ಕತ್ರಿನಾ ಮದುವೆಗೆ ನಿಯೋಜನೆಗೊಂಡಿದ್ದಾರೆ ಇಷ್ಟೊಂದು ಬೌನ್ಸರ್​ಗಳು? ಹುಬ್ಬೇರಿಸಿದ ಅಭಿಮಾನಿಗಳು

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣ ಮಾಡುವ ಕೆಲಸ ಬೌನ್ಸರ್​ಗಳದ್ದೇ.

ಕತ್ರಿನಾ ಮದುವೆಗೆ ನಿಯೋಜನೆಗೊಂಡಿದ್ದಾರೆ ಇಷ್ಟೊಂದು ಬೌನ್ಸರ್​ಗಳು? ಹುಬ್ಬೇರಿಸಿದ ಅಭಿಮಾನಿಗಳು
ಕತ್ರಿನಾ ಕೈಫ್, ವಿಕ್ಕಿ ಕೌಶಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 05, 2021 | 5:15 PM

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ವೇದಿಕೆ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ರಾಜಸ್ಥಾನದಲ್ಲಿ  ಅದ್ದೂರಿಯಾಗಿ ಈ ಜೋಡಿ ಮದುವೆ ಆಗುತ್ತಿರುವ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಇವರು ಮದುವೆ ಆಗುತ್ತಿರುವ ವಿಚಾರದ ಬಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರ್​ ಜಿಲ್ಲಾಧಿಕಾರಿಯಿಂದ ಮಾಹಿತಿ ಹೊರ ಬಿದ್ದಿದೆ. ಡಿಸೆಂಬರ್​ 7ರಿಂದ 10ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ. ಈ ಮಧ್ಯೆ ಇವರ ಮದುವೆಗೆ ಬೌನ್ಸರ್​ಗಳನ್ನು ನಿಯೋಜನೆ ಮಾಡಲಾಗಿದೆ.

ಸೆಲೆಬ್ರಿಟಿಗಳು ಎಲ್ಲೇ ತೆರಳಿದರು ಅವರನ್ನು ಸೇಫ್​ ಮಾಡುವ ಕೆಲಸ ಬೌನ್ಸರ್​ಗಳಿಗೆ ಇರುತ್ತದೆ. ಏನೂ ಆಗದಂತೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣ ಮಾಡುವ ಕೆಲಸ ಬೌನ್ಸರ್​ಗಳದ್ದೇ. ಈ ಕಾರಣಕ್ಕೆ ಕತ್ರಿನಾ ಮದುವೆಗೆ 100 ಬೌನ್ಸರ್​ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕತ್ರಿನಾ ಮದುವೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯದಂತೆ ನೋಡಿಕೊಳ್ಳಲು ಈ ಸೆಲೆಬ್ರಿಟಿ ಜೋಡಿ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ, ಮದುವೆ ನಡೆಯುತ್ತಿರುವ ಪ್ರದೇಶದಲ್ಲಿ ಡ್ರೋನ್​ ಹಾರಾಟ ಕಂಡರೆ ಅದನ್ನು ಹೊಡೆದುರುಳಿಸಲು ನಿರ್ಧರಿಸಲಾಗಿದೆ. ಮದುವೆ ಮಂಟಪದಲ್ಲಿ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ನೋಡಿಕೊಳ್ಳಲು 100 ಬೌನ್ಸರ್​ಗಳು ನಿಯೋಜನೆಗೊಂಡಿದ್ದಾರೆ. ಇದರ ಜತೆಗೆ ಇವರು ಭದ್ರತೆಯನ್ನೂ ನೀಡಲಿದ್ದಾರೆ.

ಮದುವೆ ನಡೆಯುವ ಸ್ಥಳದಲ್ಲಿ ಈ ಬೌನ್ಸರ್​ಗಳು ಓಡಾಟ ನಡೆಸುತ್ತಿರುತ್ತಾರೆ. ಮೊಬೈಲ್​ನಲ್ಲಿ ಯಾರೂ ಫೋಟೋ ಕ್ಲಿಕ್​ ಮಾಡದಂತೆ ನೋಡಿಕೊಳ್ಳುವುದು ಇವರ ಕೆಲಸ. ಈ ಕೆಲಸಕ್ಕಾಗಿ 100 ಬೌನ್ಸರ್​ಗಳನ್ನು ನೇಮಕ ಮಾಡಿಕೊಂಡಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಎಲ್ಲಾ ಬೌನ್ಸರ್​ಗಳು ಜೈಪುರದಿಂದ ಬರಲಿದ್ದಾರೆ ಎಂದು ವರದಿ ಆಗಿದೆ.

ಈಗ ನಡೆಯುತ್ತಿರುವ ಮದುವೆ ಸಾಮಾನ್ಯ ಮದುವೆ ಅಲ್ಲ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಮದುವೆ ಹಾಜರಾಗುತ್ತಿದ್ದಾರೆ. ಹೀಗಾಗಿ, ಭದ್ರತೆ ನೀಡಬೇಕು. ಹೋಟೆಲ್​ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಬೇಕು. ಮತ್ತೆ ಕೊವಿಡ್​ ಹೆಚ್ಚುವ ಭಯ ಇರುವುದರಿಂದ ಸರ್ಕಾರದ ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮದುವೆ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಅತಿಥಿಗಳ ಲಿಸ್ಟ್​ ನೀಡಬೇಕು. ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ಸಹಾಯಕರು  ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲಿನ ಜಿಲ್ಲಾಧಿಕಾರಿ ಡಿಸಿ ರಾಜೇಂದ್ರ ಕೃಷ್ಣ ನೀಡಿದ ಮಾಹಿತಿ ಪ್ರಕಾರ, ‘ಡಿಸೆಂಬರ್​ 7-10ರವರೆಗೆ ಮದುವೆ ಕಾರ್ಯ ನಡೆಯಲಿದೆ. ಬಾಲಿವುಡ್​ನ ಟಾಪ್​ 120 ಸೆಲೆಬ್ರಿಟಿಗಳು ಹಾಜರಿ ಹಾಕುತ್ತಿದ್ದಾರೆ. ಎಲ್ಲಾ ಅತಿಥಿಗಳು ಕೊವಿಡ್​ ನಿಯಮ ಪಾಲನೆ ಮಾಡಬೇಕು. ಕೊವಿಡ್​ ಲಸಿಕೆ ಪಡೆದ ಸೆಲೆಬ್ರಿಟಿಗಳಿಗೆ ಮಾತ್ರ ಮದುವೆ ನಡೆಯುವ ಸ್ಥಳಕ್ಕೆ ಅವಕಾಶವಿದೆ. ಕೊವಿಡ್​ ಲಸಿಕೆ ಪಡೆಯದೆ ಇದ್ದವರು ಆರ್​ಟಿ-ಪಿಸಿಆರ್​ ವರದಿ ತರಬೇಕು’ ಎಂದಿದ್ದಾರೆ.

ಇದನ್ನೂ ಓದಿ: ನಾಲ್ಕು ದಿನ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ, 120 ಅತಿಥಿಗಳಿಗೆ ಆಹ್ವಾನ; ಅಧಿಕೃತ ಘೋಷಣೆ

Published On - 5:07 pm, Sun, 5 December 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ