AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​

ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

viral video: ಕುದುರೆ ಏರಿ ಮಂಟಪಕ್ಕೆ ಬಂದ ವಧು: ವೀಡಿಯೋ ವೈರಲ್​
ಕುದುರೆ ಏರಿ ಬಂದ ವಧು
TV9 Web
| Edited By: |

Updated on:Dec 18, 2021 | 3:43 PM

Share

ಗಯಾ: ಭಾರತೀಯ ಮದುವೆ ಸಮಾರಂಭಗಳಲ್ಲಿ ವಿಭಿನ್ನ ರೀತಿಯ ವಧುವರರ ಆಗಮನ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ವಧು ವರರನ್ನು ಉಯ್ಯಾಲೆಯಲ್ಲಿ ಕರೆತರುವುದು, ಜೆಸಿಬಿಯಲ್ಲಿ ಕರೆದುಕೊಂಡು ಬರುವುದು ಸೇರಿದಂತೆ ಈ ರೀತಿಯ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವೆಂಟ್​ ಮ್ಯಾನೇಜ್ಮೆಂಟ್​ ಕಂಪನಿಗಳು ಹುಟ್ಟಿಕೊಂಡ ಬಳಿಕ ವಧುವರರ ವೆಲ್​ಕಮ್​ ಮಾಡಲು ಹೊಸ ಹೊಸ ಐಡಿಯಾಗಳನ್ನು ಕಾಣಬಹುದು. ಹೀಗೆ ವಿಭಿನ್ನ ಐಡಿಯಾಗಳಿಗೆ ಕೆಲವೊಮ್ಮೆ ಅಪರೂಪದ ಘಟನೆಗಳೂ ಸಾಕ್ಷಿಯಾಗುತ್ತವೆ.

ಅದನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಮದುವೆಯ ವರ ಕುದುರೆ ಏರಿ ಮಂಟಪಕ್ಕೆ ಬರುತ್ತಾನೆ. ಆದರೆ ಇಲ್ಲೊಬ್ಬಳು ವಧು, ನಾನು ನನ್ನ ಗಂಡನನ್ನು ಪಡೆಯಲು ಹೊರಟಿದ್ದೇನೆ ಎಂದು ಕುದುರೆ ಏರಿಕೊಂಡು ಮದುವೆ ಮನೆಗೆ ಮೆರವಣಿಗೆ ಮೂಲಕ ಹೋದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.  ಸುದ್ದಿ ಸಂಸ್ಥೆ ಎಎನ್​ಐ ಇದರ ವಿಡಿಯೋವನ್ನು ಹಂಚಿಕೊಂಡಿದೆ.

ಗಯಾ ಮೂಲದ ಅನುಷ್ಕಾ ಗುಹಾ ಎನ್ನುವವರು ಈ ರೀತಿ ಮದುವೆಗೆ ಕುದುರೆ ಏರಿ ಮೆರವಣಿಗೆ ಮೂಲಕ ಸಾಗಿದ್ದಾರೆ. ಫ್ಲೈಟ್​ ಅಟೆಂಡೆಂಟ್​ ಆಗಿರುವ ಅನುಷ್ಕಾ ಅವರು ಕೋಲ್ಕತ್ತಾ ಮೂಲದ ಉದ್ಯಮಿ ಜೀತ್​ ಮುಖರ್ಜಿ ಎನ್ನುವವರನ್ನು ವಿವಾಹವಾಗಿದ್ದಾರೆ. ಈ ವೇಳೆ ಲೆಹೆಂಗಾ ಧರಿಸಿ ಕುದುರೆ ಏರಿ ಬಂದಿದ್ದಾರೆ. ಈ ಬಗ್ಗೆ ಅನುಷ್ಕಾ ಹುಡುಗರು ಮಾತ್ರ ಏಕೆ ಕುದುರೆ ಏರಿ ಬರಬೇಕು. ನಾನು ಹುಡುಗಿ ಆದರೂ ಕುದುರೆ ಹತ್ತಿಕೊಂಡು ಬಂದಿದ್ದೇನೆ. ಇದನ್ನು ಪ್ರಶ್ನೆ ಮಾಡದ್ದಿದ್ದಕ್ಕೆ ನನ್ನ ಪತಿಗೆ ಧನ್ಯವಾದಗಳೆ ಎಂದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಧು ಅನುಷ್ಕಾ ಕುದುರೆ ಏರಿ ಬಂದ ವೀಡಿಯೋ ವೈರಲ್​ ಅಗಿದೆ. ಮದುವೆಯಲ್ಲಿ ಧರಿಸುವ ಭಾರವಾದ ಲೆಹೆಂಗಾ ಧರಿಸಿ ಕುದುರೆ ಸವಾರಿ ಮಾಡಿಕೊಂಡು ಬಂದ ಅನುಷ್ಕಾ ಅವರನ್ನು ನೋಡಿ ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ

Published On - 3:36 pm, Sat, 18 December 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ