Nargis Fakhri: ಕಟ್​ ಎಂದ ನಂತರವೂ ಇಮ್ರಾನ್​ ಹಷ್ಮಿಗೆ ಕಿಸ್​ ಮಾಡೋದು ಮುಂದುವರಿಸಿದ ನರ್ಗೀಸ್​; ವಿಡಿಯೋ ವೈರಲ್​  

Nargis Fakhri Kissing Video: ‘ಅಜರ್’​ ಸಿನಿಮಾದಲ್ಲಿ ಇಮ್ರಾನ್​ ಹಾಗೂ ನರ್ಗೀಸ್​ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್​ ದೋ ನಾ ಜರಾ..’ ಸಾಂಗ್​ ಇದೆ. ಈ ಹಾಡಿನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಬರುತ್ತದೆ. ಇದರ ಮೇಕಿಂಗ್​ ವಿಡಿಯೋ ಈಗ ವೈರಲ್​ ಆಗಿದೆ.

Nargis Fakhri: ಕಟ್​ ಎಂದ ನಂತರವೂ ಇಮ್ರಾನ್​ ಹಷ್ಮಿಗೆ ಕಿಸ್​ ಮಾಡೋದು ಮುಂದುವರಿಸಿದ ನರ್ಗೀಸ್​; ವಿಡಿಯೋ ವೈರಲ್​  
ನರ್ಗೀಸ್​
Follow us
TV9 Web
| Updated By: Digi Tech Desk

Updated on:Dec 24, 2021 | 9:37 AM

ಇಮ್ರಾನ್​ ಹಷ್ಮಿ (Emraan Hashmi) ಬಾಲಿವುಡ್​ನಲ್ಲಿ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​. ಅವರ ನಟನೆಯ ಪ್ರತಿ ಸಿನಿಮಾದಲ್ಲೂ ಕಿಸ್ಸಿಂಗ್​ ಸೀನ್​ಗೆ ಸಾಕಷ್ಟು ಮಹತ್ವ ಇರುತ್ತಿತ್ತು. ಹೀಗಾಗಿ, ಸಾಕಷ್ಟು ನಟಿಯರ ಜತೆ ಬೋಲ್ಡ್​ ದೃಶ್ಯಗಳಲ್ಲಿ ಇಮ್ರಾನ್​ ಕಾಣಿಸಿಕೊಂಡಿದ್ದಾರೆ. ಆದರೆ, ತೆರೆಮೇಲೆ ಕಿಸ್​ ಮಾಡೋಕೆ ಅವರಿಗೆ ತುಂಬಾನೇ ಮುಜುಗರ ಆಗುತ್ತಿತ್ತು! ಈಗ ವೈರಲ್​ ಆಗಿರುವ ವಿಡಿಯೋ ಒಂದು ಇದಕ್ಕೆ ಸಾಕ್ಷ್ಯ ಒದಗಿಸಿದೆ. ಅಚ್ಚರಿ ಎಂದರೆ, ನಿರ್ದೇಶಕರು ಕಟ್​ ಎಂದ ನಂತರವೂ ನಟಿ ನರ್ಗೀಸ್​ ಫಕ್ರಿ (Nargis Fakhri) ಕಿಸ್​ ಮಾಡೋದನ್ನು ಮುಂದುವರಿಸಿದ್ದರು.

‘ಅಜರ್’​ ಸಿನಿಮಾದಲ್ಲಿ ಇಮ್ರಾನ್​ ಹಾಗೂ ನರ್ಗೀಸ್​ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್​ ದೋ ನಾ ಜರಾ..’ ಸಾಂಗ್​ ಇದೆ. ಈ ಹಾಡಿನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಬರುತ್ತದೆ. ಇದರ ಮೇಕಿಂಗ್​ ವಿಡಿಯೋ ಈಗ ವೈರಲ್​ ಆಗಿದೆ. ಇಮ್ರಾನ್​ ಹಷ್ಮಿ ಹಾಗೂ ನರ್ಗೀಸ್ ನಡುವಣ​ ಕಿಸ್ಸಿಂಗ್​ ದೃಶ್ಯವನ್ನು ನಾಲ್ಕು ಬಾರಿ ಶೂಟ್​ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ಈ ದೃಶ್ಯ ತೃಪ್ತಿ ನೀಡಿರಲಿಲ್ಲ. ಹೀಗಾಗಿ, ಒನ್​ ಮೋರ್​ ಟೇಕ್​ ಎಂದಿದ್ದರು. ಆಗ ಇಮ್ರಾನ್​ ತುಂಬಾನೇ ಮುಜುಗರ ಮಾಡಿಕೊಂಡಿದ್ದರು.

‘ನಾನು ಇಮ್ರಾನ್​ಗೆ ಐದನೇ ಬಾರಿ ಕಿಸ್​ ಮಾಡುತ್ತಿದ್ದೇನೆ. ಇದಕ್ಕಾಗಿ ನಾನು ಹೆಚ್ಚಿನ ಹಣವನ್ನು ಪಡೆದುಕೊಳ್ಳಬೇಕಿದೆ. ಇಮ್ರಾನ್​ ಹಷ್ಮಿ ತುಂಬಾನೇ ಸಂತಸಗೊಂಡಿದ್ದಾರೆ ಎಂದು ನನಗನಿಸುತ್ತಿದೆ. ಆದರೆ, ತಮಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದಾರೆ. ಅವರಿಗೆ ಇದು ಇಷ್ಟವಾಗುತ್ತಿದೆ. ಆದಾಗ್ಯೂ ನಾಟಕವಾಡುತ್ತಿದ್ದಾರೆ’ ಎಂದಿದ್ದರು ನರ್ಗೀಸ್​. ಹೀಗೆ ಹೇಳಿದ ನಂತರದಲ್ಲಿ ಕಿಸ್​ ಮಾಡಿದ ನರ್ಗೀಸ್​ ಅವರು, ನಿರ್ದೇಶಕರು ಕಟ್​ಕಟ್​ ಎಂದರೂ ಕಿಸ್​ ಮಾಡುವುದನ್ನು ಮುಂದುವರಿಸುತ್ತಲೇ ಇದ್ದರು. ಇದನ್ನು ನೋಡಿ ತಂಡದವರು ನಕ್ಕಿದ್ದಾರೆ.

‘ಅಜರ್​’ ಸಿನಿಮಾ ಮೊಹ್ಮದ್​ ಅಜರುದ್ದೀನ್​ ಬಯೋಪಿಕ್​. ಮೊಹ್ಮದ್​ ಅಜರುದ್ದೀನ್​ ಪಾತ್ರವನ್ನು ಇಮ್ರಾನ್​ ನಿರ್ವಹಿಸಿದ್ದರು. ಸಂಗೀತಾ ಬಿಜ್ಲಾನಿ ಪಾತ್ರದಲ್ಲಿ ನರ್ಗೀಸ್​ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಟೋನಿ ಡಿಸೋಜಾ-ಆ್ಯಂಟೋನಿ ಡಿಸೋಜಾ ನಟಿಸಿದ್ದಾರೆ.

ಇದನ್ನೂ ಓದಿ: ಯುವತಿಯರ ಜತೆ ಲೈಂಗಿಕ ಸಂಪರ್ಕ ನಡೆಸೋಕೆ ನಟನಾ ಶಾಲೆ ಆರಂಭಿಸಿದ ನಟ? ಒಂದಷ್ಟು ವಿಚಾರ ಒಪ್ಪಿಕೊಂಡ ಹೀರೋ  

ಇಮ್ರಾನ್​ ಹಷ್ಮಿ ಹೊಸ ಅವತಾರ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್​; ಸಲ್ಲುಗೆ ಟಫ್​ ಫೈಟ್​

Published On - 7:40 pm, Thu, 23 December 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್