Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ

Bank Of Baroda Recruitment 2021: ಬ್ಯಾಂಕ್ ಆಫ್ ಬರೋಡಾ 52 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 19, 2021 | 7:45 AM

ಬ್ಯಾಂಕ್ ಆಫ್ ಬರೋಡಾ (Bank Of Baroda) ಡೆವಲಪರ್ (Developer) ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ಸೈಟ್ bankofbaroda.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 28, 2021 ಕೊನೆಯ ದಿನವಾಗಿದೆ. ಈ ನೇಮಕಾತಿಯ ಮೂಲಕ 52 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಸಂಸ್ಥೆ ಮಾಹಿತಿ ನೀಡಿದೆ. ಭಾರತದಲ್ಲಿ ಎಲ್ಲೇ ಆದರೂ ಸೇವೆ ಸಲ್ಲಿಸುವ ಆಸಕ್ತಿ ಇರುವ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ನಿರ್ದಿಷ್ಟ ಹುದ್ದೆಗಳಿಗೆ ಬೇಕಾದ ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳ ಕುರಿತ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರಗಳು: ಕ್ವಾಲಿಟಿ ಅಶ್ಯೂರೆನ್ಸ್ ಲೀಡ್: 2 ಪೋಸ್ಟ್‌ಗಳು ಕ್ವಾಲಿಟಿ ಅಶ್ಯೂರೆನ್ಸ್ ಇಂಜಿನಿಯರ್‌ಗಳು: 12 ಹುದ್ದೆಗಳು ಡೆವಲಪರ್ (ಫುಲ್ ಸ್ಟಾಕ್ ಜಾವಾ): 12 ಪೋಸ್ಟ್‌ಗಳು ಡೆವಲಪರ್ (ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ): 12 ಪೋಸ್ಟ್‌ಗಳು ಯುಐ/ಯುಎಕ್ಸ್ (UI/UX) ಡಿಸೈನರ್: 2 ಪೋಸ್ಟ್‌ಗಳು ಕ್ಲೌಡ್ ಇಂಜಿನಿಯರ್: 2 ಪೋಸ್ಟ್​​ಗಳು ಅಪ್ಲಿಕೇಶನ್ ಆರ್ಕಿಟೆಕ್ಟ್: 2 ಹುದ್ದೆಗಳು ಎಂಟರ್‌ಪ್ರೈಸ್ ಆರ್ಕಿಟೆಕ್ಟ್: 2 ಪೋಸ್ಟ್‌ಗಳು ಟೆಕ್ನಾಲಜಿ ಆರ್ಕಿಟೆಕ್ಟ್: 2 ಪೋಸ್ಟ್​​ಗಳು ಇನ್ಫ್ರಾಸ್ಟ್ರಕ್ಚರ್ ಆರ್ಕಿಟೆಕ್ಟ್: 2 ಪೋಸ್ಟ್‌ಗಳು ಇಂಟಿಗ್ರೇಷನ್ ಎಕ್ಸ್‌ಪರ್ಟ್: 2 ಪೋಸ್ಟ್‌ಗಳು

ಅರ್ಹತೆಯ ಮಾನದಂಡ: ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಆಯ್ಕೆ ಪ್ರಕ್ರಿಯೆ: ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ (ಸಾಮಾನ್ಯ ಹುದ್ದೆಗಳಿಗೆ- JMGS-I, MMGS-II, MMGS-III). ನಂತರದಲ್ಲಿ ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ಮುಂದಿನ ಆಯ್ಕೆ ಪ್ರಕ್ರಿಯೆಗೆ ಸೂಕ್ತವಾದ ಯಾವುದೇ ಪರೀಕ್ಷೆ- ಗುಂಪು ಚರ್ಚೆ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂದರ್ಶನ ಈ ಮಾದರಿಯಲ್ಲಿ ಪರೀಕ್ಷೆಗಳು ನಡೆಯಲಿವೆ. ಕಾಂಟ್ರಾಕ್ಟ್ ಆಧಾರಿತ ಹುದ್ದೆಗಳಿಗೆ, ಶಾರ್ಟ್ ಲೀಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ನಂತರದ ಸುತ್ತಿನಲ್ಲಿ ವೈಯಕ್ತಿಕ ಸಂದರ್ಶನ ಮತ್ತು ಗುಂಪು ಚರ್ಚೆ ಮತ್ತುಯಾವುದೇ ಇತರ ಆಯ್ಕೆ ವಿಧಾನವನ್ನು ಆಧರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.

ವಿವರವಾದ ಅಧಿಸೂಚನೆ ಇಲ್ಲಿದೆ

ಅರ್ಜಿ ಶುಲ್ಕ: ಅರ್ಜಿ ಶುಲ್ಕವು ಸಾಮಾನ್ಯ/ OBC/ EWS ವರ್ಗಕ್ಕೆ ₹600/- ಮತ್ತು SC/ ST/ ವಿಶೇಷ ಚೇತನ(PWD) ವರ್ಗದ ವ್ಯಕ್ತಿಗಳಿಗೆ ₹100/- ಇದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅಗತ್ಯ ಶುಲ್ಕಗಳನ್ನು ಪಾವತಿಸಬೇಕು. ಹೆಚ್ಚಿನ ಮಾಹಿತಿ ಬ್ಯಾಂಕ್ ಆಫ್ ಬರೋಡಾ ವೆಬ್​ಸೈಟ್ ಪರಿಶೀಲಿಸಿ.

ಇದನ್ನೂ ಓದಿ:

ಸಂಬಂಧಗಳನ್ನು ಹಾಳುಮಾಡುವ ಕೋಪವನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಅಂತ ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ

ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ, ಆತ್ಮವಿಶ್ವಾಸ ಕಮ್ಮಿಯಾಗಿ ಒಂಟಿತನ ಕಾಡಲಾರಂಭಿಸುತ್ತದೆ: ಡಾ ಸೌಜನ್ಯ ವಶಿಷ್ಠ