AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಪ್ರತಿನಿಧಿಗಳೇ ಎಚ್ಚರವಿರಲಿ : ..ಹೆಣ್ಣುಮಗುವನ್ನು ಯಾರೋ ಒಂದಿಬ್ಬರು ಕಾಮುಕರು ನಿನ್ನೆ ದಿನ…

Rape : ಅವರಿಂದ ತಪ್ಪಿಸಿಕೊಳ್ಳಲು ಅವಳು ಹೆಣಗಾಡುತ್ತಿದ್ದಳು. ಆಗ ಅವಳಿಗೆ ದೂರದಲ್ಲಿ ರಮೇಶ್ ಕುಮಾರ್ ಅವರು ತನ್ನತ್ತಲೇ ಬರುತ್ತಿರುವುದು ಕಂಡು ಮುಖದಲ್ಲಿ ಭರವಸೆಯ ನಗು ಸುಳಿಯಿತು. ಓಡೋಡಿ ಬಂದ ರಮೇಶ್ ಕುಮಾರ್ ಅನತಿ ದೂರದಲ್ಲಿ ನಿಂತು ಆ ಹುಡುಗಿಗೆ ಕೂಗಿ ಏನು ಹೇಳಿದರು?

ಜನಪ್ರತಿನಿಧಿಗಳೇ ಎಚ್ಚರವಿರಲಿ : ..ಹೆಣ್ಣುಮಗುವನ್ನು ಯಾರೋ ಒಂದಿಬ್ಬರು ಕಾಮುಕರು ನಿನ್ನೆ ದಿನ...
ಶ್ರೀದೇವಿ ಕಳಸದ
|

Updated on:Dec 19, 2021 | 2:18 PM

Share

Rape : ಗುರುವಾರ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಹಾಸನದಲ್ಲಿರುವ ಕವಿ ಜ. ನಾ. ತೇಜಶ್ರೀ ಅವರ ಪ್ರತಿಕ್ರಿಯೆ.

*

ಮಾನ್ಯ ಸಚಿವರಾದ ರಮೇಶ್ ಕುಮಾರ್ ಅವರು ಒಬ್ಬರೇ ವಾಕ್​ ಹೊರಟಿದ್ದಾರೆ. ಯಾರೋ ಒಂದಿಬ್ಬರು ಕಾಮುಕರು ನಡುರಸ್ತೆಯಲ್ಲಿ ಅತ್ಯಾಚಾರ ಎಸಗಲು ಒಂದು ಹುಡುಗಿಯನ್ನು ಎಳೆದಾಡುತ್ತಿದ್ದರು. ದಾಂಡಿಗ ತರುಣರ ಎದುರು ಆ ಹುಡುಗಿ ಚೀರಾಡುತ್ತ, ರೋದಿಸುತ್ತ, ಕೂಗುತ್ತಿದ್ದ ರೀತಿ ಕರುಳು ಇರಿಯುವಂತಿತ್ತು. ಆದರೂ ಈ ಕಾಮುಕರು ಅವಳನ್ನು ಬಿಡಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ಅವಳು ಪ್ರತಿರೋಧ ಮಾಡುತ್ತಿದ್ದಳು, ಹೆಣಗಾಡುತ್ತಿದ್ದಳು. ಆಗ ಅವಳಿಗೆ ದೂರದಲ್ಲಿ ರಮೇಶ್ ಕುಮಾರ್ ಅವರು ತನ್ನತ್ತಲೇ ಬರುತ್ತಿರುವುದು ಕಂಡು ಮುಖದಲ್ಲಿ ಭರವಸೆಯ ನಗು ಸುಳಿಯಿತು. ಓಡೋಡಿ ಬಂದ ರಮೇಶ್ ಕುಮಾರ್ ಅವರು ಅವಳಿಂದ ಅನತಿ ದೂರದಲ್ಲಿ ನಿಂತು ಆ ಹುಡುಗಿಗೆ ಕೂಗಿ ಹೇಳಿದರು: “ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಿದ್ದರೆ ಅತ್ಯಾಚಾರವನ್ನು ಆನಂದಿಸು…” ಅಂತ. ಹುಡುಗಿಯ ಕಣ್ಣು ಕ್ಷಣದಲ್ಲಿ ನಂದಿಹೋಗಿ ಅಲ್ಲಿಂದ ಒಂದು ಹನಿ ಕಣ್ಣೀರು ಉರುಳಿ ನೆಲ ಸೇರಿತು.

ಇದು ಕಳೆದ ರಾತ್ರಿ ನನಗೆ ಬಿದ್ದ ಕನಸೋ ಅಥವಾ ಅಂಥದ್ದೇ ಮತ್ತೇನೋ ಸ್ಪಷ್ಟವಾಗಿ ತಿಳಿಯಲಾರದಂತ ಸ್ಥಿತಿಯಲ್ಲಿ ನಾನಿದ್ದೇನೆ. ಮನಸ್ಸಾಕ್ಷಿಯು ಸತ್ತು ಹೋಗಿರುವ ಈ ಹೊತ್ತಿನ ರಾಜಕಾರಣದ ಸನ್ನಿವೇಶದಲ್ಲಿ ಯಾರನ್ನು ನೆಚ್ಚಿ ನಾವು ಬದುಕುವುದು ಎನ್ನುವುದೇ ತಿಳಿಯದಾಗಿದೆ. ಇದರ ನಡುವೆ ಬಿ.ಎಲ್.ಶಂಕರ್, ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಸುರೇಶ್ ಕುಮಾರ್‌ರವರಂತಹ ಕೆಲವೇ ಕೆಲವು ಸಭ್ಯರು ಕ್ಷೀಣವಾಗಿಯಾದರೂ ಮಿನುಗುತ್ತಿರುವ ನಕ್ಷತ್ರಗಳ ಹಾಗೆ ಕಾಣುತ್ತಾರೆ…

ಅದಕ್ಕಾಗಿ… ರಮೇಶ್ ಕುಮಾರ್ ಮತ್ತು ಆ ಹೆಣ್ಣುಮಗಳ ವೃತ್ತಾಂತವು ನಾನು ಕಂಡ ಕನಸಷ್ಟೇ ಆಗಿರಲಿ.. ಮತ್ತು ಅದು ಎಂದೂ ನನಸಾಗದೆ ಇರಲಿ…

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಆ ಅಸಾಧ್ಯ ಸಂಕಟ ನಿಮಗೇನು ಗೊತ್ತು?

Published On - 1:07 pm, Sat, 18 December 21

ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ