ಬೆಳಗಾವಿಯಲ್ಲಿ ಸೀರೆಗಳನ್ನ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ; ವಿಡಿಯೋ ಇದೆ
ಅಕ್ಟೋಬರ್ ಎರಡರಂದು ಕೂಡಾ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರವ ಖಾದಿ ಎಂಪೋರಿಯಂನಲ್ಲಿ ಬೊಮ್ಮಾಯಿ 10 ಜುಬ್ಬಾ ಪೀಸ್ಗಳನ್ನ ಖರೀದಿಸಿದ್ದರು.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಿನ್ನೆ (ಡಿ.1 ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆದಿದೆ. ಉದ್ಘಾಟನೆ ನಂತರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರಾಟ ಮೇಳದಲ್ಲಿ ಬಟ್ಟೆಗಳು ಸೇರಿ ಇತರೆ ವಸ್ತುಗಳನ್ನ ವೀಕ್ಷಿಸಿದರು. ನೀಲಿ ಬಣ್ಣದ ಸೀರೆಯನ್ನು ಕವರ್ನಿಂದ ತೆಗೆದು ನೋಡಿದರು. ಎರಡು ಮೂರು ಸೀರೆಗಳನ್ನ ನೋಡಿ ನಂತರ ಬೇರೆ ವಸ್ತುಗಳನ್ನ ವೀಕ್ಷಿಸಲು ತೆರಳಿದರು. ಬಳಿಕ ವಿವಿಧ ಬಗೆಯ ಬುಟ್ಟಿಗಳನ್ನ ನೋಡಿದರು. ಈ ವೇಳೆ ಸಿಎಂಗೆ ಅಶ್ವಥ್ ನಾರಾಯಣ ಸಾಥ್ ನೀಡದರು. ಅಕ್ಟೋಬರ್ ಎರಡರಂದು ಕೂಡಾ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರವ ಖಾದಿ ಎಂಪೋರಿಯಂನಲ್ಲಿ ಬೊಮ್ಮಾಯಿ 10 ಜುಬ್ಬಾ ಪೀಸ್ಗಳನ್ನ ಖರೀದಿಸಿದ್ದರು. ಅಂದು ಪತ್ನಿಗೆ ಸೀರೆಯನ್ನೂ ಖರೀದಿಸಿದ್ದರು. ಆದರೆ ನಿನ್ನೆ ಮಾರಾಟ ಮೇಳದಲ್ಲಿ ಸೀರೆಯನ್ನು ಖರೀದಿಸಿಲ್ಲ.
ಇದನ್ನೂ ಓದಿ
ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ
Latest Videos