ಆರ್ ಎಲ್ ಜಾಲಪ್ಪನನ್ನು ಕಳೆದುಕೊಂಡು ಮಂಕಾದ ಶ್ವಾನ; ವಿಡಿಯೋ ನೋಡಿ
ಜಾಲಪ್ಪ ಅವರು ಪ್ರತಿನಿತ್ಯ ಸಂಜೆ ಶ್ವಾನದ ಜೊತೆ ವಾಕಿಂಗ್ ಹೋಗುತ್ತಿದ್ದರು. ಆದರೆ ಇದೀಗ ಜಾಲಪ್ಪ ವಿಧಿವಶರಾದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಮನೆಯಲ್ಲಿರುವ ನಾಯಿ ಕಣ್ಣೀರು ಹಾಕಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿನ್ನೆ (ಡಿ.17) ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನೇತ್ರದಾನ ಮಾಡಿರುವ ಕೇಂದ್ರದ ಮಾಜಿ ಸಚಿವ ಜಾಲಪ್ಪ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇನ್ನು ಮಾಲೀಕನನ್ನ ಕಳೆದುಕೊಂಡು ಪ್ರೀತಿಯಿಂದ ಸಾಕಿದ್ದ ಶ್ವಾನ ಮಂಕಾಗಿದೆ. ಆರ್ ಎಲ್ ಜಾಲಪ್ಪ ಅವರು ಶ್ವಾನವನ್ನು ಮುದ್ದಾಗಿ ಸಾಕಿದ್ದರು.ಜಾಲಪ್ಪ ಅವರು ಪ್ರತಿನಿತ್ಯ ಸಂಜೆ ಶ್ವಾನದ ಜೊತೆ ವಾಕಿಂಗ್ ಹೋಗುತ್ತಿದ್ದರು. ಆದರೆ ಇದೀಗ ಜಾಲಪ್ಪ ವಿಧಿವಶರಾದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಮನೆಯಲ್ಲಿರುವ ನಾಯಿ ಕಣ್ಣೀರು ಹಾಕಿದೆ.
ಈ ಹಿಂದೆ ಜನತಾ ದಳದ ಮತ್ತೊಬ್ಬ ಹಿರಿಯ ನಾಯಕ, ಹಾಲಿ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಅವರ ತಂದೆ ಮತ್ತು ಆರ್ ಎಲ್ ಜಾಲಪ್ಪ ಅವರ ಆಪ್ತರೂ ಆಗಿದ್ದ ಭೈರೇಗೌಡರು ನಿಧನರಾದಾಗ ಅವರು ಸಾಕಿದ್ದ ನಾಯಿಯೊಂದು ಅವರ ಸಮಾಧಿ ಮುಂದೆ ಗೋಳಾಡಿದ್ದನ್ನು ಕೋಲಾರದ ಜನತೆ ಕಂಡು ಮಮ್ಮಲ ಮರುಗಿದ್ದರು.
ಇದನ್ನೂ ಓದಿ
ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ