ಕಾಡುಕುರಿಯೊಂದನ್ನು ಹೊಂಚುಹಾಕುತ್ತಾ ಕುಳಿತು ಬೇಟೆಯಾಡಿದ ಚಿರತೆಯ ವಿಡಿಯೋ ವೈರಲ್!
ಈ ವಿಡಿಯೋನಲ್ಲಿ ಚಿರತೆ ಕಾಡುಕುರಿಯೊಂದನ್ನು ಬೇಟೆಯಾಡಿದೆ. ಸ್ವಲ್ಪ ಹೊತ್ತು ರಸ್ತೆಯ ಅಂಚಿನಲ್ಲಿ ಹೊಂಚು ಹಾಕುತ್ತಾ ಕೂತ ಅದು ಕುರಿಯ ಸುಳಿವು ಸಿಗುತ್ತಿದ್ದಂತೆ ಮರಗಿಡಗಳ ಪೊದೆಯಲ್ಲಿ ಚಂಗನೆ ಜಿಗಿಯುತ್ತದೆ.
ಹಿಂಸ್ರಪಶುಗಳಲ್ಲಿ ಚಿರತೆ ನಿಸ್ಸಂದೇಹವಾಗಿ ಒಂದು ಅಪಾಯಕಾರಿ ಮತ್ತು ಚಾಣಾಕ್ಷ ಬೇಟೆಗಾರ ಮಾರಾಯ್ರೇ. ಬೆಕ್ಕಿನ ಜಾತಿಗೆ ಸೇರಿದ ಹುಲಿ, ಚಿರತೆಗಳೇ ಹಾಗೆ. ಹೊಂಚುಹಾಕತ್ತಾ ಕುಳಿತು ತಮ್ಮ ಬೇಟೆಯ ಮೇಲೆ ಅವು ಎರಗುವ ದೃಶ್ಯ ರೋಚಕ. ಅಂಥದ್ದೇ ಒಂದು ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕೆಮೆರಾನಲ್ಲಿ ಸೆರೆಹಿಡಿದಿದ್ದು ಸದರಿ ವಿಡಿಯೋ ವೈರಲ್ ಆಗಿದೆ. ಅಂದಹಾಗೆ, ಈ ವಿಡಿಯೋ ಚಾಮರಾಜನಗರದ ರಸ್ತೆಯಲ್ಲಿ ಶೂಟ್ ಆಗಿದೆ. ತನ್ನ ಪಕ್ಕದಲ್ಲೇ ಕಾರು ಬಂದು ನಿಂತರೂ ಬೇಟೆಗಾಗಿ ಹೊಂಚು ಹಾಕುತ್ತಿರುವ ಚಿರತೆಗೆ ಅದರ ಪರಿವೆ ಇಲ್ಲ. ಹುಲಿ, ಚಿರತೆ ಮತ್ತು ಬೆಕ್ಕು ಬೇಟೆಯಾಡುವ ಸೊಬಗೇ ಹಾಗೆ. ಹೊಂಚು ಹಾಕುತ್ತಾ ಕುಳಿತಾಗ ಪಕ್ಕದಲ್ಲಿ ಬಾಂಬ್ ಸ್ಫೋಟಗೊಂಡರೂ ಅವುಗಳ ಏಕಾಗ್ರತೆಗೆ ಭಂಗ ಬಾರದು.
ಮನೆಗಳಲ್ಲಿ ಇಲಿಯನ್ನು ಹಿಡಿದು ತಿನ್ನಲು ಹೊಂಚು ಹಾಕುತ್ತಾ ಕುಳಿತಿರುವ ಬೆಕ್ಕನ್ನು ನೀವು ನೋಡಿರಬಹುದು. ಆದರೆ ಏಕಾಗ್ರತೆ ಚೇತೇಶ್ವರ ಪೂಜಾರಾಕ್ಕಿಂತ ಮಿಗಿಲಾದದ್ದು! ಅದನ್ನು ಯಾವತ್ತೂ ತಡುವುವ ಪ್ರಯತ್ನ ಮಾಡಬೇಡಿ. ಅದರ ಏಕಾಗ್ರತೆಗೆ ಭಂಗವಾದರೆ ಕೋಪದಿಂದ ನಮ್ಮ ಮೇಲೆಯೇ ದಾಳಿ ಮಾಡುವ ಅಪಾಯವಿರುತ್ತದೆ. ಇಲಿಗಾಗಿ ಅದು ಗಂಟೆಗಟ್ಟಲೆ ಕಾಯುತ್ತಾ ಕೂತಿರುತ್ತದೆ.
ಇಲಿಯನ್ನು ಹಿಡಿದ ಮೇಲೆ ಬೆಕ್ಕು ಅದನ್ನು ತಿನ್ನುವ ಮೊದಲು ಪೀಡಿಸುವ ಪರಿಯನ್ನು ನೋಡಿದ್ದೀರಾ? ಅದನ್ನು ಕಂಡೇ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಗಾದೆ ಮಾತು ಹುಟ್ಟಿದ್ದು.
ಈ ವಿಡಿಯೋನಲ್ಲಿ ಚಿರತೆ ಕಾಡುಕುರಿಯೊಂದನ್ನು ಬೇಟೆಯಾಡಿದೆ. ಸ್ವಲ್ಪ ಹೊತ್ತು ರಸ್ತೆಯ ಅಂಚಿನಲ್ಲಿ ಹೊಂಚು ಹಾಕುತ್ತಾ ಕೂತ ಅದು ಕುರಿಯ ಸುಳಿವು ಸಿಗುತ್ತಿದ್ದಂತೆ ಮರಗಿಡಗಳ ಪೊದೆಯಲ್ಲಿ ಚಂಗನೆ ಜಿಗಿಯುತ್ತದೆ.
ಮುಂದಿನ ಫ್ರೇಮಿನಲ್ಲಿ ಅದು ತನ್ನ ಬೇಟೆಯನ್ನು ತಾನು ಹೊಂಚುಹಾಕುತ್ತಾ ಕುಳಿತಿದ್ದ ಜಾಗಕ್ಕೆ ಎಳೆತಂದು ತಿನ್ನುತ್ತದೆ. ತನ್ನ ಗುರಿ ತಪ್ಪದು ಅತ ವಿಡಿಯೋ ರೆಕಾರ್ಡ್ ಮಾಡುತ್ತಿರುವವನಿಗೆ ಗೊತ್ತಾಗಲು ಅದು ಬೇಟೆಯನ್ನು ರಸ್ತೆಗೆ ಎಳೆತಂದಿತೇ?
ಇರಬಹುದು ಮಾರಾಯ್ರೇ!
ಇದನ್ನೂ ಓದಿ: ಬೆಳಗಾವಿಯಲ್ಲಿ ಸೀರೆಗಳನ್ನ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ; ವಿಡಿಯೋ ಇದೆ