ಇನ್ನೂ ಬಾಕಿ ಇದೆ ಪುನೀತ್ ಕನಸಿನ ‘ಗಂಧದ ಗುಡಿ’ ಶೂಟಿಂಗ್; ಪೂರ್ಣಗೊಳಿಸೋರು ಯಾರು?
‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು.
‘ಗಂಧದ ಗುಡಿ’ ಡಾಕ್ಯುಮೆಂಟರಿ (Gandhada Gudi Documentary) ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಹೆಚ್ಚು ಇಷ್ಟಪಟ್ಟು ಮಾಡಿರುವ ಈ ಸಾಕ್ಷ್ಯಚಿತ್ರ ಕರ್ನಾಟಕದ ವನ್ಯ ಸಂಪತ್ತು, ಪ್ರಕೃತಿ ವೈಭವವನ್ನು ಎತ್ತಿ ತೋರಿಸುತ್ತಿದೆ. ಇತ್ತೀಚೆಗೆ ಇದರ ಟೈಟಲ್ ಟೀಸರ್ (Gandhada Gudi Tittle Teaser) ರಿಲೀಸ್ ಆಗಿದ್ದು, ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪುನೀತ್ ಕಂಡ ಅದ್ಭುತ ಕನಸಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ, ‘ಗಂಧದ ಗುಡಿ’ ಶೂಟಿಂಗ್ ಇನ್ನೂ ಬಾಕಿ ಉಳಿದುಕೊಂಡಿದೆ. ಪುನೀತ್ ಅವರು ಇದನ್ನು ಪೂರ್ಣಗೊಳಿಸಬೇಕಿತ್ತು. ಅದಕ್ಕೂ ಮೊದಲೇ ಅವರು ನಿಧನ ಹೊಂದಿದ್ದರು. ಹಾಗಾದರೆ, ಇದನ್ನು ಈಗ ಪೂರ್ಣಗೊಳಿಸೋರು ಯಾರು? ಆ ಪ್ರಶ್ನೆಗೂ ಉತ್ತರವಿದೆ.
‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಗಳಿಸಿಕೊಂಡಿತ್ತು. ಈಗ ಬಾಕಿ ಇರುವ ಶೂಟಿಂಗ್ಅನ್ನು ಅಮೋಘ ವರ್ಷ ಅವರು ಪುನೀತ್ ಇಲ್ಲದೆ ಶೂಟ್ ಪೂರ್ಣಗೊಳಿಸಬೇಕಿದೆ.
ಮೂಲಗಳ ಪ್ರಕಾರ ‘ಗಂಧದ ಗುಡಿ’ಯ 7-8 ದಿನಗಳ ಶೂಟಿಂಗ್ ಬಾಕಿ ಇವೆ. ಪುನೀತ್ ಅವರು ಇದಕ್ಕಾಗಿ ಡೇಟ್ ಕೂಡ ನೀಡಿದ್ದರು. ಈ ಮಧ್ಯೆ ಅವರು ಅಕಾಲಿಕ ಮರಣ ಹೊಂದಿದ್ದರು. ಇದು ಸಾಕಷ್ಟು ಆಘಾತ ತಂದಿದೆ. ಕನ್ನಡ ಚಿತ್ರರಂಗಕ್ಕೆ ಇದರಿಂದ ಇನ್ನೂ ಹೊರಬರೋಕೆ ಆಗುತ್ತಿಲ್ಲ. ಈಗ ಅಮೋಘ ವರ್ಷ ಅವರು ಬಾಕಿ ಇರುವ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದ ದಟ್ಟ ಕಾನನದ ಒಳಗೆ ಇದನ್ನು ಚಿತ್ರೀಕರಿಸಲಾಗಿದೆ. ಪ್ರಕೃತಿ ಸೌಂದರ್ಯವನ್ನು, ವನ್ಯಜೀವಿಗಳ ಜೀವನವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಕೇವಲ ಟೀಸರ್ ನೋಡಿಯೇ ಜನರು ರೋಮಾಂಚನಗೊಳ್ಳುತ್ತಿದ್ದಾರೆ. ಕಣ್ಮನ ತಣಿಸುವಂತಹ ಛಾಯಾಗ್ರಹಣ ಎಲ್ಲರಲ್ಲೂ ಬೆರಗು ಮೂಡಿಸುತ್ತಿದೆ. ಇದು ಕೇವಲ ಆನ್ಲೈನ್ಗೆ ಸೀಮಿತವಲ್ಲ. ‘ಗಂಧದ ಗುಡಿ’ ಸಾಕ್ಷ್ಯಚಿತ್ರವು ಥಿಯೇಟರ್ನಲ್ಲಿ ಬಿಡುಗಡೆ ಆಗಲಿದೆ. 2022ರಲ್ಲಿ ಚಿತ್ರಮಂದಿರಗಳಲ್ಲಿ ಇದನ್ನು ತೆರೆಕಾಣಿಸಲು ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಗಂಧದಗುಡಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ: ಟ್ವೀಟ್ ಮೂಲಕ ಶುಭ ಹಾರೈಕೆ