‘ಅಪ್ಪು ಅವರನ್ನು ಬೆಳೆಸಿದ್ದು ನಾವಲ್ಲ, ಅಭಿಮಾನಿಗಳು’: ಪುನೀತ್​ ಬಗ್ಗೆ ಮಧು ಬಂಗಾರಪ್ಪ ಮಾತು

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅವರ ಸಾಧನೆಯನ್ನು ಅನೇಕ ಗಣ್ಯರು ಸ್ಮರಿಸುತ್ತಿದ್ದಾರೆ.

TV9kannada Web Team

| Edited By: Madan Kumar

Dec 18, 2021 | 10:00 AM

ಕಾಂಗ್ರೆಸ್‌ ನಾಯಕ ಮಧು ಬಂಗಾರಪ್ಪ (Madhu Bangarappa) ಅವರು ಬಾಗಲಕೋಟೆ ಜಿಲ್ಲೆ ಬಾದಾಮಿಯ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಕುರಿತು ಅವರು ಈ ರೀತಿ ಹೇಳಿದ್ದಾರೆ. ‘ಅಪ್ಪು ಅವರ ಬಗ್ಗೆ ಇವತ್ತಿನವರೆಗೆ ನಾನು ಏನನ್ನೂ ಹೇಳಿಲ್ಲ. ಯಾಕೆಂದರೆ ಅಪ್ಪು ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ನಾವ್ಯಾರೂ ಅಲ್ಲ. ಅವರನ್ನು ಅಭಿಮಾನಿಗಳೇ (Puneeth Rajkumar Fans) ಬೆಳೆಸಿದ್ದು. ಅಭಿಮಾನಿಗಳ ಮಾತನ್ನು ನಾವು ತಲೆಬಾಗಿ ಗೌರವಿಸುತ್ತೇವೆ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇಂದಿಗೂ ಅವರ ಸಮಾಧಿ ಬಳಿ ಪ್ರತಿದಿನ ನೂರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಸದನದಲ್ಲೂ ಕೂಡ ಪುನೀತ್​ ಬಗ್ಗೆ ಪ್ರಸ್ತಾಪ ಆಗಿತ್ತು. ಅಪ್ಪು ಮಾಡಿದ ಸಾಧನೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕರು ಮಾತನಾಡಿದ್ದರು.

ಇದನ್ನೂ ಓದಿ:

ಜೀ ಕನ್ನಡದಲ್ಲಿ ‘ಕರುನಾಡ ರತ್ನ’ ಕಾರ್ಯಕ್ರಮ; ಪುನೀತ್​ ರಾಜ್​ಕುಮಾರ್​ಗೆ ವಿಶೇಷ ನಮನ

ಪುನೀತ್​ ರಾಜ್​ಕುಮಾರ್​ಗಾಗಿ ಫ್ಯಾನ್ಸ್​ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ

Follow us on

Click on your DTH Provider to Add TV9 Kannada