ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್​

ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ.

ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್​
ವೀಡಿಯೋದಿಂದ ತೆಗೆದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 18, 2021 | 12:50 PM

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ವೀಡಿಯೋಗಳಿಗೇನೂ ಕೊರತೆಯಿಲ್ಲ. ಹೊಸ ಹೊಸ ಪ್ರಯೋಗಗಳಿಂದ ಹಿಡಿದು ಹೊಸ ಬಗೆಯ ತಿನಿಸುಗಳನ್ನು ತಯಾರಿಸುವ ವೀಡಿಯೋಗಳೂ ವೈರಲ್​ ಆಗುತ್ತವೆ. ಇತ್ತೀಚೆಗೆ ಮಿರಿಂಡಾದಿಂದ ತಯಾರಿಸಿದ ಗೋಲಗಪ್ಪಾ ವೀಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಅದನ್ನು ನೋಡಿ ವಿಚಿತ್ರ ಕಾಮೆಂಟ್​ಗಳನ್ನು ಮಾಡಿದ್ದಾರೆ. ಇದೀಗ ಸೇಬುವಿನ ಸರದಿ. ಹೌದು ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ. ನಂತರ ಅದನ್ನು ಎಣ್ಣೆಯಿಂದ ಬೇಯಿಸಿ ತೆಗೆದು ತಿಂದಿದ್ದಾರೆ. ತಿಂದು ತಂಬ್ಸ್​ ಅಫ್​ ಎಮೋಜಿಯನ್ನೂ ತೋರಿಸಿದ್ದಾರೆ. ಈ ವೀಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್​ ಆಗಿದೆ.

ವೀಡಿಯೋದಲ್ಲಿ ಮೊದಲು ವ್ಯಕ್ತಿಯೊಬ್ಬರು ಸೇಬು ಹಣ್ಣೊಂದನ್ನು ತೆಗೆದುಕೊಂಡು ಹಿಟ್ಟಿನಲ್ಲಿ ಮುಳುಗಿಸುತ್ತಾರೆ. ಬಳಿಕ ಅದನ್ನು ಕಾದ ಬಿಸಿ ಎಣ್ಣೆಗೆ ಹಾಕುತ್ತಾರೆ. ಅದು ಬೆಂದಿದೆ ಎಂದು ಖಚಿತಪಡಿಸಿಕೊಂಡು ಎಣ್ಣೆಯಿಂದ ತೆಗೆದು ಅರ್ಧ ಭಾಗ ಮಾಡಿ ತಿನ್ನುತ್ತಾರೆ. ತಿಂದ ಬಳಿಕ ತಂಬ್ಸ್​ ಅಫ್​ ಮಾಡುತ್ತಾರೆ.

View this post on Instagram

A post shared by Whathowtry (@whathowtry)

ತಿಂಡಿ ಪ್ರಿಯರು ವಾವ್​ ಎಂದು ಉದ್ಘರಿಸಿದರೆ ಇನ್ನೂ ಕೆಲವರು ನಿಜವಾಗಿಯೂ ಇದು ನಂಬಲಸಾಧ್ಯ ಎಂದಿದ್ದಾರೆ. ಇನ್ಸ್ಟಾಗ್ರಾಮ್​ ನಲ್ಲಿ ವಾಟ್​ ಹೌ ಟ್ರೈ ಎನ್ನುವ ಪುಟ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋ ಫುಡ್​ ಪ್ರಿಯರನ್ನು ಆಕರ್ಷಿತಗೊಳಿಸಿದರೆ ಇನ್ನೂ ಕೆಲವರು ವಿಷಕಾರಿ ಕ್ಯಾಂಡಿ ಎಂದು ಕರೆದಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು ಕೆಲವರು ಸೇಬು ಫ್ರೈ ಅನ್ನು ತಯಾರಿಸಲು ಪ್ರಯತ್ನಿಸಿದ್ದಾರೆ.

 ಇದನ್ನೂ ಓದಿ:

Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ