- Kannada News Photo gallery Raayan Raj Sarja birthday photos: Meghana Raj hosts grand party for film industry friends
ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ಫೋಟೋ ಗ್ಯಾಲರಿ; ಸೆಲೆಬ್ರಿಟಿಗಳ ಜೊತೆ ಚಿರು-ಮೇಘನಾ ಪುತ್ರ ಮಿಂಚಿಂಗ್
Raayan Raj Sarja: ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಶುಕ್ರವಾರ (ಅ.22) ಜನ್ಮದಿನದ ಸಂಭ್ರಮ. ಜೆಪಿ ನಗರದ ಮನೆಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಪಾರ್ಟಿಯ ಫೋಟೋಗಳು ಇಲ್ಲಿವೆ...
Updated on: Oct 23, 2021 | 8:46 AM

Raayan Raj Sarja birthday photos: Meghana Raj hosts grand party for film industry friends

Raayan Raj Sarja birthday photos: Meghana Raj hosts grand party for film industry friends

ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ, ಸ್ನೇಹಿತರಾದ ಪ್ರಜ್ವಲ್ ದೇವರಾಜ್, ಪನ್ನಗ ಭರಣ, ರಾಗಿಣಿ ಚಂದ್ರನ್ ಮುಂತಾದವರು ಬರ್ತ್ಡೇ ಪಾರ್ಟಿಯಲ್ಲಿ ಹಾಜರಿ ಹಾಕಿದ್ದರು. ರಾಯನ್ಗೆ ಬಗೆಬಗೆಯ ಉಡುಗೊರೆ ನೀಡಿದರು.

ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ಮಿಂದೆದ್ದಿದ್ದಾರೆ. ‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಚಿರು ಸ್ನೇಹಿತ ಪನ್ನಗ ಭರಣ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಅದರಲ್ಲಿ ಮೇಘನಾ ರಾಜ್ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಅವರು ಕಮ್ಬ್ಯಾಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.



















