AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಖಾನ್ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಬೆದರಿಕೆ ಹಾಕಿದ ಪಾಕ್ ಸಚಿವ

Imran Khan: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕ್ ಮಾಧ್ಯಮಗಳಿಗೆ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ.

ಇಮ್ರಾನ್ ಖಾನ್ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಬೆದರಿಕೆ ಹಾಕಿದ ಪಾಕ್ ಸಚಿವ
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​​
Follow us
TV9 Web
| Updated By: shivaprasad.hs

Updated on: Dec 18, 2021 | 9:19 AM

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನ ಬೆಟ್ಟದ ತುದಿಯಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಖಾಸಗಿ ಅರಮನೆಯ ವೆಚ್ಚವನ್ನು ಅವರ ಪಕ್ಷ ಭರಿಸುತ್ತದೆ ಎಂಬ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮಾಜಿ ಸದಸ್ಯರೊಬ್ಬರು ಆರೋಪ ಮಾಡಿದ್ದಾರೆ. ಅವರ ಆರೋಪದ ಕುರಿತು ವರದಿ ಮಾಡಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ದೇಶದ ಪ್ರಸಾರ ಮಾಧ್ಯಮಗಳಿಗೆ ಬೆದರಿಕೆ ಹಾಕಿದೆ. ಈ ವಾರದ ಆರಂಭದಲ್ಲಿ, 2016 ರಲ್ಲಿ ಪಿಟಿಐ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಜಿಹುದ್ದೀನ್ ಅಹ್ಮದ್ ಇಮ್ರಾನ್ ಖಾನ್ ನಿವಾಸದ ಕುರಿತು ಆರೋಪಿಸಿದ್ದರು. ಈಗಿನ ಪಿಟಿಐ ಪಕ್ಷದ ನಾಯಕರಲ್ಲೊಬ್ಬರಾದ ಜಹಾಂಗೀರ್ ತರೀನ್ ಅವರು ಇಮ್ರಾನ್ ಖಾನ್ ನಿವಾಸದ ಖರ್ಚುವೆಚ್ಚ ಭರಿಸಲೆಂದೇ ಪ್ರತಿ ತಿಂಗಳು 3 ಮಿಲಿಯನ್ ರೂಗಳನ್ನು ಇಮ್ರಾನ್​ಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಟಿವಿ ಸಂದರ್ಶನವೊಂದರಲ್ಲಿ ಅಹ್ಮದ್ ನಂತರ ತರೀನ್ ಅವರು ಇಮ್ರಾನ್​ಗೆ 5 ಮಿಲಿಯನ್ ರೂ ನೀಡುತ್ತಿದ್ದಾರೆ ಎಂದು ಮೊತ್ತವನ್ನು ಹೆಚ್ಚಿಸಿ ಆರೋಪಿಸಿದ್ದರು. ಅಹ್ಮದ್ ಪ್ರಕಾರ, ಇಮ್ರಾನ್ ಖಾನ್ ಪ್ರಾಮಾಣಿಕ ವ್ಯಕ್ತಿ ಎಂಬ ಸಾರ್ವಜನಿಕ ಗ್ರಹಿಕೆ ಸಂಪೂರ್ಣವಾಗಿ ತಪ್ಪು ಆದರೆ, ಟ್ವಿಟರ್‌ನಲ್ಲಿ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ತರೀನ್, ಆರೋಪವನ್ನು ನಿರಾಕರಿಸಿದ್ದಾರೆ.

ಆದರೆ ವಜಿಹುದ್ದೀನ್ ಅಹ್ಮದ್ ಮಾಡಿದ ಆರೋಪ ಪ್ರಸಾರವಾದ ಕೂಡಲೇ, ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ನಂತರದಲ್ಲಿ ಅದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಸಾರ ಮಾಡಿದವು. ‘‘ಕೆಲವು ಟಿವಿ ಕೇಂದ್ರಗಳು ನ್ಯಾಯಮೂರ್ತಿ ವಜಿಹುದ್ದೀನ್ ಅಹ್ಮದ್ ಅವರ ಆರೋಪಗಳನ್ನು ಪ್ರಚಾರಕ್ಕಾಗಿ ಬಳಸಿವೆ’’ ಎಂದು ಮಾಹಿತಿ ಸಚಿವ ಚೌಧರಿ ಫವಾದ್ ಹುಸೇನ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅಸಚಿವ ಹುಸೇನ್, ಅಹ್ಮದ್ ಅವರ ಆರೋಪಗಳನ್ನು ಪರಿಶೀಲಿಸದೇ ವರದಿ ಮಾಡಿದ ಎಲ್ಲಾ ಚಾನೆಲ್‌ಗಳ ವಿರುದ್ಧ ಸರ್ಕಾರವು ಪ್ರಕರಣವನ್ನು ದಾಖಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಹ್ಮದ್ ಅವರ ಆರೋಪಗಳಿಗೆ ಸರ್ಕಾರವು ‘ಕ್ರಿಮಿನಲ್ ಮಾನನಷ್ಟ ಮೊಕದ್ದಮೆ’ಯನ್ನು ಹೂಡಲು ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ. ಸಂಸ್ಥೆಗಳ ಗೌರವವನ್ನು ಎತ್ತಿಹಿಡಿಯುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು ಮತ್ತು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸಚಿವರು ಮನವಿ ಮಾಡಿದ್ದಾರೆ.

ಸಚಿವರ ಬೆದರಿಕೆಯ ನಂತರ ಕರಾಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಜಿಹುದ್ದೀನ್ ಅಹ್ಮದ್, ತಮ್ಮ ಹೇಳಿಕೆ ಸ್ಪಷ್ಟವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಸರ್ಕಾರವು ಮಾನನಷ್ಟ ಮೊಕದ್ದಮೆ ಹೂಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆರೋಪವನ್ನು ನಿರಾಕರಿಸದೆ ತರೀನ್‌ ಅವರಿಗೆ ಬೇರೆ ದಾರಿಯಿಲ್ಲ. ಕಾರಣ ಈ ವೆಚ್ಚಗಳು ಪುಸ್ತಕದಿಂದ ಹೊರಗಿವೆ ಮತ್ತು ಲೆಕ್ಕಕ್ಕೆ ಸಿಗುವುದಿಲ್ಲ. ಹಾಗಾಗಿ ಅದನ್ನು ನಿರಾಕರಿಸುವುದು ಅವರಿಗೆ ಸುಲಭ ಎಂದಿದ್ಧಾರೆ.

ಇದನ್ನೂ ಓದಿ:

ಭಾರತದಲ್ಲಿ ದಿನವೊಂದಕ್ಕೆ 14 ಲಕ್ಷದಷ್ಟು ಒಮಿಕ್ರಾನ್ ಪ್ರಕರಣಗಳು ದಾಖಲಾಗುವ ಸ್ಥಿತಿ ಬರಬಹುದು: ಕೇಂದ್ರ ಸರ್ಕಾರದಿಂದ ಎಚ್ಚರಿಕೆ

1966ರಲ್ಲಿ ಮೊದಲ ಬಾರಿಗೆ ವಿಶ್ವ ಸುಂದರಿಯನ್ನು ಕಂಡ ಭಾರತ ಎರಡನೇಯವರಿಗಾಗಿ 28 ವರ್ಷ ಕಾಯಬೇಕಾಯಿತು!

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ