Pre-Vibrant Gujarat Summit 2021: ನೈಸರ್ಗಿಕ ಕೃಷಿ ಬಗ್ಗೆ ಇಂದು ದೇಶದ ರೈತರನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಮಿಟ್ನಲ್ಲಿ ವರ್ಚ್ಯುವಲ್ ಆಗಿ ಮಾತನಾಡಲಿದ್ದಾರೆ. ಹಾಗೇ, ನೈಸರ್ಗಿಕ ಕೃಷಿ ಬಗ್ಗೆ ನಡೆಯುವ ಈ ಶೃಂಗ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು ಎಂದು ಹೇಳಲಾಗಿದೆ.
ಗುಜರಾತ್ನಲ್ಲಿ ನಡೆಯುತ್ತಿರುವ ನೈಸರ್ಗಿಕ ಮತ್ತು ಶೂನ್ಯ ಬಂಡವಾಳ ಕೃಷಿ (Natural and Zero-Budget Farming) ಶೃಂಗದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ದೇಶದ ರೈತರು ಮತ್ತು ಕೃಷಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಪ್ರೀ-ವೈಬ್ರಂಟ್ ಗುಜರಾತ್ ಸಮಿಟ್ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ನೈಸರ್ಗಿಕ ಕೃಷಿ ಶೃಂಗವು ಡಿಸೆಂಬರ್ 14ರಂದು ಪ್ರಾರಂಭವಾಗಿದ್ದು, ಇಂದು ಮುಕ್ತಾಯಗೊಳ್ಳಲಿದೆ.
प्री-वाइब्रेंट गुजरात समिट 2021 के तहत प्रधानमंत्री श्री @narendramodi जी “जीरो बजट प्राकृतिक खेती” विषय पर आयोजित राष्ट्रीय शिखर सम्मेलन को सम्बोधित करेंगे…@AgriGoIhttps://t.co/pEM00ofmPO pic.twitter.com/lG16tr1XjF
— Narendra Singh Tomar (@nstomar) December 15, 2021
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಮಿಟ್ನಲ್ಲಿ ವರ್ಚ್ಯುವಲ್ ಆಗಿ ಮಾತನಾಡಲಿದ್ದಾರೆ. ಹಾಗೇ, ನೈಸರ್ಗಿಕ ಕೃಷಿ ಬಗ್ಗೆ ನಡೆಯುವ ಈ ಶೃಂಗ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳಲು ಬಿಜೆಪಿಯು ಪ್ರತಿ ಮಂಡಲದಲ್ಲೂ ದೊಡ್ಡ ಪರದೆ ವ್ಯವಸ್ಥೆ ಮಾಡಿದೆ. ಸಮಾರಂಭ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1ಗಂಟೆಯವರೆಗೂ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ; ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
Published On - 9:55 am, Thu, 16 December 21