200 ಕೋಟಿ ವಂಚನೆಯ ಕಿಂಗ್​ ಪಿನ್​ ಸುಕೇಶ್​ ಭೇಟಿಗೆ ಬಂದಿದ್ರು 12 ಖ್ಯಾತ ನಟಿಯರು

ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಸಿನಿಮಾ ಹೆಸರು ಮಾತ್ರ ಸದ್ಯ ಸಿಲುಕಿದೆ. ಇವರ ಜತೆಗೆ ಇನ್ನೂ ಕೆಲವರು ಸ್ಟಾರ್​ ನಟಿಯರು ಹಾಗೂ ಮಾಡೆಲ್​ಗಳು ಜೈಲಿಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

200 ಕೋಟಿ ವಂಚನೆಯ ಕಿಂಗ್​ ಪಿನ್​ ಸುಕೇಶ್​ ಭೇಟಿಗೆ ಬಂದಿದ್ರು 12 ಖ್ಯಾತ ನಟಿಯರು
ಜಾಕ್ವೆಲಿನ್​​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 17, 2021 | 5:30 PM

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್ ಹಾಗೂ ನೋರಾ ಫತೇಹಿ​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಅವರು ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಈಗ ಜಾಕ್ವೆಲಿನ್ ಮತ್ತು ಸುಕೇಶ್​ ಇಬ್ಬರೂ ಆಪ್ತವಾಗಿರುವ ಫೋಟೋ ಲೀಕ್​​ ಆಗಿದೆ. ಈ ಮಧ್ಯೆ ಶಾಕಿಂಗ್​ ಮಾಹಿತಿ ಒಂದು ಹೊರ ಬಿದ್ದಿದೆ. ಸುಕೇಶ್​ ಅವರನ್ನು ಭೇಟಿ ಮಾಡೋಕೆ 12 ನಟಿಯರು ಜೈಲಿಗೆ ಬಂದಿದ್ದರು ಎನ್ನಲಾಗಿದೆ.

ಸುಕೇಶ್​ ಚಂದ್ರಶೇಖರ್​ ಅವರು ತಿಹಾರ್​ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಐಷಾರಾಮಿ ಸವಲತ್ತು ಪಡೆಯಲು, ಭೇಟಿಗೆ ಬರುವ ಹೀರೋಯಿನ್​ಗಳನ್ನು ಮುಕ್ತವಾಗಿ ಒಳಗೆ ಬಿಡೋಕೆ ಅಲ್ಲಿನ ಸಿಬ್ಬಂದಿಗೆ ಪ್ರತಿ ತಿಂಗಳು ಸುಕೇಶ್​ 1 ಕೋಟಿ ರೂಪಾಯಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ.

ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಸಿನಿಮಾ ಹೆಸರು ಮಾತ್ರ ಸದ್ಯ ಸಿಲುಕಿದೆ. ಇವರ ಜತೆಗೆ ಇನ್ನೂ ಕೆಲವರು ಸ್ಟಾರ್​ ನಟಿಯರು ಹಾಗೂ ಮಾಡೆಲ್​ಗಳು ಜೈಲಿಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ರೋಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿತ್ತು. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಅಕ್ಟೋಬರ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ ಫರ್ನಾಂಡೀಸ್​​ಗೆ ಸಮನ್ಸ್ ನೀಡಲಾಗಿತ್ತು.

ಜಾಕ್ವೆಲಿನ್​ ಫರ್ನಾಂಡಿಸ್​ ಜತೆ ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​ ​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಹೀಗಿರುವಾಗಲೇ ಜಾಕ್ವೆಲಿನ್ ​ಅವರು ಸುಕೇಶ್​ ಜತೆ ಡೇಟಿಂಗ್​ ನಡೆಸುತ್ತಿದ್ದರು ಎಂದಿದ್ದರು. ಈ ಹೇಳಿಕೆ ಸೆನ್ಸೇಶನ್​ ಸೃಷ್ಟಿ ಮಾಡಿತ್ತು. ಹೀಗಿರುವಾಗಲೇ ಫೋಟೋ ಲೀಕ್​ ಆಗಿದೆ.

ಇದನ್ನೂ ಓದಿ: ಬಹುಕೋಟಿ ವಂಚನೆ ಆರೋಪಿ ಜತೆ ಜಾಕ್ವೆಲಿನ್​ ಲವ್ವಿಡವ್ವಿಗೆ ಸಿಕ್ತು ಇನ್ನಷ್ಟು ಫೋಟೋಗಳ ಸಾಕ್ಷಿ

ಜಾಕ್ವೆಲಿನ್​ಗೆ 36 ಲಕ್ಷ ರೂಪಾಯಿ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ