AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ

Trending: ಸಾಮಾಜಿಕ ಜಾಲತಾಣದಲ್ಲಿ ನೂತನ ರೆಸಿಪಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವಿನೂತನ ರೀತಿಯಲ್ಲಿ ಗೋಲ್​ಗಪ್ಪ ತಯಾರಿಸಿದ ವಿಡಿಯೋ ಒ.ಂದು ವೈರಲ್ ಆಗಿದೆ. ಕುತೂಹಲಕರ ವಿಡಿಯೋ ಇಲ್ಲಿದೆ.

Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Updated By: shivaprasad.hs|

Updated on:Dec 17, 2021 | 4:24 PM

Share

ಭಾರತ ಬಹಳ ವೈವಿಧ್ಯಮಯ ದೇಶ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ, ಆಹಾರ ಎಲ್ಲವೂ ಬದಲಾಗುತ್ತದೆ. ಜೊತೆಗೆ ಪ್ರತೀ ಪ್ರದೇಶಕ್ಕೂ ತನ್ನದೇ ಆದ ವೈವಿಧ್ಯಮಯ ಅಡುಗಾ ಪದ್ಧತಿಯಿದೆ. ಇತ್ತೀಚೆಗೆ ಆಹಾರ ಪ್ರಿಯರು, ಪ್ರಯಾಣ ಮೊದಲಾದವೆಲ್ಲಾ ಹೆಚ್ಚಾದಂತೇ ಹೊಸ ಹೊಸ ರುಚಿಯನ್ನು ಪ್ರಯೋಗಿಸುವುದು ಹೆಚ್ಚಾಗುತ್ತಿದೆ. ಇಂತಹ ಹಲವಾಋಉ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅಲ್ಲದೇ ಇದನ್ನು ಗಮನಿಸುವ, ಹೊಸದನ್ನು ಪ್ರಯತ್ನಿಸುವ ಲಕ್ಷಾಂತರ ಆಹಾರ ಪ್ರೇಮಿಗಳಿದ್ದಾರೆ. ಕೆಲವೊಮ್ಮೆ ಇಂತಹ ಪ್ರಯತ್ನಗಳು ಎಡವಟ್ಟಾಗುವುದೂ ಇದೆ. ಆದರೆ ಜನರು ಹೊಸದನ್ನು ಅನ್ವೇಷಿಸುವ ಉತ್ಸಾಹ ಮಾತ್ರ ಕಮ್ಮಿಯಾಗಿಲ್ಲ.

ಇತ್ತೀಚೆಗೆ ಆನ್​ಲೈನ್​ನಲ್ಲಿ ಓರಿಯೋ- ಪಕೋಡಾ, ಚಾಕಲೇಟ್ ಮ್ಯಾಗಿ ಮೊದಲಾದ ರೆಸಿಪಿಗಳು ನಿಮ್ಮ ಗಮನ ಸೆಳೆದಿರಬಹುದು. ಇದೀಗ ‘ಮಿರಿಂಡಾ- ಗೋಲ್​ಗಪ್ಪ’ ಸರದಿ. ಹೌದು. ಸಾಮಾನ್ಯವಾಗಿ ನಾವು ಗೋಲ್​ಗಪ್ಪವನ್ನು ಬೇಯಿಸಿದ ಆಲೂಗೆಡ್ಡೆ, ಈರುಳ್ಳಿ ಮೊದಲಾದವನ್ನು ಹದವಾಗಿ ಬೆರೆಸಿ ತಯಾರಿಸಿದ ರುಚಿಕರ ಮಿಶ್ರಣವನ್ನು ಖಡಕ್ ಪಾನಿಯೊಂದಿಗೆ ಸೇವಿಸಿ ಬಾಯಿ ಚಪ್ಪರಿಸುತ್ತಿದ್ದೆವು. ಆದರೆ ಈಗ ಇದರಲ್ಲೇ ಹೊಸದನ್ನು ಆಹಾರ ಪ್ರಿಯರು ಪ್ರಯತ್ನಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ @chatore_broothers ಎಂಬ ಖಾತೆಯಿಂದ ಜೈಪುರದಲ್ಲಿ ಸೆರೆಹಿಡಿಯಲಾದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮಿರಿಂಡಾ- ಗೋಲ್​ಗಪ್ಪ ತಯಾರಿಸಲಾಗಿದೆ. ವಿಡಿಯೋದಲ್ಲಿ ಮಿರಿಂಡಾವನ್ನು ಪಾನಿಯ ಬದಲಿ ಪಾತ್ರೆಯಲ್ಲಿ ಹಾಕುವುದನ್ನು ಕಾಣಬಹುದು. ನಂತರ ಅದರಿಂದಲೇ ಗೋಲ್​ಗಪ್ಪ ತಯಾರಿಸಿ, ನೀಡಲಾಗಿದೆ. ಅದು ಹೇಗಿತ್ತು? ಆಹಾರ ಪ್ರಿಯರ ರಿಯಾಕ್ಷನ್ ಏನಿತ್ತು ಎಂಬ ಕುತೂಹಲವಿದೆಯೇ?

ಈ ವಿಡಿಯೋ ನೋಡಿ:

ಅಪ್​ಲೋಡ್ ಮಾಡಿದಲ್ಲಿಂದ ಇಲ್ಲಿಯವರೆಗೆ ಈ ವಿಡಿಯೋಗೆ ಸುಮಾರು 2.9 ಮಿಲಿಯನ್ ವೀಕ್ಷಣೆಗಳು ಸಿಕ್ಕಿವೆ. ಹಲವು ಜನ ಮಜವಾದ ಪ್ರತಿಕ್ರಿಯೆಗಳನ್ನು ಇದಕ್ಕೆ ಬರೆದಿದ್ದು, ‘ನೀವು ಇದಕ್ಕೆ ಹಣ ನೀಡಿದ್ದೀರಿ ಎಂದು ದಯವಿಟ್ಟು ಹೇಳಬೇಡಿ’ ಎಂದೆಲ್ಲಾ ಕಾಲೆಳೆದಿದ್ದಾರೆ. ಬಹಳಷ್ಟು ಜನ ಈ ಕಾಂಬಿನೇಷನ್​ಅನ್ನು ಅರ್ಥವಿಲ್ಲದ್ದು ಎಂದಿದ್ದು, ಇಂಥದ್ದನ್ನು ನಿಲ್ಲಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ವಿಡಿಯೋಗೆ ಬಹಳಷ್ಟು ಜನ ಧನಾತ್ಮಕವಾಗಿಯೂ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ

ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?

Published On - 4:20 pm, Fri, 17 December 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ