ನೀವು ಎಂದೂ ಕೇಳರಿಯದ ಪ್ಲ್ಯಾನ್​ ಜಿಯೋ ಲಾಂಚ್ ಮಾಡುತ್ತಿದೆ, 28 ದಿನಗಳ ಪ್ರೀ-ಪೇಡ್ ಪ್ಲ್ಯಾನ್​ಗೆ ಕೇವಲ ರೂ. 1 ಮಾತ್ರ!!

ಈ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು 100 ಎಮ್ ಬಿ ಡೆಟಾವನ್ನು ಒಳಗೊಂಡಿದೆ. ಪ್ಲ್ಯಾನ್ ಉಪಯೋಗಿಸುತ್ತಿರುವ ಗ್ರಾಹಕರೊಬ್ಬರ ಡೆಟಾ ಲಿಮಿಟ್ ತೀರಿತು ಅಂತಾದ್ರೆ, ಸ್ಪೀಡ್ 64 ಕೆಬಿಪಿಎಸ್ ಗೆ ಕುಂಠಿತಗೊಳ್ಳುತ್ತದೆ.

TV9kannada Web Team

| Edited By: Arun Belly

Dec 17, 2021 | 8:33 PM

ಹೊಸ ಹೊಸ ಆಫರ್ ಗಳೊಂದಿಗೆ ತನ್ನ ಗ್ರಾಹಕರನ್ನು ಚಕಿತಗೊಳಿಸುವುದರಲ್ಲಿ ರಿಲಯನ್ಸ್ ಜಿಯೊ ನಿಸ್ಸಂದೇಹವಾಗಿ ಎತ್ತಿದ ಕೈ. ಈಗ ಅದೊಂದು ನಂಬಲಸದಳ ಪ್ರೀ-ಪೇಡ್ ಪ್ಲ್ಯಾನ್ ಜಾರಿಗೆ ತರುತ್ತಿದ್ದು, ಗ್ರಾಹಕರು 30 ದಿನಗಳ ಪ್ಲ್ಯಾನ್​ಗೆ ನೀಡಬೇಕಿರುವುದು ಕೇವಲ ರೂ. 1! ಹೌದು ಮಾರಾಯ್ರೇ ನೀವು ಕೇಳಿಸಿಕೊಂಡಿದ್ದು ಸತ್ಯ, ಒಂದು ರೂಪಾಯಿ ಮಾತ್ರ. ಈ ಸಂಗತಿಯನ್ನು ಮೊದಲ ಬಾರಿಗೆ ವರದಿ ಮಾಡಿದ್ದು ‘ಟೆಲಿಕಾಮ್ ಟಾಕ್’; ಸದರಿ ಪ್ಲ್ಯಾನ್ ಕೇವಲ ಮೈಜಿಯೋ (MyJio) ಌಪ್ನಲ್ಲಿ ಮಾತ್ರ ಕಾಣಸಿಗುತ್ತದೆ. ಜಿಯೋ ವೆಬ್ ಸೈಟ್ನಲ್ಲಿ ಅದು ಕಾಣುತ್ತಿಲ್ಲ. ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ಸರ್ವಿಸ್ ಪ್ರೊವೈಡರ್ ಕಂಪನಿ ಪ್ರೀ-ಪೇಡ್ ರಿಚಾರ್ಜ್ ಸೌಲಭ್ಯ ಒದಗಿಸುತ್ತಿಲ್ಲವಾದ್ದರಿಂದ, ಜಿಯೋ ಬೇರೆ ಗ್ರಾಹಕರನ್ನೂ ತನ್ನೆಡೆ ಸೆಳೆದುಕೊಳ್ಳುವ ಸಾಧ್ಯತೆ ಇದೆ.

ಈ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು 100 ಎಮ್ ಬಿ ಡೆಟಾವನ್ನು ಒಳಗೊಂಡಿದೆ. ಪ್ಲ್ಯಾನ್ ಉಪಯೋಗಿಸುತ್ತಿರುವ ಗ್ರಾಹಕರೊಬ್ಬರ ಡೆಟಾ ಲಿಮಿಟ್ ತೀರಿತು ಅಂತಾದ್ರೆ, ಸ್ಪೀಡ್ 64 ಕೆಬಿಪಿಎಸ್ ಗೆ ಕುಂಠಿತಗೊಳ್ಳುತ್ತದೆ. ಇದು ಎಲ್ಲ ಜಿಯೋ ಪ್ಲ್ಯಾನ್ಗಳಲ್ಲಿ ಕಂಡು ಬರುವ ಸಾಮಾನ್ಯ ಸಂಗತಿಯಾಗಿದೆ.

ಸರಳ ಭಾಷೆಯಲ್ಲಿ ಈ ಪ್ಲ್ಯಾನ್ ಬಗ್ಗೆ ಹೇಳಬೇಕೆಂದರೆ, ಒಂದು ರೂ. ಗೆ 100 ಎಮ್ ಬಿ ಡೆಟಾ ಸಿಕ್ಕರೆ, 500 ಎಮ್ ಬಿ ಡೆಟಾ ಪಡೆಯಬೇಕಾದರೆ ನೀವು ರೂ. 5 ತೆರಬೇಕಾಗುತ್ತದೆ. ಅಷ್ಟಾಗಿಯೂ ಇದು ಬೇರೆ ಯಾವುದೇ ಟೆಲಿಕಾಮ್ ನೀಡುವ ಆಫರ್ಗಿಂತ ಬಹಳ ಅಗ್ಗವಾಗಿರುತ್ತದೆ. ಆದರೆ, ಈ ಪ್ಲ್ಯಾನ್ ತೆಗೆದುಕೊಳ್ಳುವ ಗ್ರಾಹಕನೊಬ್ಬ ಎಷ್ಟು ಸಲ ರಿಚಾರ್ಜ್ ಮಾಡಿಸಬಹುದುಮ ಅದಕ್ಕೇನಾದರೂ ಮಿತಿ ಇದೆಯೇ ಅನ್ನುವುದನ್ನು ಜಿಯೋ ಖಚಿತ ಪಡಿಸಿಲ್ಲ.

ಅಂದಹಾಗೆ, ಗರಿಷ್ಠ ಪ್ರಮಾಣದಲ್ಲಿ ಡೆಟಾ ಬಳಸುವವರಿಗೆ ಜಿಯೋದ ರೂ. 119 ಬಹಳ ಮಿತವ್ಯಯಕಾರಿ ಅನಿಸುತ್ತದೆ. ಇದರಲ್ಲಿ ದಿನವೊಂದಕ್ಕೆ 1.5 ಜಿಬಿ ಡೆಟಾ ಸಿಗುತ್ತದೆ.

ಆದರೆ, ವಿಷಾದಕರ ಸಂಗತಿಯೇನೆಂದರೆ, ಈ ಪ್ಲ್ಯಾನ್ ಕೇವಲ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಜಿಯೋದ ಮತ್ತೊಂದು ಅಫೋರ್ಡಬಲ್ ಪ್ಲ್ಯಾನ್ ಎಂದರೆ ರೂ. 199ರದ್ದು. ಇದರಲ್ಲಿ ದಿನಕ್ಕೆ 1.5 ಡೆಟಾನೊಂದಿಗೆ 23 ದಿನಗಳ ವ್ಯಾಲಿಡಿಟಿ ಸಿಗುತ್ತದೆ.

ಇದನ್ನೂ ಓದಿ:  Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ

 

Follow us on

Click on your DTH Provider to Add TV9 Kannada