Manasa Varanasi: 2021ರ ವಿಶ್ವ ಸುಂದರಿ ಪಟ್ಟವೇರಲು ಸಿದ್ಧವಾದ ಭಾರತದ ಸ್ಪರ್ಧಿ ಮಾನಸ ವಾರಾಣಸಿ ಹೇಗಿದ್ದಾರೆ ಗೊತ್ತಾ?

Manasa Varanasi: 2021ರ ವಿಶ್ವ ಸುಂದರಿ ಪಟ್ಟವೇರಲು ಸಿದ್ಧವಾದ ಭಾರತದ ಸ್ಪರ್ಧಿ ಮಾನಸ ವಾರಾಣಸಿ ಹೇಗಿದ್ದಾರೆ ಗೊತ್ತಾ?

TV9 Web
| Updated By: preethi shettigar

Updated on: Dec 18, 2021 | 10:38 AM

Miss World 2021: ಹರ್ನಾಜ್ ಕೌರ್ ಸಂಧು ಭುವನ ಸುಂದರಿ ಕಿರೀಟ ಗೆದ್ದಾಯ್ತು. ಈಗ ವಿಶ್ವ ಸುಂದರಿ ಕಿರೀಟವನ್ನು ಗೆದ್ದು ಭಾರತಕ್ಕೆ ಇನ್ನಷ್ಟು ಕೀರ್ತಿ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಮಾನಸ ವಾರಣಾಸಿ. ಮಾನಸ ರೂಪ ನೋಡಿದರೆ ಆಕೆ 2021ರ ವಿಶ್ವ ಸುಂದರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಹಾಗಿದೆ.

ಈಗಾಗಲೇ ಹರ್ನಾಜ್ ಸಂಧು 2021ರ ಮಿಸ್ ಯೂನಿವರ್ಸ್ ಕಿರೀಟ ಧರಿಸಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಇದೀಗ ವಿಶ್ವ ಸುಂದರಿ 2021 (Miss Universe 2021) ಸ್ಪರ್ಧೆಯಲ್ಲಿ 2020ರ ಮಿಸ್ ಇಂಡಿಯಾ ಖ್ಯಾತಿಯ ಮಾನಸ ವಾರಾಣಸಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಶ್ವ ಸುಂದರಿ ಕಿರೀಟವನ್ನು ಗೆದ್ದು ಭಾರತಕ್ಕೆ ಇನ್ನಷ್ಟು ಕೀರ್ತಿ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಮಾನಸ ವಾರಣಾಸಿ. ಮಾನಸ ರೂಪ ನೋಡಿದರೆ ಆಕೆ 2021ರ ವಿಶ್ವ ಸುಂದರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಹಾಗಿದೆ.

ಮಿಸ್ ಯೂನಿವರ್ಸ್ 2021 ಆಗಿ ಹರ್ನಾಜ್ ಸಂಧು ಅವರಿಗೆ ಅಭಿನಂದನೆ ಸಲ್ಲಿಸಿರುವ ಮಾನಸ ವಾರಾಣಸಿ, “ಭಾರತವು 21 ವರ್ಷಗಳ ನಂತರ ಭುವನ ಸುಂದರಿ ಕಿರೀಟವನ್ನು ಗೆದ್ದಿದೆ. ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ 2021 ಆಗಿ ಆಯ್ಕೆಯಾಗಿದ್ದಾರೆ” ಎಂದು ಬ್ಯೂಟಿ ಕ್ವೀನ್ ಮಾನಸ ವಾರಾಣಸಿ ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಮಾನಸ ಅವರ ಪೋಸ್ಟ್ ಇತರ ಮಹಿಳೆಯರನ್ನು ಬೆಂಬಲಿಸುವ ಮಹಿಳೆಯರ ಮನೋಭಾವವನ್ನು ಪ್ರದರ್ಶಿಸುತ್ತದೆ ಮತ್ತು ಇಂದು ನೀವು ನೋಡುವ ಅತ್ಯುತ್ತಮ ವಿಷಯವಾಗಿದೆ. ಹರ್ನಾಜ್ ಸಂಧು 2021ರ ಮಿಸ್ ಯೂನಿವರ್ಸ್ ಕಿರೀಟವನ್ನು ಅಲಂಕರಿಸಿದ್ದಾರೆ. ಅದೇ ರೀತಿ ಈಗ ನಡೆಯಲಿರುವ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸ್ಪರ್ಧಿ ಮಾನಸ ವಾರಾಣಸಿ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:
Miss World 2021 ಭಾರತದ ಮಾನಸಾ ವಾರಣಾಸಿ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಕೊವಿಡ್; ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ

1966ರಲ್ಲಿ ಮೊದಲ ಬಾರಿಗೆ ವಿಶ್ವ ಸುಂದರಿಯನ್ನು ಕಂಡ ಭಾರತ ಎರಡನೇಯವರಿಗಾಗಿ 28 ವರ್ಷ ಕಾಯಬೇಕಾಯಿತು!