‘ರಾಧೆ ಶ್ಯಾಮ್’ ಟ್ರೇಲರ್ನಲ್ಲಿ ಪ್ರೀತಿ-ಪ್ರೇಮದ ವಿಚಾರವನ್ನು ಹೈಲೈಟ್ ಆಗಿದೆ. ವಿಕ್ರಮಾದಿತ್ಯಗೆ (ಪ್ರಭಾಸ್) ಪ್ರೀತಿ ಪ್ರೇಮದ ಬಗ್ಗೆ ನಂಬಿಕೆ ಇರುವುದಿಲ್ಲ. ಆಗ ವಿಕ್ರಮಾದಿತ್ಯಗೆ ಪ್ರೇರಣಾ (ಪೂಜಾ ಹೆಗ್ಡೆ) ಸಿಗುತ್ತಾಳೆ. ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ವಿಕ್ರಮಾದಿತ್ಯ ಕೇವಲ ಲವರ್ ಬಾಯ್ ಅಲ್ಲ. ಆತನಲ್ಲಿ ಒಂದು ಅಗಾಧ ಶಕ್ತಿ ಅಡಗಿರುತ್ತದೆ. ಇನ್ನು, ಟ್ರೇಲರ್ನಲ್ಲಿ ಟೈಟಾನಿಕ್ ಹಡಗು ಮುಳುಗುವದನ್ನೂ ತೋರಿಸಲಾಗಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾದ ಬಹುತೇಕ ಶೂಟಿಂಗ್ ವಿದೇಶದಲ್ಲಿ ನಡೆದಿದೆ.
ನಟ ಪ್ರಭಾಸ್ ಅವರಿಗೆ ‘ಬಾಹುಬಲಿ’ ಚಿತ್ರದ ಬಳಿಕ ಹೊಸದೊಂದು ಇಮೇಜ್ ಸಿಕ್ಕಿತು. ಆದರೆ ಈಗ ರಿಲೀಸ್ ಆಗಲು ಸಿದ್ಧವಾಗಿರುವ ‘ರಾಧೆ ಶ್ಯಾಮ್’ ಸಿನಿಮಾ ಮೂಲಕ ಆ ಇಮೇಜ್ನಿಂದ ಹೊರಬರಲು ಅವರು ನಿರ್ಧರಿಸಿದಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್, ಸಾಂಗ್ಗಳಲ್ಲಿ ಪ್ರಭಾಸ್ ಅವರು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲೂ ಅದೇ ಮುಂದುವರಿದಿದೆ. ಇಡೀ ಸಿನಿಮಾ ತುಂಬ ಡಿಫರೆಂಟ್ ಆಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ‘ರಾಧೆ ಶ್ಯಾಮ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇದನ್ನೂ ಓದಿ: ‘ರಾಧೆ ಶ್ಯಾಮ್’ ಚಿತ್ರದ ಕಥೆ ಲೀಕ್; ಪ್ರಭಾಸ್-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ
‘ರಾಧೆ ಶ್ಯಾಮ್’ ಚಿತ್ರದ ಕನ್ನಡ ಹಾಡು ‘ಸಂಚಾರಿ..’ ರಿಲೀಸ್; ಸಾಂಗ್ ಅದ್ಭುತವಾಗಿದೆ ಎಂದ ಫ್ಯಾನ್ಸ್