ಶಾರ್ಟ್ಸ್, ಸ್ಪೋರ್ಟ್ಸ್​ ಬ್ರಾ ಧರಿಸಿದ್ದನ್ನು​ ನೋಡಿ ಕಣ್ಣರಳಿಸಿದ ಅಭಿಮಾನಿಗಳಿಗೆ ಖಡಕ್​ ಉತ್ತರ ನೀಡಿದ ಜಾನ್ವಿ ಕಪೂರ್​

ಜಾನ್ವಿ ಜಿಮ್​ನಿಂದ ಹೊರ ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬರುತ್ತವೆ.

ಶಾರ್ಟ್ಸ್, ಸ್ಪೋರ್ಟ್ಸ್​ ಬ್ರಾ ಧರಿಸಿದ್ದನ್ನು​ ನೋಡಿ ಕಣ್ಣರಳಿಸಿದ ಅಭಿಮಾನಿಗಳಿಗೆ ಖಡಕ್​ ಉತ್ತರ ನೀಡಿದ ಜಾನ್ವಿ ಕಪೂರ್​
ಜಾನ್ವಿ

ಸೆಲೆಬ್ರಿಟಿಗಳು ತಮ್ಮ ಫಿಟ್​ನೆಸ್​ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವ ವಿಚಾರವನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ನಿತ್ಯ ಹಲವು ಗಂಟೆ ಅವರು ಜಿಮ್​ನಲ್ಲಿ ಕಳೆಯುತ್ತಾರೆ. ನಟಿಯರೂ ಫಿಟ್​ನೆಸ್​ ಕಾಯ್ದುಕೊಳ್ಳೋಕೆ ಯೋಗ ಹಾಗೂ ಜಿಮ್​ ಮಾಡುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಜಿಮ್​ನಲ್ಲಿ ಹಲವು ಗಂಟೆ ಕಳೆಯುತ್ತಾರೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಾರೆ. ಅವರು ಜಿಮ್​ ಮಾಡುವಾಗ ಯಾವಾಗಲೂ ಶಾರ್ಟ್ಸ್​ ಹಾಗೂ ಸ್ಪೋರ್ಟ್ಸ್​ ಬ್ರಾ ಧರಿಸಿರುತ್ತಾರೆ. ಈ ಬಗ್ಗೆ ಅನೇಕರು ಕಣ್ಣರಳಿಸಿದ್ದಿದೆ. ಕೆಲವರು ಇದಕ್ಕೆ  ಕೆಟ್ಟದಾಗಿ ಕಮೆಂಟ್​ ಮಾಡಿದ ಉದಾಹರಣೆ ಕೂಡ ಇದೆ. ಈ ವಿಚಾರಕ್ಕೆ ಜಾನ್ವಿ ಖಡಕ್​ ಆಗಿ ಉತ್ತರ ನೀಡಿದ್ದಾರೆ.

ಜಾನ್ವಿ ಜಿಮ್​ನಿಂದ ಹೊರ ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬರುತ್ತವೆ. ಈ ಬಗ್ಗೆ ಜಾನ್ವಿ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

‘ಅಭಿಮಾನಿಗಳು ಜಿಮ್​ ಲುಕ್​ನಲ್ಲಿ ನನ್ನನ್ನು ಹೆಚ್ಚಾಗಿ ನೋಡಿದ್ದಾರೆ ಎಂದು ಹೇಳುತ್ತಾರೆ. ನಾನು ಅದನ್ನೊಂದೇ ಮಾಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ನನಗೆ ಆ ಉಡುಗೆ ಹೆಚ್ಚು ಇಷ್ಟ. ನನ್ನ ಜಿಮ್​ ಶಾರ್ಟ್ಸ್​ ಕೆಲವರಿಗೆ ಇಷ್ಟವಾಗುವುದಿಲ್ಲ. ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವ ಬಗ್ಗೆ ಕೆಲವರು ಕಮೆಂಟ್​ ಮಾಡುತ್ತಾರೆ. ಈ ಬಗ್ಗೆ ನನಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದಾರೆ. ಈ ಮೂಲಕ ಇವೆಲ್ಲವನ್ನೂ ತಾವು ನಿರ್ಲಕ್ಷ್ಯ ಮಾಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಅನಿಲ್​ ಕಪೂರ್​ ಕೂಡ ಈ ಸಂದರ್ಶನದ ಸಮಯದಲ್ಲಿ ಇದ್ದರು. ಅವರು, ತಮ್ಮ ಫೋಟೋಗಳನ್ನು ಯಾರು ತೆಗೆಯುವುದೇ ಇಲ್ಲ ಎಂದು ಬೇಸರ ಹೊರ ಹಾಕಿದರು. ‘ಪಾಪರಾಜಿಗಳು ನನ್ನ ಫೋಟೋ ತೆಗೆಯುವುದಿಲ್ಲ. ಅವರಿಗೆ ಜಾನ್ವಿ ಫೋಟೋ ಮಾತ್ರ ಬೇಕು. ಇಲ್ಲದಿದ್ದರೆ ಫೋಟೋಗೆ ಪೋಸ್​​ ಕೊಡೋಕೆ ನಾನು ಜಿಮ್​ ಎದುರು ಹೋಗುತ್ತಿದ್ದೆ’ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: Janhvi Kapoor: ಚಿಲ್ಲಿಂಗ್​ ಮೋಡ್​ನಲ್ಲಿ ಜಾನ್ವಿ ಕಪೂರ್​; ಹಾಟ್​ ಫೋಟೋ ವೈರಲ್​ 

ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್​ ಆಯ್ತು ಜಾನ್ವಿ ಕಪೂರ್​ ಜಗಳದ ವಿಡಿಯೋ

Click on your DTH Provider to Add TV9 Kannada