‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್​ ರಾವ್​

ಶಿವರಾಜ್​ಕುಮಾರ್​ ಮಾತಿಗೆ ‘ಲವ್​​ ಯೂ ರಚ್ಚು’ ಸಿನಿಮಾದ ಹೀರೋ ಅಜಯ್​ ರಾವ್​ ಮಾತನಾಡಿದ್ದಾರೆ. ‘ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಹೊರತಾಗಿ ಬೇರೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂದರೆ ಅದಕ್ಕೆ ಚಿತ್ರರಂಗ ಸಿದ್ಧವಿದೆ ಎಂದಿದ್ದಾರೆ.

TV9kannada Web Team

| Edited By: shivaprasad.hs

Dec 22, 2021 | 7:45 AM

ಬೆಳಗಾವಿಯಲ್ಲಿ ಎಂಇಎಸ್​ (MES) ಕಾರ್ಯಕರ್ತರು ಕರ್ನಾಟಕದ ಬಾವುಟ ಸುಟ್ಟ ದುರ್ವರ್ತನೆಯನ್ನು ಅನೇಕರು ಖಂಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಕೂಡ ಧ್ವನಿ ಎತ್ತಿದೆ. ಆ ಬಗ್ಗೆ ಶಿವರಾಜ್​ಕುಮಾರ್​ ಇತ್ತೀಚೆಗೆ ಮಾತನಾಡಿದ್ದರು. ‘ನಮ್ಮ ಭಾಷೆಗೆ ನಾನು ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60 ವರ್ಷ ನನ್ನನ್ನು ಬೆಳೆಸಿದ್ದೀರಿ. ಈಗ ಭಾಷೆಗಾಗಿಯೇ ಪ್ರಾಣ ಹೋಗಬೇಕು ಎಂದರೆ ಹೋಗಲಿ ಬಿಡಿ’ ಎಂದು ಶಿವಣ್ಣ ಹೆಳಿದ್ದರು. ಶಿವರಾಜ್​ಕುಮಾರ್​ ಮಾತಿಗೆ ‘ಲವ್​​ ಯೂ ರಚ್ಚು’ ಸಿನಿಮಾದ ಹೀರೋ ಅಜಯ್​ ರಾವ್​ ಮಾತನಾಡಿದ್ದಾರೆ. ‘ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಹೊರತಾಗಿ ಬೇರೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂದರೆ ಅದಕ್ಕೆ ಚಿತ್ರರಂಗ ಸಿದ್ಧವಿದೆ. ಶಿವಣ್ಣನ ಅವರು ಹೇಳಿದಂತೆ ಪ್ರಾಣ ಹೋದರೂ ಚಿಂತೆ ಇಲ್ಲ, ನಾವು ಹೋರಾಟ ಮಾಡ್ತೀವಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: Ajay Rao: ಕಾರು ಅಪಘಾತಕ್ಕೆ ಒಳಗಾದವರಿಗೆ ಹೆದ್ದಾರಿಯಲ್ಲಿ ನಟ ಅಜಯ್​ ರಾವ್​ ಸಹಾಯ

 

 

Follow us on

Click on your DTH Provider to Add TV9 Kannada