ದಾವಣಗೆರೆಯಲ್ಲಿ ಅವಧಿ ಮೀರಿದ 9.90 ಲಕ್ಷ ರೂ. ಮೌಲ್ಯದ ಮದ್ಯ ನಾಶ
ಅಬಕಾರಿ ಉಪ ಆಯುಕ್ತ ಬಿ ಶಿವಪ್ರಸಾದ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆಎಲ್ ನಾಗರಾಜ್ ಸಮ್ಮುಖದಲ್ಲಿ ಮದ್ಯ ನಾಶ ಮಾಡಲಾಗಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಅವಧಿ ಮೀರಿದ ಸುಮಾರು 9.90 ಲಕ್ಷ ರೂ. ಮೌಲ್ಯದ ಮದ್ಯ ನಾಶ ಮಾಡಿದ್ದಾರೆ. ದಾವಣಗೆರೆ ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲೆ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯ ನಾಶ ಮಾಡಲಾಗಿದೆ. ಕೆಎಸ್ ಬಿಸಿಎಲ್ ಲಿಕ್ಕರ್ ಡಿಪೊದಲ್ಲಿ ಮಾರಾಟ ಆಗದೇ ಮದ್ಯ ಉಳಿದಿತ್ತು. 7.33 ಲಕ್ಷ ಮೌಲ್ಯದ 576.87 ಲೀಟರ್ ವಿವಿಧ ಮಾದರಿಯ ಮದ್ಯ ಹಾಗೂ 2.57 ಲಕ್ಷ ರೂಪಾಯಿ ಮೌಲ್ಯದ ಬಿಯರ್ ನಾಶ ಮಾಡಲಾಗಿದೆ. ಅಬಕಾರಿ ಉಪ ಆಯುಕ್ತ ಬಿ ಶಿವಪ್ರಸಾದ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆಎಲ್ ನಾಗರಾಜ್ ಸಮ್ಮುಖದಲ್ಲಿ ಮದ್ಯ ನಾಶ ಮಾಡಲಾಗಿದೆ. ಈ ರೀತಿ ರಾಜ್ಯದ ಹಲವು ಕಡೆ ಮದ್ಯ ಮಾರಾಟವಾಗದೆ ಅದರ ಅವಧಿ ಕಳೆದುಕೊಳ್ಳುತ್ತದೆ. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಮಿಸಿ ಅವಧಿ ಮೀರಿದ ಮದ್ಯವನ್ನು ಪರಿಶೀಲಿಸಿ ನಾಶಪಡಿಸುತ್ತಾರೆ.
ಇದನ್ನೂ ಓದಿ
ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ರಮೇಶ್ಕುಮಾರರ ಮನೆಯ ಹೆಣ್ಣುಮಗುವನ್ನು ಯಾರೋ ಒಂದಿಬ್ಬರು ಕಾಮುಕರು ನಿನ್ನೆ ದಿನ…
Sukesh Chandrasekhar: ಅದಿತಿ ಸಿಂಗ್ಗೆ ಬೆದರಿಕೆ ಹಾಕಿದ್ದ ವಂಚಕ ಸುಖೇಶ್ ಆಡಿಯೋ ವೈರಲ್