‘ವಿಕ್ರಾಂತ್​ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್​ ಫರ್ನಾಂಡಿಸ್​

‘ವಿಕ್ರಾಂತ್​ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್​ ಫರ್ನಾಂಡಿಸ್​
ಜಾಕ್ವೆಲಿನ್ ಫರ್ನಾಂಡಿಸ್

Jacqueline Fernandez | Lookout Notice: ತಮ್ಮ ಮೇಲೆ ಹೇರಿರುವ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಮನವಿ ಸಲ್ಲಿಸಿದ್ದರು. ಆದರೆ ಅದನ್ನು ಜಾರಿ ನಿರ್ದೇಶನಾಲಯ ತಳ್ಳಿ ಹಾಕಿದೆ.

TV9kannada Web Team

| Edited By: Madan Kumar

Dec 22, 2021 | 10:05 PM

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ( Jacqueline Fernandez) ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟು ದಿನ ಆರಾಮಾಗಿ ದೇಶ-ವಿದೇಶ ಸುತ್ತಿಕೊಂಡಿದ್ದ ಅವರು ಈಗ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳ ಕಣ್ಗಾವಲಿನಲ್ಲಿ ಇದ್ದಾರೆ. ಇಡಿ ಅಧಿಕಾರಿಗಳ ಅನುಮತಿ ಇಲ್ಲದೇ ಅವರು ಭಾರತ ಬಿಟ್ಟು ತೆರಳುವಂತಿಲ್ಲ. ಇದರಿಂದ ಜಾಕ್ವೆಲಿನ್​ ಫರ್ನಾಂಡಿಸ್​ಗೆ ತೊಂದರೆ ಆಗಿದೆ. ಕಿಚ್ಚ ಸುದೀಪ್​ ಅಭಿನಯದ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದಲ್ಲಿ ಜಾಕ್ವೆಲಿನ್​ ಕೂಡ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಆ ಚಿತ್ರದ ಬಗ್ಗೆ ಸಿನಿಪ್ರಿಯರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದು ಜಾಕ್ವೆಲಿನ್​ ನಟನೆಯ ಮೊದಲ ಕನ್ನಡ ಸಿನಿಮಾ. ಆ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ವಿವಾದದ ಮೂಲಕ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಬಹುಕೋಟಿ ವಂಚನೆ ಆರೋಪಿ ಸುಕೇಶ್​ ಚಂದ್ರಶೇಖರ್​ (Sukesh Chandrashekhar) ಜತೆಗಿನ ಸಹವಾಸವೇ ಈಗ ಜಾಕ್ವೆಲಿನ್​ಗೆ ಮುಳುವಾಗಿದೆ.

ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ಆರೋಪವನ್ನು ಸುಕೇಶ್​ ಚಂದ್ರಶೇಖರ್​ ಎದುರಿಸುತ್ತಿದ್ದಾರೆ. ಅವರ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೂ ಸಂಕಷ್ಟ ಸುತ್ತಿಕೊಂಡಿದೆ. ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಭಾರತವನ್ನು ಬಿಟ್ಟು ಬೇರೆಡೆಗೆ ತೆರಳದಂತೆ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಇಡಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ.

ತಮ್ಮ ಮೇಲೆ ಹೇರಿರುವ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಜಾಕ್ವೆಲಿನ್​ ಅವರು ಮನವಿ ಸಲ್ಲಿಸಿದ್ದರು. ಆದರೆ ಅದನ್ನು ಜಾರಿ ನಿರ್ದೇಶನಾಲಯ ತಳ್ಳಿ ಹಾಕಿದೆ. ಇದರಿಂದ ಜಾಕ್ವೆಲಿನ್​ಗೆ ಪೇಚಾಟ ಶುರುವಾಗಿದೆ. ನಟನೆ ಮಾತ್ರವಲ್ಲದೇ ಮಾಡೆಲಿಂಗ್​ನಲ್ಲೂ ಅವರು ಸಕ್ರಿಯರಾಗಿದ್ದಾರೆ. ಅನೇಕ ಬ್ರ್ಯಾಂಡ್​ಗಳ ಜತೆ ಈ ಮೊದಲೇ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಕೆಲಸಗಳ ಸಲುವಾಗಿ ಅವರು ವಿದೇಶಕ್ಕೆ ತೆರಳುವುದು ಅನಿವಾರ್ಯ ಆಗಿದೆ. ಹಾಗಿದ್ದರೂ ಕೂಡ ಜಾರಿ ನಿರ್ದೇಶನಾಲಯದಿಂದ ಅವರಿಗೆ ಅನುಮತಿ ಸಿಗುತ್ತಿಲ್ಲ. ಇದರಿಂದಾಗಿ ಅವರ ಆದಾಯಕ್ಕೆ ಪೆಟ್ಟು ಬಿದ್ದರೂ ಅಚ್ಚರಿ ಏನಿಲ್ಲ.

ಡಿ.5ರಂದು ಜಾಕ್ವೆಲಿನ್​ ಫರ್ನಾಂಡಿಸ್​ ಅವರು ದೇಶ ಬಿಟ್ಟು ಪರಾರಿ ಆಗಲು ಪ್ರಯತ್ನಿಸಿದ್ದರು. ಮುಂಬೈ ಏರ್​ಪೋರ್ಟ್​ನಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದರು. ಸುಕೇಶ್​ ಚಂದ್ರಶೇಖರ್​ ಅವರಿಂದ ದುಬಾರಿ ಬೆಲೆ ಬಾಳುವ ಗಿಫ್ಟ್​ಗಳನ್ನು ಪಡೆದಿದ್ದ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಈಗ ಪೇಚಿಗೆ ಸಿಲುಕುವಂತಾಗಿದೆ. ಸುಕೇಶ್​ ಚಂದ್ರಶೇಖರ್​ ಜತೆ ಆಪ್ತವಾಗಿ ಕ್ಲಿಕ್ಕಿಸಿಕೊಂಡ ಸೆಲ್ಫಿಗಳು ಕೂಡ ರಂಗುರಂಗಿನ ಕಥೆ ಹೇಳುತ್ತಿವೆ.

ಇದನ್ನೂ ಓದಿ:

ಜಾಕ್ವೆಲಿನ್​ ಫರ್ನಾಂಡಿಸ್​ಗೂ ವಂಚನೆ? 36 ಲಕ್ಷ ರೂ ಬೆಕ್ಕು, 52 ಲಕ್ಷ ರೂ. ಬೆಲೆಯ ಕುದುರೆ ಬಗ್ಗೆ ಬಾಯ್ಬಿಟ್ಟ ನಟಿ

ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

Follow us on

Related Stories

Most Read Stories

Click on your DTH Provider to Add TV9 Kannada