ಪೊಲೀಸ್​ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್​ ಆಯ್ತು ಮುತ್ತಿನ ನೆಕ್ಲೆಸ್​

ಪೊಲೀಸ್​ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್​ ಆಯ್ತು ಮುತ್ತಿನ ನೆಕ್ಲೆಸ್​
ಕಂಗನಾ

ಎಫ್​ಐಆರ್​ಗೆ ಸಂಬಂಧಿಸಿ ಕಂಗನಾ ಇಂದು ಮುಂಬೈನ ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಕಂಗನಾ ಪಾರ್ಟಿಗೆ ಹೊರಟವರಂತೆ ರೆಡಿ ಆಗಿದ್ದರು. ಬಿಳಿ ಬಣ್ಣದ ಸೀರೆ ಧರಿಸಿದ್ದರು.

TV9kannada Web Team

| Edited By: Rajesh Duggumane

Dec 23, 2021 | 2:44 PM

ಕಂಗನಾ ರಣಾವತ್​ ಸದಾ ಸುದ್ದಿಯಲ್ಲಿರೋಕೆ ಇಷ್ಟಪಡುತ್ತಾರೆ. ನೆಗೆಟಿವ್​ ಆಗಿರಲಿ ಅಥವಾ ಪಾಸಿಟಿವ್​ ಆಗಿರಲಿ, ಒಟ್ಟಿನಲ್ಲಿ ಅವರಿಗೆ ಪ್ರಚಾರ ಬೇಕು. ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳೋಕೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಇತ್ತೀಚೆಗಂತೂ ಅವರು ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಈ ನಡೆಯ ಬಗ್ಗೆ ಅನೇಕರು ಛೀಮಾರಿ ಹಾಕಿದರೂ ಅವರು ಚಿಂತೆ ಮಾಡಿಲ್ಲ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಅವರು ಈ ಬಾರಿ ವಿವಾದ ಸೃಷ್ಟಿ ಮಾಡಿಕೊಂಡಿಲ್ಲ. ಬದಲಿಗೆ, ಪೊಲೀಸ್ ಠಾಣೆಗೆ ಹಾಜರಾಗುವಾಗ ತುಂಬಾನೇ ಬಿಂಕದಿಂದ ತೆರಳಿದ್ದಾರೆ. ಇದನ್ನು ನೋಡಿ ಪೊಲೀಸರು ಹಾಗೂ ಅವರ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

ಕೃಷಿ ಕಾಯ್ದೆಯನ್ನು ಹಿಂಪಡೆದ ಬೆನ್ನಲ್ಲೇ ಕಂಗನಾ ಅಸಮಾಧಾನ ಹೊರ ಹಾಕಿದ್ದರು. ‘ಇಂದು ಬಹುಶಃ ಖಲಿಸ್ತಾನಿ ಭಯೋತ್ಪಾದಕರು ಸರ್ಕಾರದ ತೋಳನ್ನು ತಿರುಚುತ್ತಿರಬಹುದು. ಆದರೆ ಈ ಸಂದರ್ಭದಲ್ಲಿ ನಾವು ಓರ್ವ ಮಹಿಳೆಯನ್ನು ಮರೆಯುವಂತಿಲ್ಲ. ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಅವರು ಖಲಿಸ್ತಾನಿ ಉಗ್ರರನ್ನು ಸೊಳ್ಳೆಗಳಂತೆ ತಮ್ಮ ಬೂಟಿನಡಿ ಹಾಕಿ ಹೊಸಕಿದ್ದರು. ಖಲಿಸ್ತಾನಿಗಳು ದೇಶವನ್ನು ಒಡೆಯಲು ಬಿಡಲಿಲ್ಲ’ ಎಂದು ಕಂಗನಾ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಖ್​ ಸಮುದಾಯ ದೂರು ನೀಡಿತ್ತು. ಹೀಗಾಗಿ, ಕಂಗನಾ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಈ ಎಫ್​ಐಆರ್​ಗೆ ಸಂಬಂಧಿಸಿ ಕಂಗನಾ ಇಂದು ಮುಂಬೈನ ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಕಂಗನಾ ಪಾರ್ಟಿಗೆ ಹೊರಟವರಂತೆ ರೆಡಿ ಆಗಿದ್ದರು. ಬಿಳಿ ಬಣ್ಣದ ಸೀರೆ ಧರಿಸಿದ್ದರು. ಕತ್ತಿನಲ್ಲಿ ಅವರು ಹಾಕಿದ್ದ ಮುತ್ತಿನ ನೆಕ್ಲೆಸ್​ ಎಲ್ಲರ ಕಣ್ಣು ಕುಕ್ಕಿತ್ತು. ಅವರ ಸುತ್ತಲೂ ಭದ್ರತಾ ಸಿಬ್ಬಂದಿ, ಪೊಲೀಸರು ಸುತ್ತುವರಿದಿದ್ದರು. ಪೊಲೀಸ್​ ಠಾಣೆಗೆ ತೆರಳಿದ ಕಂಗನಾ ಕೆಲ ಹೊತ್ತು ವಿಚಾರಣೆ ಎದುರಿಸಿ ಬಂದಿದ್ದಾರೆ.

ಕಂಗನಾ ಅವರು ಡಿಸೆಂಬರ್​ 3ರಂದು ಪಂಜಾಬ್​ಗೆ ತೆರಳಿದ್ದರು. ರೈತ ಪ್ರತಿಭಟನಾಕಾರರ ವಿರುದ್ಧ ಕಂಗನಾ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈ ಕಾರಣಕ್ಕೆ ಅವರು ಪಂಜಾಬ್​ಗೆ ಎಂಟ್ರಿ ಪಡೆಯುತ್ತಿದ್ದಂತೆ ಅವರ ಕಾರಿನ ಮೇಲೆ ದಾಳಿ ನಡೆತ್ತು. ಇದನ್ನು ಕಂಗನಾ ಖಂಡಿಸಿದ್ದರು.

ಇದನ್ನೂ ಓದಿ: ಕಂಗನಾ ರಣಾವತ್​ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು; ವಿಡಿಯೋ ಪೋಸ್ಟ್ ಮಾಡಿದ ನಟಿ

ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರೋದು ಖುಷಿ ವಿಚಾರ: ಕಂಗನಾ

Follow us on

Related Stories

Most Read Stories

Click on your DTH Provider to Add TV9 Kannada