ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಮಿತಿ ಮೀರಿದ ಪುಂಡಾಟಿಕೆ ಬಗ್ಗೆ ಇಡೀ ಕರ್ನಾಟಕವೇ ಗರಂ ಆಗಿದೆ. ಕನ್ನಡ ಚಿತ್ರರಂಗದ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ರಚಿತಾ ರಾಮ್ (Rachita Ram) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾದ (Rider Movie) ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ‘ಟಿವಿ9 ಕನ್ನಡ’ದ ಜತೆ ಮಾತನಾಡಿದ ಅವರು ಕೆಲವು ವಿಷಯಗಳನ್ನು ಹಂಚಿಕೊಂಡರು. ‘ಖಂಡಿತ ಇದು ಬೇಜಾರಾಗುವಂತಹ ಸಂದರ್ಭ. ಕೆಲವೊಂದು ವಿಷಯವನ್ನು ಮಾತಿನಲ್ಲಿ ಹೇಳೋಕೆ ಆಗಲ್ಲ. ಎಲ್ಲರಿಗೂ ಪ್ರೀತಿ ನೀಡುವವರು ನಾವು. ನಮ್ಮ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದಾಗ ಬೇಜಾರು ಆಗುತ್ತೆ. ಬೇಜಾರು ಆಗಿದೆ ಅಂತ ನಾವು ಸುಮ್ಮನೆ ಕೂರುವಂತಿಲ್ಲ. ನಮ್ಮನ್ನು ಕೆಣಕಿ ರೋಷ ಬರುವಂತೆ ಮಾಡಲಾಗಿದೆ. ಇದರ ಬಗ್ಗೆ ದೊಡ್ಡವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ನನ್ನ ಬೆಂಬಲ ಇದಕ್ಕೆ ಇದ್ದೇ ಇರುತ್ತದೆ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಇದನ್ನೂ ಓದಿ:
ಚಂದನ್ ಶೆಟ್ಟಿ ಜತೆ ರಚಿತಾ ರಾಮ್ ‘ಲಕ ಲಕ ಲ್ಯಾಂಬೋರ್ಗಿನಿ’; ಪೋಸ್ಟರ್ ಮೂಲಕ ಹೆಚ್ಚಿತು ಕ್ರೇಜ್
‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್