ಜನಪ್ರತಿನಿಧಿಗಳೇ ಎಚ್ಚರವಿರಲಿ : ಶಾಸಕಿಯರೇ, ಪಕ್ಷಬೇಧ ಮರೆತು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಾದ ಹೊಣೆ ನಿಮ್ಮದೇ

Mahabharath : ‘ಹಸ್ತಿನಾಪುರದ ವಸ್ತ್ರಾಪಹರಣದ ಸಮಯದಲ್ಲಿ ಸುಮ್ಮನೆ ತಮಾಷೆ ನೋಡುತ್ತ ಕುಂತಿತ್ತಲ್ಲ ಆ ದಿಗ್ಗಜರಿದ್ದ ರಾಜಸಭೆ ಅದೇ ಪದೇಪದೆ ನೆನಪಾಗುತ್ತಿದೆ. ಇಲ್ಲೇನೂ ಬದಲಾಗುವುದಿಲ್ಲ. ಕನಿಷ್ಠ ಲಜ್ಜೆ ಮತ್ತು ಕನಿಷ್ಠ ಸೌಜನ್ಯವನ್ನೂ ಮರೆತಂತಹ ಸಭೆ ಇದು.’ ಲಲಿತಾ ಸಿದ್ಧಬಸವಯ್ಯ

ಜನಪ್ರತಿನಿಧಿಗಳೇ ಎಚ್ಚರವಿರಲಿ : ಶಾಸಕಿಯರೇ, ಪಕ್ಷಬೇಧ ಮರೆತು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಾದ ಹೊಣೆ ನಿಮ್ಮದೇ
ಕವಿ ಲಲಿತಾ ಸಿದ್ದಬಸವಯ್ಯ
Follow us
|

Updated on:Dec 17, 2021 | 5:27 PM

Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕವಿ ಲಲಿತಾ ಸಿದ್ಧಬಸವಯ್ಯ ಅವರ ಪ್ರತಿಕ್ರಿಯೆ

*

ಒಬ್ಬ ನ್ಯಾಯಾಧೀಶ ಅತ್ಯಾಚಾರ ಪ್ರಕರಣವನ್ನು ಸೂಜಿದಾರದ ಉಪಮೆಯಿಂದ ಇತ್ಯರ್ಥ ಮಾಡಿದನಂತೆ. ಇನ್ನೊಬ್ಬ ಮಹಾಪುರುಷ ಅನಿವಾರ್ಯವಾದದ್ದನ್ನೆಲ್ಲ ಎಂಜಾಯ್ ಮಾಡಿ ಎಂಬ ನುಡಿಮುತ್ತು ಉದುರಿಸಿದ್ದಾನೆ. ಇಬ್ಬರೂ ಪುರುಷರೇ. ಇದರಿಂದಾಚೆಗೆ ಅವರ ಯೋಚನೆ ವಿಸ್ತರಿಸಲಾರದು.

ನಮ್ಮ ರಮೇಶ್ ಕುಮಾರರು ಪಳಗಿದ ರಾಜಕಾರಣಿ. ಸಾಹಿತ್ಯ ಸಂಗೀತ ನಾಟಕ ಬಲ್ಲವರು. ಕಾನೂನು ತಜ್ಞರು. ಇಂತಹವರೂ ಸದನದೊಳಗೆ ಆ “ನುಡಿಮುತ್ತ”ನ್ನು ಅನಗತ್ಯವಾಗಿ ಉಲ್ಲೇಖಿಸಿದ್ದಾರೆಂದರೆ ಅದನ್ನು ಯಾವ ಮಾತುಗಳಿಂದ ಖಂಡಿಸಬೇಕೆಂಬುದು ನನಗೆ ನಿನ್ನೆಯಿಂದ ಹೊಳೆಯುತ್ತಿಲ್ಲ. ಕಾಗೇರಿಯವರಂತಹ ಸಜ್ಜನರು ಅದನ್ನು‌ ಕುಲುಕುಲು ನಗುತ್ತ ಆನಂದಿಸಿದರಲ್ಲ!

ಹಸ್ತಿನಾಪುರದ ವಸ್ತ್ರಾಪಹರಣದ ಸಮಯದಲ್ಲಿ ಸುಮ್ಮನೆ ತಮಾಷೆ ನೋಡುತ್ತ ಕುಂತಿತ್ತಲ್ಲ ಆ ದಿಗ್ಗಜರಿದ್ದ ರಾಜಸಭೆ ಅದೇ ಪದೇಪದೆ ನೆನಪಾಗುತ್ತಿದೆ. ಇಲ್ಲೇನೂ ಬದಲಾಗುವುದಿಲ್ಲ. ಕನಿಷ್ಠ ಲಜ್ಜೆ ಮತ್ತು ಕನಿಷ್ಠ ಸೌಜನ್ಯವನ್ನೂ ಮರೆತಂತಹ ಸಭೆ ಇದು.

ಶಾಸಕ ರಮೇಶಕುಮಾರರು ಈ ಸಾಮತಿ ಹೇಳಿದಾಗ ‍ಸಭಾಪತಿಯವರು ಆ ಕೂಡಲೇ ಅದನ್ನು ಆಕ್ಷೇಪಿಸಬೇಕಾಗಿತ್ತು, ಕಡತದಿಂದ ತೆಗೆಸಬೇಕಾಗಿತ್ತು ಮತ್ತು ಅತಿ ಮುಖ್ಯವಾಗಿ ಬೇಷರತ್ತಾಗಿ ಸದನದ ಕ್ಷಮೆ ಕೋರುವಂತೆ ಅವರಿಗೆ ಸೂಚಿಸಬೇಕಾಗಿತ್ತು.

ಈಗೇನೊ ರಮೇಶಕುಮಾರರು ತಮ್ಮ ಮಾತಿಗೆ ವಿಷಾದಿಸಿದ್ದಾರೆ. ಕಾಗೇರಿಯವರೂ ಸಂಜೆಯೊಳಗೆ ವಿಷಾದಿಸಿಯಾರು. ಉಹೂಂ, ಇದು ಇಷ್ಟಕ್ಕೆ ತಿಪ್ಪೆ ಸಾರಿಸುವ ವಿಷಯವಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಾದ ಹೊಣೆ ನಮ್ಮ ಶಾಸಕಿಯರದ್ದು. ಅವರು ಪಕ್ಷಬೇಧ ಮರೆತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವರೆಂದು ನಾನು ಭಾವಿಸಿದ್ದೇನೆ. ಇಲ್ಲದಿದ್ದರೆ ಶೇಕಡಾ ಮೂವತ್ಮೂರು ಶೇಕಡಾ ಐವತ್ತು ಮಹಿಳಾ ಮೀಸಲಾತಿ ಎನ್ನುವದನ್ನು ಮತ್ತೆ ಯಾರೂ ಮಾತನಾಡಬಾರದು.

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ದೀಪ್ತಿ ಭದ್ರಾವತಿಯವರ ಈ ಒಡಲಸಂಕಟಕ್ಕೆ ನೀವು ಉತ್ತರಿಸುವಿರೆ ಸದನವಾಸಿಗಳೇ?

Published On - 4:42 pm, Fri, 17 December 21

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು