ದುಬೈನಲ್ಲಿ 83 ಸಿನಿಮಾ ಪ್ರಮೋಟ್ ಮಾಡಿದ ದೀಪಿಕಾ ಮತ್ತು ರಣವೀರ್ ತಮ್ಮ ಉಡುಗೆಗಳಿಂದ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ!
ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಶೇರ್ ಮಾಡಿರುವ ರಣವೀರ್ ಅವುಗಳಿಗೆ, ‘ಡಿಸ್ಕೋ ಜ್ವಾಲೆ, ಬನ್ನಿ ಹೋಗೋಣ,’ ಅಂತ ಶೀರ್ಷಿಕೆ ನೀಡಿದ್ದಾರೆ. ಸೆಲಿಬ್ರಿಟಿ ಸ್ಟೈಲಿಸ್ಟ್ ಶಾಲೀನಾ ನಥಾನಿ ಅವರು ದೀಪಿಕಾ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ದುಬೈನಲ್ಲಿರುವ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಕಲೀಫಾನಲ್ಲಿ ತಮ್ಮ 83 ಚಿತ್ರವನ್ನು ಪ್ರಮೋಟ್ ಮಾಡಿದ ನಂತರ ಬಾಲಿವುಡ್ನ ಅತಿ ಜನಪ್ರಿಯ ಮತ್ತು ಫ್ಯಾಶನೇಬಲ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈಗೆ ವಾಪಸ್ಸಾಗಿದ್ದಾರೆ. ದುಬೈನಲ್ಲಿ ಸೆರೆಹಿಡಿದ ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ ಮಾರಾಯ್ರೇ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದೀಪ್ವೀರ್ ಜೋಡಿಯು 83 ಸಿನಿಮಾದ ಟ್ರೇಲರ್ ವೀಕ್ಷಿಸಿದರು. ಆ ಸಂದರ್ಭದಲ್ಲಿ ಅವರೊಂದಿಗೆ ಕಪಿಲ್ ದೇವ್ ಮತ್ತು ಸಿನಿಮಾನಲ್ಲಿ ನಟಿಸಿರುವ ಬೇರೆ ನಟ ನಟಿಯರು ಹಾಜರಿದ್ದರು. ಸದರಿ ಕಾರ್ಯಕ್ರಮಕ್ಕೆಂದೇ ದೀಪಿಕಾ ಮತ್ತು ರಣವೀರ್ 70 ರ ದಶಕ ಡಿಸ್ಕೋ ಯುಗದ ಔಟ್ಫಿಟ್ಗಳನ್ನು ಧರಿಸಿದ್ದರು. ಅವರು ಧರಿಸಿದ ಉಡುಪುಗಳನ್ನು ಕಂಡು ಅಲ್ಲಿದ್ದವರೆಲ್ಲ ಗರಬಡಿದವರಾದರಂತೆ. ಈ ವಿಡಿಯೋ ನೋಡಿದರೆ ನೀವು ಅವಾಕ್ಕಾಗುತ್ತೀರಿ.
ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಶೇರ್ ಮಾಡಿರುವ ರಣವೀರ್ ಅವುಗಳಿಗೆ, ‘ಡಿಸ್ಕೋ ಜ್ವಾಲೆ, ಬನ್ನಿ ಹೋಗೋಣ,’ ಅಂತ ಶೀರ್ಷಿಕೆ ನೀಡಿದ್ದಾರೆ. ಸೆಲಿಬ್ರಿಟಿ ಸ್ಟೈಲಿಸ್ಟ್ ಶಾಲೀನಾ ನಥಾನಿ ಅವರು ದೀಪಿಕಾ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ದೀಪಿಕಾ ತೊಟ್ಟಿರುವ ಕೆಂಪುಬಣ್ಣದ ಉಡುಗೆ ವೆಲಿಂಟಿನೋ ಬ್ರ್ಯಾಂಡಿನದಾಗಿದ್ದರೆ, ರಣವೀರ್ ಗುಕ್ಕಿಯ ಉಡುಪು ಧರಿಸಿದ್ದಾರೆ.
ದೀಪಿಕಾ ಮತ್ತು ರಣವೀರ್ ಅವರ ಅಸಂಖ್ಯಾತ ಅಭಿಮಾನಿಗಳು ಸಹ ಪೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
View this post on Instagram