Radhe Shyam Song: ರಿಲೀಸ್ ಆಯ್ತು ‘ರಾಧೆ ಶ್ಯಾಮ್’ ಹೊಸ ಹಾಡು; ಅರಿಜಿತ್ ಧ್ವನಿಗೆ ಜೀವ ತುಂಬಿದ ಪ್ರಭಾಸ್- ಪೂಜಾ ಹೆಗ್ಡೆ

Aashiqui Aa Gayi Song: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವ ‘ರಾಧೆ ಶ್ಯಾಮ್’ ಚಿತ್ರದ ‘ಆಶಿಕಿ ಆ ಗಯಿ’ ಹಾಡು ಮೋಡಿ ಇಂದು ಬಿಡುಗಡೆಯಾಗಿದ್ದು, ಜನರನ್ನು ಮಾಡಿದೆ.

Radhe Shyam Song: ರಿಲೀಸ್ ಆಯ್ತು ‘ರಾಧೆ ಶ್ಯಾಮ್’ ಹೊಸ ಹಾಡು; ಅರಿಜಿತ್ ಧ್ವನಿಗೆ ಜೀವ ತುಂಬಿದ ಪ್ರಭಾಸ್- ಪೂಜಾ ಹೆಗ್ಡೆ
‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ


ಪ್ರಭಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಗಳಿಗೆ ಬಂದಿದೆ. ಹೌದು, ಬಹುನಿರೀಕ್ಷಿತ ‘ರಾಧೆ ಶ್ಯಾಮ್’ (Radhe Shyam) ಚಿತ್ರದ ಹೊಸ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದ್ದು, ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಜೋಡಿ ಮೋಡಿ ಮಾಡಿದೆ. ಬಿಡುಗಡೆಯಾದ ಗಂಟೆಯೊಳಗೆ ಸುಮಾರು 10 ಲಕ್ಷ ವೀಕ್ಷಣೆಯನ್ನು ಹಾಡು ಕಂಡಿದ್ದು, ದಾಖಲೆ ಬರೆದಿದೆ. ಕಣ್ಮನ ಸೆಳೆಯುವ ಸುಂದರ ತಾಣಗಳಲ್ಲಿ ಹಾಡು ಮೂಡಿಬಂದಿದ್ದು, ಇದಕ್ಕೆ ಅರಿಜಿತ್ ಸಿಂಗ್ (Arijith Singh) ಧ್ವನಿ ಸಖತ್ ಸಾಥ್ ನೀಡಿದೆ. ಹಾಡಿಗೆ ಪ್ರಭಾಸ್- ಪೂಜಾ ಜೀವ ತುಂಬಿದ್ದು, ಮಿಥೂನ್ (Mithoon) ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ.‘ ಆಶಿಕಿ ಆ ಗಯಿ’ ಹಾಡು ವರ್ಷದ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾ ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ ಪ್ರಭಾಸ್ ಅಭಿಮಾನಿಗಳು.

‘ರಾಧೆ ಶ್ಯಾಮ್’ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ (UV Creations) ಟ್ವಿಟರ್​ನಲ್ಲಿ ಹಾಡಿಗೆ ಸುಂದರವಾದ ಕ್ಯಾಪ್ಶನ್ ನೀಡುವ ಮೂಲಕ, ಹಾಡನ್ನು ಬಿಡುಗಡೆಗೊಳಿಸಿದೆ. ‘ನಾಳೆ ಎಂಬುದೇ ಇಲ್ಲದಂತೆ ಪ್ರೀತಿಸಿ’ ಎಂಬರ್ಥದ ಸಾಲುಗಳನ್ನು ಅದು ಬರೆದಿದ್ದು, ಹಾಡನ್ನು ಪ್ರಸ್ತುತಪಡಿಸಿದೆ.

ಇಂದು ಬಿಡುಗಡೆಯಾಗಿರುವ ಹಾಡು ಇಲ್ಲಿದೆ:

ಹಾಡಿನ ಕುರಿತು ಚಿತ್ರತಂಡ ಬಿಡುಗಡೆ ಮಾಡಿರುವ ಟ್ವೀಟ್:

‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ರೊಮ್ಯಾಂಟಿಕ್​ ಲವ್​ ಸ್ಟೋರಿ ಹೊಂದಿರುವ ಈ ಸಿನಿಮಾ ಪ್ರಭಾಸ್​ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ. ರಾಧಕೃಷ್ಣ ಕುಮಾರ್​ ಅವರು ‘ರಾಧೆ ಶ್ಯಾಮ್​’ಗೆ ನಿರ್ದೇಶನ ಮಾಡಿದ್ದಾರೆ. ತೆಲುಗು, ಕನ್ನಡ, ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ರಾಧೆ ಶ್ಯಾಮ್’ ಚಿತ್ರವು ಜನವರಿ 14ರ ಸಂಕ್ರಾಂತಿಯಂದು ವಿಶ್ವಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ:

ಪ್ರಭಾಸ್​ ಅಭಿಮಾನಿಗಳಿಗೆ ಸಂಕ್ರಾಂತಿ ಸುಗ್ಗಿ; ಜ.14ಕ್ಕೆ ‘ರಾಧೆ ಶ್ಯಾಮ್​’ ರಿಲೀಸ್​

‘ಮ್ಯಾಟ್ರಿಕ್ಸ್’ ಚಿತ್ರತಂಡ ಕಾಪಾಡಿಕೊಂಡಿದ್ದ ಗುಟ್ಟು ಬಹಿರಂಗ!; ಪ್ರಿಯಾಂಕಾ ಪಾತ್ರದ ಹೆಸರು ತಿಳಿದು ಥ್ರಿಲ್ ಆದ ಫ್ಯಾನ್ಸ್ 

Published On - 12:08 pm, Wed, 1 December 21

Click on your DTH Provider to Add TV9 Kannada