ಯುವತಿಯರ ಜತೆ ಲೈಂಗಿಕ ಸಂಪರ್ಕ ನಡೆಸೋಕೆ ನಟನಾ ಶಾಲೆ ಆರಂಭಿಸಿದ ನಟ? ಒಂದಷ್ಟು ವಿಚಾರ ಒಪ್ಪಿಕೊಂಡ ಹೀರೋ  

ಯುವತಿಯರ ಜತೆ ಲೈಂಗಿಕ ಸಂಪರ್ಕ ನಡೆಸೋಕೆ ನಟನಾ ಶಾಲೆ ಆರಂಭಿಸಿದ ನಟ? ಒಂದಷ್ಟು ವಿಚಾರ ಒಪ್ಪಿಕೊಂಡ ಹೀರೋ  
ಜೇಮ್ಸ್​ ಫ್ರಾನ್ಕೋ

 2018ರ ಜನವರಿ ತಿಂಗಳಲ್ಲಿ ಐದು ಮಹಿಳೆಯರು ಜೇಮ್ಸ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಜೇಮ್ಸ್​ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

TV9kannada Web Team

| Edited By: Rajesh Duggumane

Dec 23, 2021 | 5:23 PM

ಅಮೆರಿಕದ ನಟ, ನಿರ್ದೇಶಕ ಜೇಮ್ಸ್​ ಫ್ರಾನ್ಕೋ (James Franco) ಅವರು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ವಿದ್ಯಾರ್ಥಿನಿಯರ ಜತೆಗೆ ಲೈಂಗಿಕ ಸಂಪರ್ಕ ನಡೆಸಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಇದನ್ನು ಅವರು ಈಗ ಒಪ್ಪಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ, ತಾವು ಹಾಗೆ ಮಾಡಿದ್ದೇಕೆ ಎಂಬುದನ್ನು ಅವರು ವಿವರಿಸಿದ್ದಾರೆ. ಸದ್ಯ, ಈ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ.

2018ರ ಜನವರಿ ತಿಂಗಳಲ್ಲಿ ಐದು ಮಹಿಳೆಯರು ಜೇಮ್ಸ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಜೇಮ್ಸ್​ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಐವರ ಪೈಕಿ ನಾಲ್ವರು ಜೇಮ್ಸ್​ ನಡೆಸುತ್ತಿದ್ದ ನಟನಾ ತರಬೇತಿ ಶಾಲೆಯವರೇ ಆಗಿದ್ದರು. ಅವರ ವಿರುದ್ಧ ಕೇಳಿ ಬಂದ ಈ ಗಂಭೀರ ಆರೋಪದ ನಂತರದಲ್ಲಿ ಆ ಶಾಲೆಯನ್ನು ಮುಚ್ಚಲಾಯಿತು. ಕಿರುಕುಳಕ್ಕೆ ಒಳಗಾದ ಇಬ್ಬರು ವಿದ್ಯಾರ್ಥಿನಿಯರು 2019ರಲ್ಲಿ ಜೇಮ್ಸ್​ ಹಾಗೂ ಅವರ ಸಹಚರರ ವಿರುದ್ಧ ದೂರು ದಾಖಲು ಮಾಡಿದರು. ಈಗ ಜೇಮ್ಸ್​ ಈ ವಿಚಾರದ ಕುರಿತು ಮಾತನಾಡಿದ್ದಾರೆ.

‘ನಾನು ವಿದ್ಯಾರ್ಥಿಗಳೊಂದಿಗೆ ಮಲಗಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಸಮಯ ಕಳೆದಂತೆ ವಿದ್ಯಾರ್ಥಿನಿಯರ ಜತೆ ಆಪ್ತನಾದೆ ಮತ್ತು ಅವರ ಜತೆಗೆ ಮಲಗಿದೆ. ನಾನು ಮಾಡಿದ್ದು ತಪ್ಪು’ ಎಂದು ಅವರು ಒಪ್ಪಿಕೊಂಡಿದ್ದಾರೆ.  ವಿದ್ಯಾರ್ಥಿನಿಯರ ಜತೆ ಸೆಕ್ಸ್​ ಮಾಡುವ ಉದ್ದೇಶದಿಂದಲೇ ನಟನಾ ಶಾಲೆ ಆರಂಭಿಸಿದರು ಎನ್ನುವ ಆರೋಪ ಜೇಮ್ಸ್​ ಮೇಲೆ ಇದೆ. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ಅದೊಂದು ಮಾಸ್ಟರ್​ ಪ್ಲ್ಯಾನ್​ ಆಗಿರಲಿಲ್ಲ. ನಾನು ಶಾಲೆಯನ್ನು ಆರಂಭಿಸಿದ್ದರ ಉದ್ದೇಶ ಅದಾಗಿರಲಿಲ್ಲ. ತರಗತಿಗೆ ಯಾರು ಸೇರಬೇಕು, ಯಾರು ಸೇರಬಾರದು ಎನ್ನುವುದನ್ನು ನಿರ್ಧಾರ ಮಾಡುವವನು ನಾನಾಗಿರಲಿಲ್ಲ’ ಎಂದಿದ್ದಾರೆ ಜೇಮ್ಸ್​. ಈ ಮೂಲಕ ಇದು ಉದ್ದೇಶಪೂರ್ವಕವಾಗಿ ನಡೆಸಿದ ಲೈಂಗಿಕ ಕ್ರಿಯೆ ಆಗಿರಲಿಲ್ಲ ಎಂದಿದ್ದಾರೆ ಅವರು.

ಈ ವಿಚಾರವನ್ನು ಅವರು ಆಗ ಏಕೆ ಹೇಳಿಲ್ಲ ಎನ್ನುವ ಪ್ರಶ್ನೆಯೂ ಜೇಮ್ಸ್​ಗೆ ಎದುರಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘2018ರಲ್ಲಿ ನನ್ನ ಬಗ್ಗೆ ಕೆಲವು ದೂರುಗಳು ಬಂದವು. ಲೇಖನಗಳು ಪ್ರಕಟವಾದವು. ಆ ಕ್ಷಣದಲ್ಲಿ ನಾನು ಸುಮ್ಮನಿರಬೇಕು ಎಂದು ನಿರ್ಧರಿಸಿದೆ. ಏನನ್ನೂ ಹೇಳಲು ಸರಿಯಾದ ಸಮಯ ಅದಾಗಿರಲಿಲ್ಲ’ ಎಂದಿದ್ದಾರೆ ಜೇಮ್ಸ್​.

ಇದನ್ನೂ ಓದಿ: ಸಿನಿಮಾಗಾಗಿ ಪುನೀತ್​ ಪಡೆದಿದ್ದ ಅಡ್ವಾನ್ಸ್​ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿ ದೊಡ್ಡತನ ಮೆರೆದ ಅಶ್ವಿನಿ ಪುನೀತ್​ ರಾಜ್​ಕುಮಾರ್​

Follow us on

Related Stories

Most Read Stories

Click on your DTH Provider to Add TV9 Kannada