ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ; ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನದ ಮೊತ್ತದ ಬಗ್ಗೆ ಪರಿಷ್ಕರಣೆ ನಡೆಸಿದ ಕರ್ನಾಟಕ ಸರ್ಕಾರ, ಇದೀಗ ಐದು ಪಟ್ಟು ಹೆಚ್ಚಿಸಿದೆ.

ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ; ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: sandhya thejappa

Updated on:Dec 16, 2021 | 10:57 AM

ಬೆಳಗಾವಿ: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಿಸಿ ಬೆಳಗಾವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಣೆ ಮಾಡಿದ್ದಾರೆ. ನಗದು ಅನುದಾನದ ಮೊತ್ತದ ಬಗ್ಗೆ ಪರಿಷ್ಕರಣೆ ನಡೆಸಿದ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ. ಪರಮವೀರ ಚಕ್ರ 25 ಲಕ್ಷದಿಂದ 1.5 ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ. ಮಹಾವೀರ ಚಕ್ರ 12 ಲಕ್ಷದಿಂದ 1 ಕೋಟಿ‌ ರೂಪಾಯಿ, ಅಶೋಕ ಚಕ್ರ 25 ಲಕ್ಷದಿಂದ 1.5 ಕೋಟಿ ರೂಪಾಯಿ, ಕೀರ್ತಿ ಚಕ್ರ 12 ಲಕ್ಷದಿಂದ 1 ಕೋಟಿ ರೂಪಾಯಿ, ವೀರ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಶೌರ್ಯ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಸೇನಾ ಮೆಡಲ್‌ 2 ಲಕ್ಷದಿಂದ 15 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಸಿಎಂ ಆದೇಶಿದ್ದಾರೆ.

ಈ ವೇಳೆ ಮುಂದುವರಿದು ಮಾತನಾಡಿದ ಸಿಎಂ, ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅಂತರಿಕ ಭದ್ರತೆಯಲ್ಲಿ ಸೇನೆಯ ಪಾತ್ರ ಬಹಳ ಮುಖ್ಯ. ತಂತ್ರಜ್ಞಾನದಲ್ಲೂ ಸೇನೆಗೆ ಮುಂಚೂಣಿಯಲ್ಲಿದೆ. ಭಾರತದ ಪಾಕಿಸ್ತಾನದ ಯುದ್ಧದಲ್ಲಿ ನಾವು ಗೆದಿದ್ದೇವೆ. 1971 ರಲ್ಲಿ ಭಾರತ ಪಾಕಿಸ್ತಾನ ವಿರುದ್ಧ  ಗೆದ್ದಿರುವುದನ್ನು ಇಡೀ ವಿಶ್ವವೇ ಭಾರತದ ಸೇನೆ ಶಕ್ತಿಯನ್ನ ನೋಡಿದೆ. ಭಾರತ ಸೇನೆಯ ಶಕ್ತಿ ಮತ್ತು ತಂತ್ರಜ್ಞಾನದ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಈ ವಿಜಯ ದಿವಸ ಇಡೀ ದೇಶಕ್ಕೆ ಸಲ್ಲಲ್ಲಿದೆ. ಭಾರತಕ್ಕೆ ಈ ದಿವಸ ತುಂಬಾ ಮುಖ್ಯವಾದ ದಿವಸ. ಭಾರತ ತನ್ನ ಶಕ್ತಿಯನ್ನ ವಿಶ್ವಕ್ಕೆ ತೋರಿಸಿದ ದಿವಸ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಇತ್ತೀಚೆಗೆ ಹೆಲಿಕಾಪ್ಟರ್ ದುರುಂತದಲ್ಲಿ ಸಾವನ್ನಪ್ಪಿದ ಬಿಪಿನ್ ರಾವತ್ ಹಾಗೂ 13 ಜನರ ಸಾವಿಗೆ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದರು. ಅಲ್ಲದೇ ಬಿಪಿನ್ ರಾವತ್ ಕಾರ್ಯವನ್ನ ಶ್ಲಾಘಿಸಿದರು.

ಇದನ್ನೂ ಓದಿ

Isa Guha: ಬಿಗ್​ಬ್ಯಾಷ್​ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿ: ಭಾರತದ ಮಹಿಳಾ ಕಾಮೆಂಟೇಟರ್ ಮಾತಾಡಿದ್ದು ಏನು ಗೊತ್ತೇ?

ಪ್ರಪಂಚದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಬಿಜೆಪಿಯದ್ದು, ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ

Published On - 10:42 am, Thu, 16 December 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ