ಜಾಕ್ವೆಲಿನ್​ಗೆ 36 ಲಕ್ಷ ರೂಪಾಯಿ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್​

ಜಾಕ್ವೆಲಿನ್​ಗೆ 36 ಲಕ್ಷ ರೂಪಾಯಿ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್​
ಜಾಕ್ವೆಲಿನ್​​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​

Jacqueline Fernandez: ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಬಾಯಿ ಬಿಟ್ಟಿದ್ದಾರೆ! 200 ಕೋಟಿ ರೂ. ವಂಚನೆ ಆರೋಪ ಸುಕೇಶ್​ ಮೇಲಿದೆ.

TV9kannada Web Team

| Edited By: Madan Kumar

Dec 05, 2021 | 9:22 AM

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರಿಗೆ ಸಂಕಷ್ಟ ಎದುರಾಗಿದೆ. ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಜತೆಗೆ ಜಾಕ್ವೆಲಿನ್​ ಹೆಸರು ತಳುಕು ಹಾಕಿಕೊಂಡಿದೆ. ಅವರಿಬ್ಬರ ನಡುವೆ ಲವ್ವಿಡವ್ವಿ ನಡೆದಿತ್ತು ಎಂಬುದಕ್ಕೆ ಹಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಜಾರಿ ನಿರ್ದೇಶನಾಲಯ (Enforcement Directorate) ಈ ಪ್ರಕರಣದ ತನಿಖೆ ಮಾಡುತ್ತಿದ್ದು, ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ವಿಚಾರಣೆ ವೇಳೆ ಸುಕೇಶ್​ ಚಂದ್ರಶೇಖರ್​ ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದಾರೆ!

ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪವನ್ನು ಸುಕೇಶ್​ ಚಂದ್ರಶೇಖರ್​ ಎದುರಿಸುತ್ತಿದ್ದಾರೆ. 2021ರ ಜನವರಿಯಲ್ಲಿ ಸುಕೇಶ್​ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಅವರು ನಿರಂತರ ಸಂಪರ್ಕದಲ್ಲಿ ಇದ್ದರು. ಅಲ್ಲಿಂದೀಚೆಗೆ ಅಂದಾಜು 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆಗಳನ್ನು ಸುಕೇಶ್​ನಿಂದ ಜಾಕ್ವೆಲಿನ್​ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿನ್ನಾಭರಣಗಳು, ಡೈಮಂಡ್​ ಒಡವೆಗಳು, ತಲಾ 9 ಲಕ್ಷ ರೂ. ಬೆಲೆಯ 4 ಪರ್ಷಿಯನ್​ ಬೆಕ್ಕುಗಳು, 52 ಲಕ್ಷ ರೂ. ಬೆಲೆ ಕುದುರೆಯನ್ನು ಜಾಕ್ವೆಲಿನ್​ಗೆ ಸುಕೇಶ್​ ಗಿಫ್ಟ್​ ಆಗಿ ನೀಡಿದ್ದರು ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಂಚನೆ ಆರೋಪದಲ್ಲಿ ಅರೆಸ್ಟ್​ ಆಗಿ ಸುಕೇಶ್​ ಜೈಲು ಸೇರಿದ್ದಾಗಲೂ ಅವರ ಜತೆ ಮೊಬೈಲ್​ ಮೂಲಕ ಜಾಕ್ವೆಲಿನ್​ ಫರ್ನಾಂಡಿಸ್​ ಸಂಪರ್ಕದಲ್ಲಿ ಇದ್ದರು. ಜಾಮೀನು ಪಡೆದು ಹೊರಬಂದಾಗ ಚೆನ್ನೈನ ಐಷಾರಾಮಿ ಹೋಟೆಲ್​ನಲ್ಲಿ ಇಬ್ಬರೂ ವಾಸವಾಗಿದ್ದರು ಎಂಬ ಮಾಹಿತಿ ಕೂಡ ಸಿಕ್ಕಿದೆ. ಜಾಕ್ವೆಲಿನ್​ ರೀತಿಯೇ ನಟಿ ನೋರಾ ಫತೇಹಿ ಕೂಡ ಸುಕೇಶ್ ಅವರಿಂದ ಐಷಾರಾಮಿ ಉಡುಗೊರೆಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.

ಕಿಚ್ಚ ಸುದೀಪ್​ ನಟನೆಯ, ಅನೂಪ್​ ಭಂಡಾರಿ ನಿರ್ದೇಶನದ ‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಗಡಂಗ್​ ರಕ್ಕಮ್ಮ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ಕನ್ನಡ ಸಿನಿಪ್ರಿಯರಿಗೆ ಪರಿಚಯಗೊಳ್ಳುವ ಮುನ್ನವೇ ಈ ರೀತಿ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದು ವಿಪರ್ಯಾಸ.

ಇದನ್ನೂ ಓದಿ:

ಗಡಂಗ್​ ರಕ್ಕಮ್ಮನಾಗಿ ಚಂದನವನಕ್ಕೆ ಬಂದ ಜಾಕ್ವೆಲಿನ್​ ಫರ್ನಾಂಡಿಸ್​; ವಿಕ್ರಾಂತ್​ ರೋಣದಲ್ಲಿ ವಿಶೇಷ ಪಾತ್ರ

ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್​ ಫರ್ನಾಂಡಿಸ್

Follow us on

Related Stories

Most Read Stories

Click on your DTH Provider to Add TV9 Kannada