AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ಈ ರೀತಿಯಾ ತುಂಟಾಟಗಳು ಇರದ ಹೊರತು ಮದುವೆ ಪೂರ್ಣವಾಗುವುದಿಲ್ಲ ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಿದ್ದಾರೆ. ವಿವಾಹ ಮಹೋತ್ಸವದಲ್ಲಿ ಹೇಗೆಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ವಧು-ವರರನ್ನು ಕಿಚಾಯಿಸುತ್ತಾರೆ ಎನ್ನುವುದರ ಮೇಲೆ ಈ ವಿಡಿಯೋ ಬೆಳಕು ಚೆಲ್ಲಿದೆ.

Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ
ವರನ ಶೂ ತೆಗೆಯುತ್ತಿರುವ ದೃಶ್ಯ
TV9 Web
| Edited By: |

Updated on: Dec 18, 2021 | 1:18 PM

Share

ಈಗ ಮದುವೆ ಅತಿ ಹೆಚ್ಚಾಗಿ ನಡೆಯುವ ಸಂದರ್ಭ. ಹೀಗಾಗಿಯೇ ಮದುವೆಯ (Wedding) ಸೀಜನ್ ಎಂದು ಕರೆಯಲಾಗುತ್ತದೆ. ಮದುವೆ ಸಂಭ್ರಮ ಎಂದರೆ ಸುಮ್ಮನೆನಾ ಪ್ರತಿಯೊಂದು ತಯಾರಿ ಕೂಡ ಮುಖ್ಯ. ಅದರಲ್ಲೂ ಸ್ನೇಹಿತರು ತಮ್ಮದೇ ರೀತಿಯಲ್ಲಿ ವಿವಾಹಮಹೋತ್ಸವಕ್ಕೆ ಸಿದ್ಧವಾಗುತ್ತಾರೆ. ವಧು- ವರರನ್ನು ಮೆಚ್ಚಿಸಲು ಅಥವಾ ಅವರ ಕಾಲೆಳೆಯಲು ಸ್ನೇಹಿತರ ಗುಂಪು ಸದಾ ಮುಂದೆ ಇರುತ್ತದೆ. ಇಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಜೂತ ಚುರೈ ಎಂಬ ಆಚರಣೆ ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ಮದುವೆಗಳಲ್ಲೂ ಇದೆ. ಸ್ನೇಹಿತರು ಮತ್ತು ಸಂಬಂಧಿಕರು ವರನ ಚಪ್ಪಲಿ ಕದ್ದು, ಹಣಕ್ಕೆ ಬೇಡಿಕೆ ಇಡುತ್ತಾರೆ. ಈ ರೀತಿಯಲ್ಲಿಯೇ ಮದುವೆ ಮಂಟಪದಲ್ಲಿ ವರನ ಕಾಲಿನಲ್ಲಿನ ಶೂ ಕಿತ್ತು ಸ್ನೇಹಿತರು ತುಂಟಾಟವಾಡಿದ್ದಾರೆ. ಈ ತಮಾಷೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಸ್ಯಲೋಕದಲ್ಲಿ ತೇಲಾಡಿದ್ದಾರೆ.

ವೈರಲ್​ ಆದ ಈ ವಿಡಿಯೋದಲ್ಲಿ ಮದುವೆ ಮಂಟಪದ ವೇದಿಕೆಯಲ್ಲಿ ಫ್ಯಾಮಿಲಿ ಫೋಟೋ ಸೆಷನ್ ನಡೆಯುತ್ತಿರುವುದು ಕಂಡು ಬರುತ್ತದೆ. ಅದರಂತೆ ಸಂಬಂಧಿಕರು ಮತ್ತು ಸ್ನೇಹಿತರು ಮೊದಲು ನವಜೋಡಿಯ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಬಳಿಕ ವರನ ಕಾಲಿಗೆ ಕೈ ಹಾಕಿ ಶೂ ಕಿತ್ತುಕೊಂಡಿದ್ದಾರೆ. ಈ ವೇಳೆ ಬಿಡಿಸಲು ಪ್ರಯತ್ನಪಟ್ಟ ವಧುವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಾಗಿದೆ. ಈ ವಿಡಿಯೋ ಸದ್ಯ ವೈರಲ್​ ಆಗಿದೆ.

ಈ ವಿಡಿಯೋವನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ಈ ರೀತಿಯಾ ತುಂಟಾಟಗಳು ಇರದ ಹೊರತು ಮದುವೆ ಪೂರ್ಣವಾಗುವುದಿಲ್ಲ ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಿದ್ದಾರೆ. ವಿವಾಹ ಮಹೋತ್ಸವದಲ್ಲಿ ಹೇಗೆಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ವಧು-ವರರನ್ನು ಕಿಚಾಯಿಸುತ್ತಾರೆ ಎನ್ನುವುದರ ಮೇಲೆ ಈ ವಿಡಿಯೋ ಬೆಳಕು ಚೆಲ್ಲಿದೆ. ನೆಟ್ಟಿಗರು ಕೂಡ ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅವರು ತಮ್ಮ ಲೈಕ್‌ ಮತ್ತು ಕಾಮೆಂಟ್‌ಗಳ ಮೂಲಕ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅನೇಕರು ಈ ವಿಡಿಯೋವನ್ನು ರಿಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಸೇಬುವನ್ನು ಎಣ್ಣೆಯಲ್ಲಿ ಬೇಯಿಸಿ ತಿಂದ ವ್ಯಕ್ತಿ: ವಿಚಿತ್ರ ಖಾದ್ಯದ ವೀಡಿಯೋ ವೈರಲ್​

Viral video: ಗಂಭೀರ ಸ್ಥಿತಿಯಲ್ಲಿದ್ದ ಕೋತಿಗೆ ಉಸಿರು ನೀಡಿ ಪ್ರಾಣ ಉಳಿಸಿದ ಕಾರು ಚಾಲಕ; ವಿಡಿಯೋ ವೈರಲ್​

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ