‘ಹೀಗೆ ಬಂದ್​ ಮಾಡಿದ್ರೆ ನಾವು ಆತ್ಮಹತ್ಯೆ ಮಾಡ್ಕೋಬೇಕು ಅಷ್ಟೇ’: ಗುರು ದೇಶಪಾಂಡೆ ನೋವಿನ ಮಾತು

‘ಕನ್ನಡದ ಹೋರಾಟ ಎಂಬುದು ಕನ್ನಡಿಗರ ವಿರುದ್ಧದ ಹೋರಾಟ ಆಗಬಾರದು. ಹೀಗೆಲ್ಲ ಬಂದ್​ ಮಾಡಿದರೆ ನಾವು ಸೂಸೈಡ್​ ಮಾಡಿಕೊಳ್ಳಬೇಕಾಗುತ್ತೆ ಅಷ್ಟೇ’ ಎಂದು ಗುರು ದೇಶಪಾಂಡೆ ಹೇಳಿದ್ದಾರೆ.

TV9kannada Web Team

| Edited By: Madan Kumar

Dec 23, 2021 | 10:09 AM

ಗುರು ದೇಶಪಾಂಡೆ (Guru Deshpande) ನಿರ್ಮಾಣದ ‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಅನೇಕ ಅಡೆತಡೆಗಳನ್ನು ಎದುರಿಸುತ್ತಿದೆ. ಈಗಾಗಲೇ ಚಿತ್ರತಂಡದಲ್ಲಿ ಬಿರುಕು ಮೂಡಿದೆ. ನಾಯಕ ನಟ ಅಜಯ್​ ರಾವ್​ (Ajay Rao) ಅವರು ನಿರ್ಮಾಪಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಈ ನಡುವೆಯೂ ಸಿನಿಮಾವನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿ.31ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ ಅದೇ ದಿನ ಕರ್ನಾಟಕ ಬಂದ್​ (Karnataka Bandh) ಆಗುವ ಸಾಧ್ಯತೆ ಇದೆ. ಅದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಬೆಂಬಲ ನೀಡಿದರೆ ಚಿತ್ರರಂಗಕ್ಕೆ ತುಂಬ ತೊಂದರೆ ಆಗಲಿದೆ ಎಂದು ಗುರು ದೇಶಪಾಂಡೆ ಹೇಳಿದ್ದಾರೆ. ‘ಕನ್ನಡದ ಹೋರಾಟ ಎಂಬುದು ಕನ್ನಡಿಗರ ವಿರುದ್ಧದ ಹೋರಾಟ ಆಗಬಾರದು. ಹೀಗೆಲ್ಲ ಬಂದ್​ ಮಾಡಿದರೆ ನಾವು ಸೂಸೈಡ್​ ಮಾಡಿಕೊಳ್ಳಬೇಕು ಅಷ್ಟೇ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ ಸಿನಿಮಾ ಬಿಡುಗಡೆ ಆಗುವುದು ಶುಕ್ರವಾರ. ಅದೇ ದಿನ ಬಂದ್​ ಮಾಡಬೇಕೋ ಬೇಡವೋ ಎಂಬುದು ವಾಣಿಜ್ಯ ಮಂಡಳಿಯವರಿಗೆ ತಿಳಿಯುವುದಿಲ್ಲವಾ’ ಎಂದು ಗುರು ದೇಶಪಾಂಡೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್​ ರಾವ್​

‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್​

Follow us on

Click on your DTH Provider to Add TV9 Kannada