ಜಾಕ್ವೆಲಿನ್​ ಕಿಸ್ಸಿಂಗ್​ ಪ್ರಕರಣ: ನಟಿಯನ್ನು ದೂರ ಇಡೋಕೆ ಮುಂದಾದ ಸಲ್ಮಾನ್​ ಖಾನ್

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಜಾಕ್ವೆಲಿನ್​ ಲಿಂಕ್ ಹೊಂದಿದ್ದರು ಎನ್ನಲಾಗಿದೆ.

ಜಾಕ್ವೆಲಿನ್​ ಕಿಸ್ಸಿಂಗ್​ ಪ್ರಕರಣ: ನಟಿಯನ್ನು ದೂರ ಇಡೋಕೆ ಮುಂದಾದ ಸಲ್ಮಾನ್​ ಖಾನ್
ಸಲ್ಮಾನ್​-ಜಾಕ್ವೆಲಿನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 05, 2021 | 8:16 PM

ಸಲ್ಮಾನ್​ ಖಾನ್​ ಹಾಗೂ ಜಾಕ್ವೆಲಿನ್​ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಹಲವು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಜೋಡಿ ಅನೇಕ ಕಡೆಗಳಿಗೆ ಒಟ್ಟಾಗಿ ತೆರಳಿದ್ದಿದೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ಆದರೆ, ಈಗ ಜಾಕ್ವೆಲಿನ್​ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಸಲ್ಮಾನ್​ ಖಾನ್​ ಬಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅವರು ಮಾಡಿಕೊಂಡ ಎಡವಟ್ಟು.

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಜಾಕ್ವೆಲಿನ್​ ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸುಕೇಶ್​ ಹಾಗೂ ಈ ನಟಿಯ ಕಿಸ್ಸಿಂಗ್​ ಫೋಟೋಗಳು ಲೀಕ್​ ಆಗಿವೆ. ಇದರಿಂದ ಈ ಪ್ರಕರಣ ಮತ್ತಷ್ಟು ಬಿಗಿಯಾಗಿದೆ.

ಜಾಕ್ವೆಲಿನ್​ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ (ಇಡಿ) ನಿರ್ಧರಿಸಿದೆ. ಈ ಕಾರಣಕ್ಕೆ ಅವರು ಈಗ ವಿದೇಶಕ್ಕೆ ತೆರಳುವಂತಿಲ್ಲ. ಡಿಸೆಂಬರ್​ 10ಕ್ಕೆ ರಿಯಾದ್​ನಲ್ಲಿ Da-bangg ಕಾರ್ಯಕ್ರಮ ಇದೆ. ಇದಕ್ಕೆ ಸಲ್ಮಾನ್​ ಖಾನ್​ ಹಾಗೂ ಜಾಕ್ವೆಲಿನ್​ ಒಟ್ಟಾಗಿ ತೆರಳಬೇಕಿತ್ತು. ಆದರೆ, ಜಾಕ್ವೆಲಿನ್​ ಮಾಡಿಕೊಂಡ ಎಡವಟ್ಟಿನಿಂದ ಅವರಿಗೆ ವಿದೇಶಕ್ಕೆ ತೆರಳೋಕೆ ಆಗುತ್ತಿಲ್ಲ. ಹೀಗಾಗಿ, ಅವರನ್ನು ದೂರ ಇಡಲು ಸಲ್ಲು ನಿರ್ಧರಿಸಿದ್ದಾರೆ. ಈ ಮಧ್ಯೆ ಜಾಕ್ವೆಲಿನ್​ ಇಂದು (ಡಿಸೆಂಬರ್​ 5) ದುಬೈಗೆ ಹಾರುವ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದಾರೆ.

Da-bangg ಕಾರ್ಯಕ್ರಮಕ್ಕೆ ಎಂಟ್ರಿ ಪಡೆಯೋಕೆ ಅಭಿಮಾನಿಗಳು ಟಿಕೆಟ್​ ಪಡೆಯಬೇಕು. ಈ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಹಾಗೂ ಮತ್ತಿತರರು ಡ್ಯಾನ್ಸ್​ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಡಿಸೆಂಬರ್​ 10ರಂದು ರಿಯಾದ್​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ರೊಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿದೆ. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಅಕ್ಟೋಬರ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ ಫರ್ನಾಂಡಿಸ್​​ಗೆ ಸಮನ್ಸ್ ನೀಡಲಾಗಿತ್ತು.

ಇದನ್ನೂ ಓದಿ: ಬಹುಕೋಟಿ ವಂಚನೆ ಆರೋಪಿ ಜತೆ ಜಾಕ್ವೆಲಿನ್​ ಲವ್ವಿಡವ್ವಿಗೆ ಸಿಕ್ತು ಇನ್ನಷ್ಟು ಫೋಟೋಗಳ ಸಾಕ್ಷಿ

ಜಾಕ್ವೆಲಿನ್​ಗೆ 36 ಲಕ್ಷ ರೂಪಾಯಿ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್​

Published On - 8:03 pm, Sun, 5 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ