ಮನೆಯಲ್ಲಿ ಸಾಕಿದ ಶ್ವಾನವೊಂದು ತನ್ನ ಒಡತಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಹೌದು. ಆ ಮಹಿಳೆಗೆ ನೆರೆದಿರುವ ಎಲ್ಲರೂ ಶುಭಾಶಯ ಹೇಳುತ್ತಿರುವಂತೆಯೇ ಶ್ವಾನ ಕೂಡ ಎದ್ದು ನಿಂತು ತನ್ನ ಮುಂದಿನ ಕಾಲುಗಳನ್ನು ತಟ್ಟಿ ಪ್ರೀತಿ ತೋರಿದೆ. ಅಷ್ಟೇ ಅಲ್ಲದೇ, ತನ್ನ ಒಡತಿಗೆ ಶುಭಾಶಯ ಹೇಳುವಂತೆ ಸಂಭ್ರಮದಲ್ಲಿ ಭಾಗಿಯಾಗಿದೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ಆಗಿರುವ ವಿಡಿಯೋ:
ಫೇಸ್ಬುಕ್ನಲ್ಲಿ ಆರುಣಿಮಾ ಎಂಬ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋ ನೋಡಿ, ಪ್ರಾಣಿಪ್ರಿಯರು ಅಚ್ಚರಿ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ, ಆ ಶ್ವಾನದ ಬುದ್ಧಿ ಮತ್ತೆಗೆ ಶಹಬ್ಬಾಸ್ ಅಂದಿದ್ದಾರೆ.
ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ, ‘‘ಯಾರು ಹೇಳಿದ್ದು, ಅವನಿಗೆ ಚಪ್ಪಾಳೆ ತಟ್ಟಲು ಬರೋದಿಲ್ಲ ಅಂತಾ…’ ಎಂದು ಕ್ಯಾಪ್ಶನ್ ಬರೆಯಲಾಗಿದೆ. ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸುಮಾರು ಇಪ್ಪತ್ತು ಸಾವಿರ ಇಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಸುಮಾರು ಇಷ್ಟೇ ಸಂಖ್ಯೆಯ ಜನರು ವಿಡಿಯೋವನ್ನು ಹಂಚಿಕೊಂಡು ಪ್ರೀತಿ ತೋರಿದ್ದಾರೆ. ಇದನ್ನು ನೋಡಿದ ನಿಮಗೇನನ್ನಿಸಿತು?
ಇದನ್ನೂ ಓದಿ:
ಸಿಂಹದಂತೆ ಘರ್ಜಿಸಿದ ರಾಯನ್ ರಾಜ್ ಸರ್ಜಾ; ಚಿರು ಪುತ್ರನ ವಿಡಿಯೋ ವೈರಲ್
ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ