ಇಮ್ರಾನ್​ ಹಷ್ಮಿ ಹೊಸ ಅವತಾರ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್​; ಸಲ್ಲುಗೆ ಟಫ್​ ಫೈಟ್​

ಇಮ್ರಾನ್​ ಹಷ್ಮಿ ಹೊಸ ಅವತಾರ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್​; ಸಲ್ಲುಗೆ ಟಫ್​ ಫೈಟ್​
ಇಮ್ರಾನ್​ ಹಷ್ಮಿ ಹೊಸ ಅವತಾರ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್​; ಸಲ್ಲುಗೆ ಟಫ್​ ಫೈಟ್​

ಸಲ್ಮಾನ್​ ಖಾನ್​ ಸಿನಿಮಾ ಎಂದರೆ, ಅಲ್ಲಿ ಖಳನಿಗೂ ಸಾಕಷ್ಟು ಪ್ರಾಮುಖ್ಯತೆ ಇರುತ್ತದೆ. ಪ್ರತೀ ಸಿನಿಮಾದಲ್ಲೂ ಅಳೆದು ತೂಗಿ ವಿಲನ್​ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಾರಿ ಟೈಗರ್​ 3 ತಂಡ ಇಮ್ರಾನ್​ ಅವರನ್ನು ವಿಲನ್​ ಪಾತ್ರಕ್ಕೆ ಆಯ್ಕೆ ಮಾಡಿದೆ.

TV9kannada Web Team

| Edited By: Rajesh Duggumane

Aug 01, 2021 | 7:12 PM

‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದ್ದವು. ಈಗ ಸಲ್ಮಾನ್​ ಖಾನ್ ‘ಟೈಗರ್​ 3’ಗೆ ಸಿದ್ಧತೆ ನಡೆಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಅವರಿಗೆ ಈ ಸಿನಿಮಾ ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ಈ ಚಿತ್ರದ ಬಗ್ಗೆ ಹೆಚ್ಚು ಆಸ್ತೆ ವಹಿಸಿದ್ದಾರೆ ಬಾಲಿವುಡ್​ ಖ್ಯಾತ ನಟ ಇಮ್ರಾನ್​ ಹಷ್ಮಿ ‘ಟೈಗರ್​ 3’ಗೆ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರು ಈ ಚಿತ್ರಕ್ಕಾಗಿ ದೇಹವನ್ನು ಕಟ್ಟುಮಸ್ತಾಗಿಸಿಕೊಳ್ಳುತ್ತಿದ್ದಾರೆ. ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇಮ್ರಾನ್​ ಹಷ್ಮಿ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತಾವು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಅವರು ಹಾಕಿದ್ದಾರೆ. ಈ ಫೋಟೋದಲ್ಲಿ ಅವರ ಬೈಸೆಪ್ಸ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.  ಸಾಕಷ್ಟು ಜನರು ಇಮ್ರಾನ್​ ಅವರನ್ನು ಹೊಗಳಿದ್ದಾರೆ.

ಸಲ್ಮಾನ್​ ಖಾನ್​ ಸಿನಿಮಾ ಎಂದರೆ, ಅಲ್ಲಿ ಖಳನಿಗೂ ಸಾಕಷ್ಟು ಪ್ರಾಮುಖ್ಯತೆ ಇರುತ್ತದೆ. ಪ್ರತೀ ಸಿನಿಮಾದಲ್ಲೂ ಅಳೆದು ತೂಗಿ ವಿಲನ್​ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಬಾರಿ ಟೈಗರ್​ 3 ತಂಡ ಇಮ್ರಾನ್​ ಅವರನ್ನು ವಿಲನ್​ ಪಾತ್ರಕ್ಕೆ ಆಯ್ಕೆ ಮಾಡಿದೆ. ಹೀಗಾಗಿ, ಇಮ್ರಾನ್ ಪಾತ್ರಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ. ಈ ಫೋಟೋ ನೋಡಿದ ಅನೇಕರು ‘ಸಲ್ಲುಗೆ ಇಮ್ರಾನ್​ ಹಷ್ಮಿ ಟಫ್​ ಫೈಟ್​ ನೀಡೋದರಲ್ಲಿ ಅನುಮಾನವಿಲ್ಲ’ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ಇನ್ನೂ ಕೆಲವರು ಟೈಗರ್​ 3 ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

‘ಟೈಗರ್​ 3’ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ಮಾಪಕರು ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ‘ಟೈಗರ್​ 3’ ಚಿತ್ರದಲ್ಲಿ ವಿಲನ್​ ಇಂಟ್ರಡಕ್ಷನ್​ ಸೀನ್​ಗಾಗಿ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಇಮ್ರಾನ್​ ಬಾಡಿ ನೋಡಿದ ನಂತರದಲ್ಲಿ ವಿಲನ್​ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ ಅನ್ನೋದು ಅಭಿಮಾನಿಗಳಿಗೆ ಪಕ್ಕಾ ಆಗಿದೆ.

‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ಬಳಿಕ ಟೈಗರ್​ ಸರಣಿಯಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿಯೂ ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಕೂಡ ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

Follow us on

Related Stories

Most Read Stories

Click on your DTH Provider to Add TV9 Kannada