ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಮೇಘನಾ ರಾಜ್ (Meghana Raj) ಪುತ್ರ ರಾಯನ್ ರಾಜ್ ಸರ್ಜಾ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ಮೇಘನಾ ರಾಜ್ ಅವರು ಮಗನ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ರಾಯನ್ ರಾಜ್ ಸರ್ಜಾನ (, Raayan Raj Sarja) ಗೆಳೆಯರ ಬಳಗದ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಪುತ್ರನ ಇನ್ನೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಿಂಹ ಹೇಗೆ ಘರ್ಜಿಸುತ್ತದೆ ಎಂದು ಅನುಕರಿಸಿ ತೋರಿಸಿದ್ದಾನೆ ರಾಯನ್. ಪತಿಯನ್ನು ಕಳೆದುಕೊಂಡ ನಂತರ ಮೇಘನಾ ಬದುಕಿಗೆ ಕತ್ತಲು ಆವರಿಸಿತ್ತು. ಪುತ್ರನ ಆಗಮನದ ಬಳಿಕವೇ ಅವರ ಮೊಗದಲ್ಲಿ ನಗು ಮೂಡಿತು. ರಾಯನ್ ರಾಜ್ ಸರ್ಜಾನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ನಟನೆಗೆ ಮರಳಿದ್ದಾರೆ.
ಇದನ್ನೂ ಓದಿ:
ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್
ಹೇಗಿದೆ ಗೊತ್ತಾ ಚಿರು ಪುತ್ರನ ಫ್ರೆಂಡ್ಸ್ ಗ್ಯಾಂಗ್? ಇಲ್ಲಿದೆ ರಾಯನ್ ರಾಜ್ ಸರ್ಜಾ ಗೆಳೆಯರ ಫೋಟೋ ಆಲ್ಬಂ