Have you watched it yet? #MadhubanSunnyLeonehttps://t.co/bcowk6XJTN
— sunnyleone (@SunnyLeone) December 22, 2021
ಹಾಡಿಗೆ ವಿರೋಧ ಏಕೆ?
ಟ್ವಿಟರ್ನಲ್ಲಿ ಸನ್ನಿ ಲಿಯೋನ್ ಹಾಡಿನ ಕುರಿತಾದ ಟ್ವೀಟ್ ಹಂಚಿಕೊಂಡಿದ್ದರು. ಹಲವರು ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಎಲ್ಲರಿಗೂ ಈ ಹಾಡು ಇಷ್ಟವಾಗಿಲ್ಲ. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಹಾಡಿನಲ್ಲಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣ ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರೆ, ಮತ್ತಷ್ಟು ಜನ ಹಾಡನ್ನುನ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಳಕೆದಾರರೊಬ್ಬರು ತಮ್ಮ ಕಾಮೆಂಟಿನಲ್ಲಿ ಹಾಡಿಗೆ ವಿರೋಧವೇಕೆ ಎಂಬುದನ್ನು ಬರೆಯುತ್ತಾ, ‘‘ರಾಧಾ ನರ್ತಕಿಯಲ್ಲ, ಆಕೆ ಭಕ್ತೆ. ಮಧುಬನ ಉದಾತ್ತ ಸ್ಥಳವಾಗಿದ್ದು, ಇಂತಹ ನೃತ್ಯವನ್ನು ಅಲ್ಲಿ ಮಾಡುವುದಿಲ್ಲ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ’’ ಎಂದಿದ್ದಾರೆ. ಹಲವರು ಸಾಹಿತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾಚಿಕೆಗೇಡಿನ ಸಾಹಿತ್ಯ ಇದಾಗಿದೆ ಎಂದಿದ್ದಾರೆ.
‘ಮಧುಬನ್’ ಹಾಡಿಗೆ ಬಂದ ಪ್ರತಿಕ್ರಿಯೆಗಳು
ಹಲವರು ಹಾಡನ್ನು ರಿಪೋರ್ಟ್ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ‘‘ದೇವರನ್ನು ದೂಷಿಸುವ ಹಾಡನ್ನು ರಿಪೋರ್ಟ್ ಮಾಡಬೇಕು. ಜನರ ಹಣದಿಂದ ನೀವೆಲ್ಲರೂ ಐಷಾರಾಮಿ ಜೀವನ ಅನುಭವಿಸುತ್ತಿದ್ದೀರಿ. ಈ ಕುರಿತು ಬಹಳ ಜಾಗರೂಕರಾಗಿರಿ. ಹಾಡನ್ನು ತೆಗೆದುಹಾಕಿ, ಸಾಹಿತ್ಯ ಬದಲಾಯಿಸಿ’’ ಎಂದು ಬರೆದಿದ್ದಾರೆ.
‘ಮಧುಬನ್’ ಹಾಡು ಇಲ್ಲಿದೆ:
ಇದನ್ನೂ ಓದಿ:
ಕಟ್ ಎಂದ ನಂತರವೂ ಇಮ್ರಾನ್ ಹಷ್ಮಿಗೆ ಕಿಸ್ ಮಾಡೋದು ಮುಂದುವರಿಸಿದ ನರ್ಗೀಸ್; ವಿಡಿಯೋ ವೈರಲ್