Puneeth Rajkumar: ಪುನೀತ್ ಅವರಿಗೆ ಕೇವಲ ಕರ್ನಾಟಕ, ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಕೂಡ ಒಬ್ಬರು. ಸದ್ಯ ವಾರ್ನರ್ ಅವರು ಪುನೀತ್ ಅವರನ್ನು ನೆನೆದು ವಿಶೇಷವಾಗಿ ಗೌರವಿಸಿದ್ದು ಇದನ್ನು ಕಂಡು ಅಪ್ಪು ಅಭಿಮಾನಿಗಳು ಅವರಲ್ಲಿ ವಿಶೇಷ ಬೇಡಿಕೆ ಕೂಡ ಇಟ್ಟಿದ್ದಾರೆ.
Dec 07, 2021 | 7:38 AM
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಪುನೀತ್ ರಾಜ್ಕುಮಾರ್ ನಿಧನರಾಗಿ ಒಂದು ತಿಂಗಳು ಕಳೆದರೂ ಅವರ ನೆನಪಿನಿಂದ ಹೊರ ಬರಲು ಸಾಧ್ಯವಾಗುತ್ತಲೇ ಇಲ್ಲ. ಅಕ್ಟೋಬರ್ 29ರ ಕರಾಳ ಶುಕ್ರವಾರ ಈಗಲೂ ಸಹ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ದುಃಖವನ್ನೇ ತರಿಸುತ್ತದೆ. ಇಡೀ ಕರುನಾಡು ಪ್ರತಿದಿನ ಅಪ್ಪು ಅವರನ್ನು ನೆನದು ಕೊರಗುತ್ತಿದೆ. ಅವರ ಅಭಿಮಾನಿಗಳು ಇನ್ನೂ ಆ ಶಾಕ್ನಿಂದ ಹೊರಬರಲಾಗದೇ ನೋವು ತಿಂತಿದ್ದಾರೆ.
1 / 9
ಪುನೀತ್ ಅಭಿಮಾನಿಗಳು ಒಂದು ಕಡೆಯಾದರೆ, ಸಾಕಷ್ಟು ಗಣ್ಯರು ಈಗಲೂ ಪುನೀತ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಇತ್ತೀಚೆಗಷ್ಟೆ ಕಮಲ್ ಹಾಸನ್ ಅವರು ಬಿಗ್ಬಾಸ್ ವೇದಿಕೆಯಲ್ಲಿ ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದರು. ಇದೀಗ ಖ್ಯಾತ ಕ್ರಿಕೆಟಿಗರೊಬ್ಬರು ಪುನೀತ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ಆದರೆ, ಅವರು ಟೀಮ್ ಇಂಡಿಯಾ ಆಟಗಾರನಲ್ಲ.
2 / 9
ಪುನೀತ್ ಅವರಿಗೆ ಕೇವಲ ಕರ್ನಾಟಕ, ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಕೂಡ ಒಬ್ಬರು. ಸದ್ಯ ವಾರ್ನರ್ ಅವರು ಪುನೀತ್ ಅವರನ್ನು ನೆನೆದು ವಿಶೇಷವಾಗಿ ಗೌರವಿಸಿದ್ದಾರೆ. ಇದನ್ನು ಕಂಡು ಅಪ್ಪು ಅಭಿಮಾನಿಗಳು ಅವರಲ್ಲಿ ವಿಶೇಷ ಬೇಡಿಕೆ ಕೂಡ ಇಟ್ಟಿದ್ದಾರೆ.
3 / 9
ವಾರ್ನರ್ ಅವರಿಗೆ ಭಾರತದ ಮೇಲೆ ಪ್ರೀತಿ ಜಾಸ್ತಿ ಎಂದು ಎಲ್ಲರಿಗೂ ಗೊತ್ತಿದೆ. ಐಪಿಎಲ್ ಆಡಲು ಬೆಂಗಳೂರಿಗೆ ಬಂದಾಗ ಅವರಿಗೆ ಬೆಂಗಳೂರಿನ ಜನ ತೋರಿಸಿದ ಪ್ರೀತಿ ತುಂಬಾ ಇಷ್ಟ. ಪ್ರತಿ ಬಾರಿ ತಮ್ಮ ಟಿಕ್ಟಾಕ್ ಮೂಲಕವೇ ವಾರ್ನರ್ ರಂಜಿಸುತ್ತಿರುತ್ತಾರೆ. ಈ ಬಾರಿಯೂ ವಾರ್ನರ್ ಪುನೀತ್ ರಾಜ್ಕುಮಾರ್ ಅವರ ಬೊಂಬೆ ಹೇಳುತೈತೆ ಹಾಡಿಗೆ ಫೇಸ್ ಸ್ವಾಪ್ ಮಾಡಿ ಪೋಸ್ಟ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
4 / 9
ಹೌದು, ಅಪ್ಪು ಅವರ ಮುಖಕ್ಕೆ ಇವರ ಮುಖಕ್ಕೆ ಜೋಡಿಸಿ ಎಡಿಟ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ರೆಸ್ಪೆಕ್ಟ್ ಎಂದು ಬರೆದುಕೊಂಡು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದಕ್ಕೆ ಪುನೀತ್ ಅಭಿಮಾನಿಗಳು ಸಂತಸಗೊಂಡಿದ್ದು, ಪುನೀತ್ ಮೇಲೆ ಡೇವಿಡ್ ವಾರ್ನರ್ ಇಟ್ಟಿರುವ ಪ್ರೀತಿಗೆ ಫಿದಾ ಆಗಿದ್ದಾರೆ. ತಡವಾಗಿ ಆದರೂ ಪುನೀತ್ ಅವರನ್ನು ಸ್ಮರಣೆ ಮಾಡಿರೋದಕ್ಕೆ ಸಂತಸಗೊಂಡಿದ್ದಾರೆ.
5 / 9
ಡೇವಿಡ್ ವಾರ್ನರ್ ಪುನೀತ್ ರಾಜ್ ಕುಮಾರ್ ಕುರಿತಾಗಿ ಹಾಕಿರುವ ಈ ಪೋಸ್ಟ್ಗೆ 15 ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿದ್ದು, ಅಪ್ಪು ಅವರನ್ನು ಸ್ಮರಿಸಿದ ವಾರ್ನರ್ ಅವರಿಗೆ ಕೆಲವರು ಕೃತಜ್ಞತೆ ಸಲ್ಲಿಸಿದ್ದಾರೆ.
6 / 9
ಇದರ ಜೊತೆಗೆ ಅನೇಕ ಅಪ್ಪು ಹಾಗೂ ಆರ್ಸಿಬಿ ಅಭಿಮಾನಿಗಳು ಡೇವಿಡ್ ವಾರ್ನರ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ವಾರ್ನರ್ಗೆ ಆರ್ಸಿಬಿ ಸೇರುವಂತೆ ವಿಶೇಷ ಬೇಡಿಕೆ ಇಟ್ಟಿದ್ದಾರೆ.
7 / 9
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಯಾವುದೇ ಮಾಹಿತಿ ನೀಡಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಡೆದ ರಿಟೈನ್ ಪ್ರಕ್ರಿಯೆಯ ವೇಳೆ ವಾರ್ನರ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಬಿಡುಗಡೆ ಮಾಡಿತ್ತು.
8 / 9
ಹೀಗಾಗಿ ಈ ಬಾರಿ ಹರಾಜಿನಲ್ಲಿ ವಾರ್ನರ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಇವರನ್ನು ಖರೀದಿ ಮಾಡುತ್ತಾ ಎಂಬುದು ನೋಡಬೇಕಿದೆ. ಅಲ್ಲದೆ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಅವಶ್ಯತೆ ಕೂಡ ಇದ್ದು, ಇವರಿಗೆ ಅವರ ಅನುಭವ ಕೂಡ ಇದೆ.