ಜಾಕ್ವೆಲಿನ್​ ಫರ್ನಾಂಡಿಸ್​ಗೂ ವಂಚನೆ? 36 ಲಕ್ಷ ರೂ ಬೆಕ್ಕು, 52 ಲಕ್ಷ ರೂ. ಬೆಲೆಯ ಕುದುರೆ ಬಗ್ಗೆ ಬಾಯ್ಬಿಟ್ಟ ನಟಿ

ಅಚ್ಚರಿ ಎಂದರೆ ಜಾಕ್ವೆಲಿನ್​​ಗೆ ಪ್ರಕರಣದ ಕಿಂಗ್​ಪಿನ್ ಸುಕೇಶ್​ ಚಂದ್ರಶೇಖರ್ ವಂಚನೆ ಮಾಡಿದ್ದಾರಂತೆ! ಶ್ರೀಲಂಕಾ ಮೂಲದ ಈ ನಟಿಗೆ ಸುಕೇಶ್​ ಅವರಿಂದ ಮೋಸ ಆಗಿದೆ. ಈ ಬಗ್ಗೆ ಅವರು​ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಜಾಕ್ವೆಲಿನ್​ ಫರ್ನಾಂಡಿಸ್​ಗೂ ವಂಚನೆ? 36 ಲಕ್ಷ ರೂ ಬೆಕ್ಕು, 52 ಲಕ್ಷ ರೂ. ಬೆಲೆಯ ಕುದುರೆ ಬಗ್ಗೆ ಬಾಯ್ಬಿಟ್ಟ ನಟಿ
ಜಾಕ್ವೆಲಿನ್ ಫರ್ನಾಂಡಿಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 18, 2021 | 2:50 PM

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರಿಗೆ ಸಂಕಷ್ಟ ಹೆಚ್ಚುತ್ತಲೇ ಇದೆ. ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಜತೆಗೆ ಜಾಕ್ವೆಲಿನ್​ ಹೆಸರು ತಳುಕು ಹಾಕಿಕೊಂಡಿದೆ. ಅವರಿಬ್ಬರ ನಡುವೆ ಲವ್ವಿಡವ್ವಿ ನಡೆದಿತ್ತು ಎಂಬುದಕ್ಕೆ ಹಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಜಾರಿ ನಿರ್ದೇಶನಾಲಯ (Enforcement Directorate) ಈ ಪ್ರಕರಣದ ತನಿಖೆ ಮಾಡುತ್ತಿದ್ದು, ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ವಿಚಾರಣೆ ವೇಳೆ ಜಾಕ್ವೆಲಿನ್​ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಅಚ್ಚರಿ ಎಂದರೆ ಜಾಕ್ವೆಲಿನ್​​ಗೆ ಪ್ರಕರಣದ ಕಿಂಗ್​ಪಿನ್ ಸುಕೇಶ್​ ಚಂದ್ರಶೇಖರ್ ವಂಚನೆ ಮಾಡಿದ್ದಾರಂತೆ! ಶ್ರೀಲಂಕಾ ಮೂಲದ ಈ ನಟಿಗೆ ಸುಕೇಶ್​ ಅವರಿಂದ ಮೋಸ ಆಗಿದೆ. ಈ ಬಗ್ಗೆ ಅವರು​ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ನನಗೆ ಸುಕೇಶ್​ ಯಾರು ಎಂಬುದು ಗೊತ್ತಿಲ್ಲ. ಏಕೆಂದರೆ ಈಗ ಬಂಧನಕ್ಕೆ ಒಳಗಾದ ವ್ಯಕ್ತಿ ನನ್ನ ಬಳಿ ಬಂದು ಶೇಖರ್​ ರತ್ನ ವೇಲಾ ಎಂದು ಪರಿಚಯಿಸಿಕೊಂಡಿದ್ದ. ಸನ್ ಟಿವಿ ನೆಟ್ವರ್ಕ್​​ನ ಮಾಲೀಕ ನಾನು ಎಂದು ಆತ ಪರಿಚಯಿಸಿಕೊಂಡಿದ್ದ. ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಿತಾ ಅವರ ಸಂಬಂಧಿ ಎಂದೂ ಹೇಳಿದ್ದ. ಆತ ನನ್ನ ದೊಡ್ಡ ಫ್ಯಾನ್​ ಎಂದು ಬಿಂಬಿಸಿಕೊಂಡಿದ್ದ. ಸನ್​ ಟಿವಿ ದಕ್ಷಿಣದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ನೀವು ನಟಿಸಬೇಕು ಎಂದು ಆತ ಹೇಳಿಕೊಂಡಿದ್ದ’ ಎಂದಿದ್ದಾರೆ ಅವರು.

‘ನನಗೆ ಫೆಬ್ರವರಿ ತಿಂಗಳಲ್ಲಿ ಶೇಖರ್​ (ಸುಕೇಶ್​) ಪರಿಚಯ ಆಗಿತ್ತು. ಸಿನಿಮಾದಲ್ಲಿ ನಟಿಸೋ ಆಫರ್​ಅನ್ನು ಆತ ಕೊಟ್ಟಿದ್ದ. ಆತನನ್ನು ನಾನು ನಂಬಿದ್ದೆ. ಇದರ ಜತೆಗೆ ನನ್ನ ಸೋದರ ಸಂಬಂಧಿಗೆ ಆತ ಸಾಲದ ರೂಪದಲ್ಲಿ ಹಣ ನೀಡಿದ್ದ’ ಎಂದು ಜಾಕ್ವೆಲಿನ್​ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇದರ ಜತೆಗೆ ಬೆಕ್ಕು ಹಾಗೂ ಕುದುರೆಯನ್ನು ಗಿಫ್ಟ್​ ಆಗಿ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜಾಕ್ವೆಲಿನ್​ ಕಿಸ್ಸಿಂಗ್​ ಪ್ರಕರಣ: ನಟಿಯನ್ನು ದೂರ ಇಡೋಕೆ ಮುಂದಾದ ಸಲ್ಮಾನ್​ ಖಾನ್

Jacqueline Fernandez: ವಂಚನೆ ಪ್ರಕರಣದ ಕಿಂಗ್​ ಪಿನ್​ ಜತೆ ಕಿಸ್ಸಿಂಗ್​; ನಟಿ ಜಾಕ್ವೆಲಿನ್​ಗೆ ನೋಟಿಸ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ