ನಾಲ್ಕು ದಿನ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ, 120 ಅತಿಥಿಗಳಿಗೆ ಆಹ್ವಾನ; ಅಧಿಕೃತ ಘೋಷಣೆ

‘ಮದುವೆ ನಡೆಯುವ ಸ್ಥಳದಲ್ಲಿ ಕೊವಿಡ್​ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. 120 ಅತಿಥಿಗಳು ಬರುವ ಬಗ್ಗೆ ನಮಗೆ ಮಾಹಿತಿ ಇದೆ’ ಎಂದು ರಾಜೇಂದ್ರ ಕೃಷ್ಣ ಹೇಳಿದ್ದಾರೆ.

ನಾಲ್ಕು ದಿನ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ, 120 ಅತಿಥಿಗಳಿಗೆ ಆಹ್ವಾನ; ಅಧಿಕೃತ ಘೋಷಣೆ
ಕತ್ರಿನಾ ಕೈಫ್, ವಿಕ್ಕಿ ಕೌಶಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 05, 2021 | 4:44 PM

 ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಆಗುತ್ತಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೆಲವರು ಈ ಮದುವೆ ಸುದ್ದಿಯನ್ನು ಅಲ್ಲಗಳೆದಿದ್ದರು. ಇದೊಂದು ನಕಲಿ ಸುದ್ದಿ ಎಂದು ಕತ್ರಿನಾ ಆಪ್ತ ಬಳಗದವರೇ ಹೇಳಿಕೊಂಡಿದ್ದರು. ಆದರೆ, ಈಗ ಇವರ ಮದುವೆ ವಿಚಾರ ಅಧಿಕೃತವಾಗಿದೆ. ಹಾಗಂತ ಇದನ್ನು ಬಾಲಿವುಡ್​ ಜೋಡಿ ಖಚಿತಪಡಿಸಿಲ್ಲ. ಬದಲಿಗೆ ಮದುವೆ ನಡೆಯುತ್ತಿರುವ ಸವಾಯಿ ಮಾಧೋಪುರ್​ ಜಿಲ್ಲೆಯ ಜಿಲ್ಲಾಧಿಕಾರಿ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈಗ ನಡೆಯುತ್ತಿರುವ ಮದುವೆ ಸಾಮಾನ್ಯ ಮದುವೆ ಅಲ್ಲ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಮದುವೆ ಹಾಜರಾಗುತ್ತಿದ್ದಾರೆ. ಹೀಗಾಗಿ, ಭದ್ರತೆ ನೀಡಬೇಕು. ಹೋಟೆಲ್​ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಬೇಕು. ಮತ್ತೆ ಕೊವಿಡ್​ ಹೆಚ್ಚುವ ಭಯ ಇರುವುದರಿಂದ ಸರ್ಕಾರದ ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮದುವೆ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಅತಿಥಿಗಳ ಲಿಸ್ಟ್​ ನೀಡಬೇಕು. ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ಸಹಾಯಕರು  ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲಿನ ಜಿಲ್ಲಾಧಿಕಾರಿ ಡಿಸಿ ರಾಜೇಂದ್ರ ಕೃಷ್ಣ ನೀಡಿದ ಮಾಹಿತಿ ಪ್ರಕಾರ, ‘ಡಿಸೆಂಬರ್​ 7-10ರವರೆಗೆ ಮದುವೆ ಕಾರ್ಯ ನಡೆಯಲಿದೆ. ಬಾಲಿವುಡ್​ನ ಟಾಪ್​ 120 ಸೆಲೆಬ್ರಿಟಿಗಳು ಹಾಜರಿ ಹಾಕುತ್ತಿದ್ದಾರೆ. ಎಲ್ಲಾ ಅತಿಥಿಗಳು ಕೊವಿಡ್​ ನಿಯಮ ಪಾಲನೆ ಮಾಡಬೇಕು. ಕೊವಿಡ್​ ಲಸಿಕೆ ಪಡೆದ ಸೆಲೆಬ್ರಿಟಿಗಳಿಗೆ ಮಾತ್ರ ಮದುವೆ ನಡೆಯುವ ಸ್ಥಳಕ್ಕೆ ಅವಕಾಶವಿದೆ. ಕೊವಿಡ್​ ಲಸಿಕೆ ಪಡೆಯದೆ ಇದ್ದವರು ಆರ್​ಟಿ-ಪಿಸಿಆರ್​ ವರದಿ ತರಬೇಕು’ ಎಂದಿದ್ದಾರೆ.

‘ಮದುವೆ ನಡೆಯುವ ಸ್ಥಳದಲ್ಲಿ ಕೊವಿಡ್​ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. 120 ಅತಿಥಿಗಳು ಬರುವ ಬಗ್ಗೆ ನಮಗೆ ಮಾಹಿತಿ ಇದೆ’ ಎಂದು ರಾಜೇಂದ್ರ ಕೃಷ್ಣ ಹೇಳಿದ್ದಾರೆ. ಸದ್ಯ, ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ತಮ್ಮ ಮದುವೆಗೆ ಬರುವ ಅತಿಥಿಗಳು ಮೊಬೈಲ್​ ಫೋನ್​ ತರುವಂತಿಲ್ಲ ಎಂದು ಈಗಾಗಲೇ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಫೋಟೋಗಳು ಲೀಕ್​ ಆಗಬಾರದು ಎಂಬುದು ಈ ಜೋಡಿಯ ಉದ್ದೇಶ. ಅದೇ ರೀತಿ, ಮದುವೆ ನಡೆಯುವ ಹೋಟೆಲ್​ ಸುತ್ತಮುತ್ತ ಯಾವುದೇ ಡ್ರೋನ್​ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್​ ಕಂಡುಬಂದರೆ ಅದನ್ನು ಶೂಟ್​ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡದ ಕತ್ರಿನಾ; ಕುಟುಂಬದವರಿಂದಲೇ ಬಂತು ಸ್ಪಷ್ಟನೆ

ಕತ್ರಿನಾ-ವಿಕ್ಕಿ ಮದುವೆ ಕದ್ದು ನೋಡಲು ಡ್ರೋನ್ ಬಳಸಿದರೆ ಕಾದಿದೆ ಶಿಕ್ಷೆ; ಶೂಟ್​ ಮಾಡಲು ನಿರ್ಧಾರ​

Published On - 9:43 pm, Fri, 3 December 21

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ