Ajay Rao: ಕಾರು ಅಪಘಾತಕ್ಕೆ ಒಳಗಾದವರಿಗೆ ಹೆದ್ದಾರಿಯಲ್ಲಿ ನಟ ಅಜಯ್​ ರಾವ್​ ಸಹಾಯ

ಅದೃಷ್ಟವಶಾತ್ ಕಾರಿನಲ್ಲಿ ಇದ್ದವರಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಅಜಯ್ ರಾವ್ ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿನ ಮೆಡಿಕಲ್ ವಸ್ತುಗಳನ್ನು ಬಳಸಿ ಪ್ರಥಮ ಚಿಕಿತ್ಸೆ ನೀಡಿದರು.

ಅಪಘಾತದಿಂದ ಗಾಯಗೊಂಡಿದ್ದವರಿಗೆ ಪ್ರಥಮ‌ ಚಿಕಿತ್ಸೆ ನೀಡುವ ಮೂಲಕ ಸ್ಯಾಂಡಲ್​ವುಡ್​ ನಟ ಅಜಯ್ ರಾವ್ ಮಾನವೀಯತೆ ಮೆರೆದಿದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಬಳಿ ಈ ಘಟನೆ ನಡೆದಿದೆ. ಅಜಯ್ ರಾವ್ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಒಂದು ಕಾರು ಅಪಘಾತಕ್ಕೆ ಒಳಗಾಗಿತ್ತು. ಮೈಸೂರಿನಿಂದ ಹೊಸಪೇಟೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಲ್ಟಿ ಹೊಡೆದಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಕಡೆ ಹೊರಟಿದ್ದ ನಟ ಅಜಯ್ ರಾವ್ ಸಹಾಯ ಮಾಡಿದ್ದಾರೆ.

ಅಪಘಾತ ಆಗಿರುವುದನ್ನು ಗಮನಿಸಿದ ಅಜಯ್​ ರಾವ್​ ಅವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದರು. ಅದೃಷ್ಟವಶಾತ್ ಕಾರಿನಲ್ಲಿ ಇದ್ದವರಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಅಜಯ್ ರಾವ್ ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿನ ಮೆಡಿಕಲ್ ವಸ್ತುಗಳನ್ನು ಬಳಸಿ ಪ್ರಥಮ ಚಿಕಿತ್ಸೆ ನೀಡಿದರು. ಇದೇ ವೇಳೆ ಕಾನಾಹೊಸಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರ ಸಾರ್ವಜನಿಕರು ಹಾಗೂ ಪಿಎಸ್ಐ ಸಹಾಯಕ್ಕೆ ಧಾವಿಸಿದ್ರು. ಅಜಯ್ ರಾವ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

‘ನಾನು ಹೆದರಿ ಎಲ್ಲಿಯೂ ಓಡಿ ಹೋಗಿಲ್ಲ’; ವಿಚಾರಣೆ ಬಳಿಕ ನಟ ಅಜಯ್​ ರಾವ್​ ಮಾತು

‘ಲವ್​ ಯೂ ರಚ್ಚು’ ಕೇಸ್​; ಬಿಡದಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ನಟ ಅಜಯ್​ ರಾವ್​

Click on your DTH Provider to Add TV9 Kannada