್ರತಿಯೊಂದು ಅಂಗಾಗಕ್ಕೆ ಅದರದ್ದೇ ಆದ ಕೆಲಸವಿರುತ್ತದೆ. ಹಾಗೇಯೇ ಮೆದುಳಿನ ಕೆಲಸ ಯೋಚನೆ ಮಾಡುವುದು. ನಮ್ಮ ಆಲೋಚನೆಗಳು ನಮ್ಮ ಅನುಭವದ ಮೇಲೆ ನಿರ್ಧಾರಗೊಂಡಿರುತ್ತವೆ. ಅಂದರೆ ನಮ್ಮಲ್ಲಿ ಆತಂಕ ಮನೋಭಾವ ಇದ್ದರೆ, ಒಳ್ಳೆಯ ಯೋಚನೆಗಳು ಬರಲಾರವು. ಭಯ ಚಡಪಡಿಕೆ ನಮ್ಮಲ್ಲಿ ಶುರುವಾಗುತ್ತದೆ.
ಡಾ ಸೌಜನ್ಯ ಅವರು ನಮ್ಮ ಮನಸ್ಸನ್ನು ಒಂದು ಮೋಟಾರಿಗೆ ಹೋಲಿಸುತ್ತಾರೆ. ಅದು ನೇರವಾಗಿ ರಸ್ತೆಗೆ ಅನುಗುಣವಾಗಿ ಓಡದೆ ಅಡ್ಡಾದಿಡ್ಡಿಯಾಗಿ ಓಡುತ್ತಿದ್ದರೆ ಒಂದೋ ವಾಹನ ಕೆಟ್ಟಿರುತ್ತದೆ ಇಲ್ಲವೇ ಅದರ ಚಾಲಕನ ಮನಸ್ಥಿತಿ ಕೆಟ್ಟಿರುತ್ತದೆ. ಹಾಗಾಗಿ, ನಮ್ಮ ಮನಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಅಂತ ಅವರ ಹೇಳುತ್ತಾರೆ.
ಇಲ್ಲದ ಸಂಗತಿಗಳನ್ನು ಯೋಚಿಸುವುದು ಸಲ್ಲದು ಮತ್ತು ಆಗದೆ ಇರುವುದರ ಬಗ್ಗೆ ಯೋಚನೆ ಮಾಡುವುದು ಅರ್ಥಹೀನ. Empty mind is devil’s workshop ಅಂತ ಹೇಳುವುದು ಸತ್ಯ. ಹಾಗಂತ ನಮ್ಮ ಮನಸನ್ನು ಹುಚ್ಚು ಆಲೋಚನೆಗಳಿಗೆ ಈಡುಮಾಡಬಾರದು.
ನಮ್ಮ ಬದುಕಿನಲ್ಲಿ ನಡೆದ ಸಂತೋಷದ ಘಟನೆಗಳನ್ನು ಮೆಲಕು ಹಾಕಿದರೆ ನಮ್ಮಲ್ಲಿ ಪಾಸಿಟಿವ್ ಎನರ್ಜಿ ಉತ್ಪತ್ತಿಯಾಗುತ್ತದೆ. ಸಂತೋಷ ಅತಿ ಹೆಚ್ಚು ವೈಬ್ರೇಷನ್ ಉಂಟು ಮಾಡುವ ಅಂಶವಾಗಿದೆ, ಎಂದು ಡಾ ಸೌಜನ್ಯ ಹೇಳುತ್ತಾರೆ.
ನೌಕರಿಯ ಅಭದ್ರತೆ ನಮ್ಮನ್ನು ಬಹಳ ಕಾಡುತ್ತದೆ ಅದರಲ್ಲೂ ವಿಶೇಷವಾಗಿ ಕೋವಿಡ್-19 ಪೀಡೆಯ ಈ ದಿನಗಳಲ್ಲಿ. ನೌಕರಿ ಹೋದರೆ ಹೇಗೆ ಎಂಬ ಆಲೋಚನೆಯೇ ತಪ್ಪು ಎನ್ನುತ್ತಾರೆ ಡಾ ಸೌಜನ್ಯ. ನಾವು ವಿದ್ಯಾವಂತರು, ವಿದ್ಯೆಯ ಜೊತೆ ಪ್ರತಿಭೆಯೂ ಇದೆ, ಒಂದು ನೌಕರಿ ಹೋದರೇನಂತೆ, ಇನ್ನೊಂದು ನಮಗಾಗಿ ಕಾಯುತ್ತಿರುತ್ತದೆ ಎಂಬ ಪಾಸಿಟಿವ್ ಅಲೋಚನೆ ನಮ್ಮಲ್ಲಿರಬೇಕು, ನೆಗೆಟಿವ್ ಆಲೋಚನೆಗಳನ್ನು ಕೌಂಟರ್ ಮಾಡುವಂಥ ಯೋಚನಾ ಧಾಟಿ ನಾವು ಹೊಂದಿರಬೇಕು ಅಂತ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್