ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ

ಭಾರತದಲ್ಲಿ ಪ್ರತೀ ರಾಜ್ಯಗಳಿಂದ ಎಷ್ಟು ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳು ಹೊರಬರುತ್ತಾರೆ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ.

ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ
ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿರುವ ಅಂಕಿಅಂಶ
Follow us
TV9 Web
| Updated By: shivaprasad.hs

Updated on: Dec 18, 2021 | 9:59 AM

ಭಾರತೀಯ ಆಡಳಿತ ಸೇವೆಗೆ (ಐಎಎಸ್) ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳು ಮೊದಲ ಸ್ಥಾನಗಳಲ್ಲಿವೆ. ಬಿಹಾರ್ ಮತ್ತು ಜಾರ್ಖಂಡ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳನ್ನು ನೀಡುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಯಾಗುವವರ ಪ್ರಮಾಣ ಕಡಿಮೆಯಿದ್ದು, ಅದರಲ್ಲಿ ಅಸ್ಸಾಂ ರಾಜ್ಯವು ಕೊನೆಯ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಅಶೋಕ್ ಯೂನಿವರ್ಸಿಟಿ ರಿಸರ್ಚ್ ಸೆಂಟರ್ ತನ್ನ ಸಂಶೋಧನಾ ವಿಶ್ಲೇಷಣೆಯಲ್ಲಿ ಅಸ್ಸಾಂ ಇತರ ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ಕೆಳ ಸ್ಥಾನದಲ್ಲಿದೆ ಎಂದು ಹೇಳಿದೆ. ಅಖಿಲ ಭಾರತ ಸೇವೆಯಾದ ಐಎಎಸ್‌ನ ನೇಮಕಾತಿ ನಿಯಮಗಳ ಅಡಿಯಲ್ಲಿ ವಿವಿಧ ಕೇಡರ್‌ಗಳಲ್ಲಿ 1952 ರಿಂದ 2020 ರವರೆಗೆ ನೇರವಾಗಿ ನೇಮಕಗೊಂಡ ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ. (ಹೆಚ್ಚಿನ ಮಾಹಿತಿಗೆ ಕೆಳಗಿನ ಚಿತ್ರವನ್ನು ಗಮನಿಸಬಹುದು)

UPSC pass percentage

ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿರುವ ಅಂಕಿಅಂಶ

ವರದಿ ಹೇಳಿದ್ದೇನು? ಭಾರತದಲ್ಲಿ 1951ರಿಂದ 2020ರವರೆಗೆ ಯುಪಿಎಸ್ಸಿ ಮೂಲಕ ನೇರ ನೇಮಕಾತಿಯಿಂದ 5255 ಐಎಎಸ್ ಅಧಿಕಾರಿಗಳು ಹೊರಹೊಮ್ಮಿದ್ದಾರೆ. ಇದರಲ್ಲಿ 52 ಜನ ಅಭ್ಯರ್ಥಿಗಳ ತವರು ರಾಜ್ಯಗಳು ಬಹಿರಂಗವಾಗಿಲ್ಲ. ಇದೇ ಅಂಕಿಅಂಶ ಆಧರಿಸಿ ವರದಿ ತಯಾರಿಸಲಾಗಿದೆ. ಅಂಕಿಅಂಶಗಳನ್ನು ನೀಡಲು ಸುಲಭವಾಗಲೆಂದು ಪ್ರಾಂತ್ಯವಾರು ಕೆಲವು ರಾಜ್ಯಗಳನ್ನು ಸೇರಿಸಿ ಅಧ್ಯಯನ ಮಾಡಿ ಅಂಕಿಅಂಶ ನೀಡಲಾಗಿದೆ.

ಈ ಪಟ್ಟಿಯಲ್ಲಿ ಐಎಎಸ್ ಅಧಿಕಾರಿಗಳ ಪಾಲಿನಲ್ಲಿ ಕರ್ನಾಟಕದ ಪಾಲು 3.9 ಶೇಕಡಾ ಇದೆ. ಬಿಹಾರ ಮತ್ತು ಜಾರ್ಖಂಡ್ 10.7 ಶೇಕಡಾದೊಂದಿಗೆ ಉತ್ತಮ ಸ್ಥಾನಗಳಲ್ಲಿವೆ. ರಾಜಸ್ಥಾನ ಶೇ 7.5, ತಮಿಳುನಾಡು ಶೇ 6.8, ಪಂಜಾಬ್ 6.3, ಕೇರಳ 4.6, ಒರಿಸ್ಸಾ ಶೇ 4.5 ರೊಂದಿಗೆ ನಂತರದ ಸ್ಥಾನಗಳಲ್ಲಿವೆ. ಆದರೆ ಕಡಿಮೆ ಐಎಎಸ್ ಅಧಿಕಾರಿಗಳನ್ನು ಉತ್ಪಾದಿಸುವ ರಾಜ್ಯಗಳಲ್ಲಿ ನಾಗಾಲ್ಯಾಂಡ್ 0.38 ಶೇಕಡಾ, ಮಿಜೋರಾಂ 0.42 ಶೇಕಡಾ, ಮೇಘಾಲಯ 0.65 ಶೇಕಡಾ, ಮಣಿಪುರ 0.72 ಶೇಕಡಾ ಮತ್ತು ಅಸ್ಸಾಂ 1.1 ಶೇಕಡಾ ಪ್ರಮಾಣವನ್ನು ಹೊಂದಿವೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಸೇರಿ 15.8 ಶೇಕಡಾ ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕಿವೆ.

ವರದಿಯಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯಗಳು ಹೆಚ್ಚು ಅಧಿಕಾರಿಗಳನ್ನು ನೀಡುತ್ತಿರುವುದು ಕಾಣಿಸಿದೆ. ಅದಾಗ್ಯೂ ಈಶಾನ್ಯ ರಾಜ್ಯಗಳಿಂದ ಐಎಎಸ್ ಅಧಿಕಾರಿಗಳು ಹೊರಬರುವ ಪ್ರಮಾಣ ಕಡಿಮೆಯಿದೆ. ಬಿಹಾರ ಹಾಗೂ ಉತ್ತರ ಪ್ರದೇಶಗಳು ಈ ಪಟ್ಟಿಯಲ್ಲಿ ಮೊದಲ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚಿನ ಅಧಿಕಾರಿಗಳನ್ನು ಆಡಳಿತ ವ್ಯವಸ್ಥೆಗೆ ನೀಡುತ್ತಿವೆ. ಅದಾಗ್ಯೂ ಸಂಶೋಧನೆಯು ಐಎಎಸ್ ಅಧಿಕಾರಿಗಳು ಮತ್ತು ಅವರ ತವರು ರಾಜ್ಯಗಳ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.

ಇದನ್ನೂ ಓದಿ:

Sachin Tendulkar: ವಿಶ್ವದ ಮೆಚ್ಚಿನ ಕ್ರೀಡಾಪಟು ಸಮೀಕ್ಷೆ: ಸಚಿನ್ ತೆಂಡೂಲ್ಕರ್​ಗೆ ಮೂರನೇ ಸ್ಥಾನ

ಇಮ್ರಾನ್ ಖಾನ್ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಬೆದರಿಕೆ ಹಾಕಿದ ಪಾಕ್ ಸಚಿವ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್