‘ರಾಧೆ ಶ್ಯಾಮ್’​ ಚಿತ್ರದ ಕನ್ನಡ ಹಾಡು ‘ಸಂಚಾರಿ..’ ರಿಲೀಸ್​; ಸಾಂಗ್​ ಅದ್ಭುತವಾಗಿದೆ ಎಂದ ಫ್ಯಾನ್ಸ್​

‘ರಾಧೆ ಶ್ಯಾಮ್’​ ಚಿತ್ರದ ಕನ್ನಡ ಹಾಡು ‘ಸಂಚಾರಿ..’ ರಿಲೀಸ್​; ಸಾಂಗ್​ ಅದ್ಭುತವಾಗಿದೆ ಎಂದ ಫ್ಯಾನ್ಸ್​
ಪೂಜಾ ಹೆಗ್ಡೆ, ಪ್ರಭಾಸ್

ರಾಧಾಕೃಷ್ಣ ಕುಮಾರ್​ ಅವರು ನಿರ್ದೇಶನ ಮಾಡಿರುವ ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರಭಾಸ್​-ಪೂಜಾ ಹೆಗ್ಡೆ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಜ.14ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.

TV9kannada Web Team

| Edited By: Rajesh Duggumane

Dec 16, 2021 | 3:32 PM


ತೆಲುಗು, ತಮಿಳು, ಹಿಂದಿ ಚಿತ್ರಗಳು ಕನ್ನಡಕ್ಕೆ ಡಬ್​ ಆಗಿ ತೆರೆಕಾಣುತ್ತಿವೆ. ಈ ಕಾರಣಕ್ಕೆ ಕನ್ನಡ ಅವತರಣಿಕೆಯ ಹಾಡುಗಳಿಗೂ ಬೇರೆಯದೇ ಆದ ಸಾಹಿತ್ಯ ಬರೆದು ರಿಲೀಸ್​ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಅಲ್ಲದೆ, ಇದರ ಗುಣಮಟ್ಟದ ಬಗ್ಗೆಯೂ ಹೆಚ್ಚು ಕಾಳಜಿ ತೋರಿಸಲಾಗುತ್ತಿದೆ ಟಾಲಿವುಡ್​ನಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಚಿತ್ರವೂ ಈಗ ಕನ್ನಡದಲ್ಲಿ ಡಬ್​ ಆಗಿ ತೆರೆಗೆ ಬರುತ್ತಿದೆ. ಈ ಸಿನಿಮಾದ ‘ಸಂಚಾರಿ..’ ವಿಡಿಯೋ ಸಾಂಗ್​ ರಿಲೀಸ್​ ಆಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.

ರಾಧಾಕೃಷ್ಣ ಕುಮಾರ್​ ಅವರು ನಿರ್ದೇಶನ ಮಾಡಿರುವ ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರಭಾಸ್​-ಪೂಜಾ ಹೆಗ್ಡೆ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಜ.14ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ರಾಧೆ ಶ್ಯಾಮ್​’ ತೆರೆಕಾಣುತ್ತಿದೆ. ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಿನಿಮಾದ ಹಾಡುಗಳು ಕೂಡ ಸಾಕಷ್ಟು ಭರವಸೆ ಮೂಡಿಸಿವೆ.

ಇಂದು (ಡಿಸೆಂಬರ್ 16) ರಿಲೀಸ್​ ಆದ  ‘ರಾಧೆ ಶ್ಯಾಮ್​’ ಹಾಡು ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸತ್ಯ ಪ್ರಕಾಶ್​ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಧನಂಜಯ್​ ರಂಜನ್​ ಸಾಹಿತ್ಯ ಬರೆದಿದ್ದಾರೆ. ಜಸ್ಟಿನ್​ ಪ್ರಭಾಕರನ್​ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ನಟ ಪ್ರಭಾಸ್​ ಅವರಿಗೆ ‘ಬಾಹುಬಲಿ’ ಚಿತ್ರದ ಬಳಿಕ ಹೊಸದೊಂದು ಇಮೇಜ್​ ಸಿಕ್ಕಿತು. ಆದರೆ ಈಗ ರಿಲೀಸ್​ ಆಗಲು ಸಿದ್ಧವಾಗಿರುವ ‘ರಾಧೆ ಶ್ಯಾಮ್​’ ಸಿನಿಮಾ ಮೂಲಕ ಆ ಇಮೇಜ್​ನಿಂದ ಹೊರಬರಲು ಅವರು ನಿರ್ಧರಿಸಿದಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​, ಪೋಸ್ಟರ್, ಸಾಂಗ್​​ಗಳಲ್ಲಿ ಪ್ರಭಾಸ್​ ಅವರು ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ತುಂಬ ಡಿಫರೆಂಟ್​ ಆಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ‘ರಾಧೆ ಶ್ಯಾಮ್​’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಚಿತ್ರದ ಗೀತರಚನೆಕಾರ ಕೃಷ್ಣ ಕಾಂತ್​ ಕೆಲವು ಸುಳಿವುಗಳನ್ನು ಕೊಟ್ಟಿದ್ದರು.

ಇದನ್ನೂ ಓದಿ: ‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ 

Radhe Shyam Song: ರಿಲೀಸ್ ಆಯ್ತು ‘ರಾಧೆ ಶ್ಯಾಮ್’ ಹೊಸ ಹಾಡು; ಅರಿಜಿತ್ ಧ್ವನಿಗೆ ಜೀವ ತುಂಬಿದ ಪ್ರಭಾಸ್- ಪೂಜಾ ಹೆಗ್ಡೆ

 

Follow us on

Related Stories

Most Read Stories

Click on your DTH Provider to Add TV9 Kannada